ಕುದಿಯುವ ನೀರಿನ ಪಾತ್ರೆಯಲ್ಲಿ ಕುಳಿತ ಧ್ಯಾನಸ್ಥ ಹುಡುಗನ ವಿಡಿಯೋ ವೈರಲ್.: ಮ್ಯಾಜಿಕ್‌ ಟ್ರಿಕ್‌ ಎಂದ ಕೆಲವರು, ನಕಲಿ ಎಂದ ಹಲವರು

ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆದ ಸುದ್ದಿಯೆಂದರೆ ಬಾಲಕನೋರ್ವ ಕುದಿಯುತ್ತಿರುವ ನೀರಿನಲ್ಲಿ ಕುಳಿತಿದ್ದಾನೆ. ಕೇಸರಿ ಶಾಲು ಹೊದ್ದ ಬಾಲಕ ಧ್ಯಾನಸ್ಥನಾಗಿ ನೀರಿನ ದೊಡ್ಡ ಪಾತ್ರೆಯಲ್ಲಿ ಕುಳಿತಿರುವುದನ್ನು ನೋಡಬಹುದು. ಪಾತ್ರೆಯ ಕೆಳಗೆ ಬೆಂಕಿ ಹಚ್ಚಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ವಿಡಿಯೋ ಫುಲ್ ವೈರಲ್ ಆಗುತ್ತಿದ್ದಂತೆಯೇ ಈ ದೃಶ್ಯದ ಕುರಿತಾಗಿ ಪರ ವಿರೋಧ ಚರ್ಚೆಗಳು ಪ್ರಾರಂಭವಾಗಿದೆ.

30 ಸೆಕೆಂಡ್‌ಗಳ ಕ್ಲಿಪ್‌ನಲ್ಲಿ, ಕುದಿಯುವ ನೀರಿನ ಪಾತ್ರೆಯಲ್ಲಿ ಚಿಕ್ಕ ಹುಡುಗನು ಶಾಂತವಾಗಿ ಬೆಂಕಿಯ ಮೇಲೆ ಇಟ್ಟಿರುವ ದೊಡ್ಡ ಪಾತ್ರೆಯಲ್ಲಿ ಕೈಮುಗಿದು ಕುಳಿತಿದ್ದಾನೆ.ವಿಡಿಯೋದಲ್ಲಿ ಬಾಲಕ ಕೇಸರಿ ಬಣ್ಣದ ಶಾಲು ಹೊದ್ದು ಬಾಣಲೆಯಲ್ಲಿರುವ ನೀರಿನ ಒಳಗೆ ಕುಳಿತಿದ್ದಾನೆ. ನೀರಿನ ಪಾತ್ರೆಯನ್ನು ಹೂವುಗಳಿಂದ ಅಲಂಕರಿಸಲಾಗಿದೆ. ಕೆಳಗೆ ಬೆಂಕಿ ಹಚ್ಚಲಾಗಿದೆ. ಸುತ್ತಲೂ ಜನರು ಸೇರಿರುವುದು ವಿಡಿಯೋದಲ್ಲಿ ನೋಡಬಹುದು. ಪಾತ್ರೆಯಲ್ಲಿ ನೀರು ಕುದಿಯುತ್ತಿದ್ದರೂ, ಶಾಖವು ಹುಡುಗನ ಮೇಲೆ ಸಂಪೂರ್ಣವಾಗಿ ಪರಿಣಾಮ ಬೀರುವುದಿಲ್ಲ.
ವಿಡಿಯೋವನ್ನು ಟ್ವಿಟರ್​ನಲ್ಲಿ ಹಂಚಿಕೊಳ್ಳಲಾಗಿದ್ದು, ಸಂದೀಪ್ ಬಿಶ್ಟ್‌ ಎಂಬುವವರು ವಿಡಿಯೋ ಹರಿಬಿಟ್ಟಿದ್ದಾರೆ. ಇದೇ 2021ರ ಭಾರತ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋ ಹಂಚಿಕೊಳ್ಳಲಾಗಿದೆ. 1.3 ಮಿಲಿಯನ್​ಗೂ ಹೆಚ್ಚು ವೀಕ್ಷಣೆಗಳನ್ನು ವಿಡಿಯೋ ಪಡೆದುಕೊಂಡಿದೆ.
ನೆಟಿಜನ್‌ಗಳು ವಿಡಿಯೊವನ್ನು ನಕಲಿ ಎಂದು ಕರೆಯುತ್ತಾರೆ. ಕುದಿಯುವ ನೀರಿನ ಭ್ರಮೆಯನ್ನು ಸೃಷ್ಟಿಸಲು ವಾಟರ್‌ ಪಂಪ್ ಬಳಸಲಾಗಿದೆ ಎಂದು ಒಬ್ಬ ಬಳಕೆದಾರ ವಿವರಿಸಿದರೆ, ಇನ್ನೊಬ್ಬರು ಸರಳವಾದ ವೈಜ್ಞಾನಿಕ ವಿವರಣೆಯೊಂದಿಗೆ ಇದು ಸಾಮಾನ್ಯ ಮ್ಯಾಜಿಕ್ ಟ್ರಿಕ್ ಎಂದು ಹೇಳಿದ್ದಾರೆ.
ಇದು ಅತ್ಯುನ್ನತ ಕ್ರಮದ ಮೋಸವಾಗಿದೆ .ಯಾವುದೇ ರೀತಿಯಲ್ಲಿ ಉಗಿ ಉತ್ಪಾದನೆಯಾಗುವುದಿಲ್ಲ ಅಥವಾ ಹೂವುಗಳು ಕುದಿಯುವ ನೀರಿನಲ್ಲಿ ಇದ್ದ ಹಾಗೆಯೇ ಇದೆ. ಅದಕ್ಕೆಏನೂ ಆಗಿಲ್ಲ ಎಂದು ಮತ್ತೊಬ್ಬರು ಬರೆದಿದ್ದಾರೆ.
ವಿಡಿಯೊವನ್ನು ಯಾವಾಗ ಮತ್ತು ಎಲ್ಲಿ ಚಿತ್ರೀಕರಿಸಲಾಗಿದೆ ಎಂಬುದು ಸ್ಪಷ್ಟವಾಗಿಲ್ಲವಾದರೂ, ಕ್ಲಿಪ್‌ನ ಆವೃತ್ತಿಯನ್ನು ಯೂಟ್ಯೂಬ್‌ನಲ್ಲಿಯೂ ಪೋಸ್ಟ್ ಮಾಡಲಾಗಿದೆ.

ಪ್ರಮುಖ ಸುದ್ದಿ :-   ವೀಡಿಯೊ...| ಕಾಂಗ್ರೆಸ್ ನಾಯಕನ ʼಬಾಂಬ್ ಶೆಲ್ʼ : ಪಾಕಿಸ್ತಾನವನ್ನು ಗೌರವಿಸಿ...ಇಲ್ಲವಾದ್ರೆ ಅಣುಬಾಂಬ್ ಹಾಕ್ತಾರೆ ಎಂದ ಕಾಂಗ್ರೆಸ್ ನಾಯಕ ಮಣಿಶಂಕರ ಅಯ್ಯರ್...!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement