ಕರ್ನಾಟಕ ಬಿಜೆಪಿ ವಕ್ತಾರರು, ಪ್ರಕೋಷ್ಠಗಳಿಗೆ ಸಂಚಾಲಕರ ನೇಮಕ, ರಾಜ್ಯ ಬಿಜೆಪಿ ವಕ್ತಾರರಾಗಿ ಹಿರಿಯ ಪತ್ರಕರ್ತ ಹರಿಪ್ರಕಾಶ ಕೋಣೆಮನೆ ನೇಮಕ

ಬೆಂಗಳೂರು: ರಾಜ್ಯಾಧ್ಯಕ್ಷರಾದ ಬಿವೈ ವಿಜಯೇಂದ್ರ ಅವರು ರಾಜ್ಯ ಬಿಜೆಪಿಯ ಬಿಜೆಪಿ ಮುಖ್ಯ ವಕ್ತಾರರು ಮತ್ತು ವಕ್ತಾರರು ಮತ್ತು ವಿವಿಧ ಪ್ರಕೋಷ್ಠಗಳಿಗೆ ಸಂಚಾಲಕ ಹಾಗೂ ಸಹಸಂಚಾಲಕರನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ.
ಒಬ್ಬ ಮುಖ್ಯ ವಕ್ತಾರ ಹಾಗೂ 10 ಮಂದಿಯನ್ನು ವಕ್ತಾರರಾಗಿ ನೇಮಕ ಮಾಡಲಾಗಿದೆ.
ಮುಖ್ಯ ವಕ್ತಾರರಾಗಿ ಅಶ್ವತ್ಥ ನಾರಾಯಣ (ಮಾಜಿ ವಿಧಾನಪರಿಷತ್ ಸದಸ್ಯ) ನೇಮಕ ಮಾಡಲಾಗಿದೆ. ವಕ್ತಾರರಾಗಿ ಪತ್ರಕರ್ತರಾಗಿದ್ದ ಹರಿಪ್ರಕಾಶ ಕೊಣೆಮನೆ, ಚಲವಾದಿ ನಾರಾಯಣ ಸ್ವಾಮಿ, ತೇಜಸ್ವಿನಿ ಗೌಡ, ಕೆ.ಎಸ್ ನವೀನ, ಎಂ.ಜಿ ಮಹೇಶ, ಎಚ್‌.ಎನ್ ಚಂದ್ರಶೇಖರ, ನರೇಂದ್ರ ರಂಗಪ್ಪ, ಸುರಭಿ ಹೊದಿಗೆರೆ, ಅಶೋಕ ಕೆ.ಎಂ ಗೌಡ, ಎಚ್‌. ವೆಂಕಟೇಶ ದೊಡ್ಡೇರಿ ಅವರನ್ನು ನೇಮಕ ಮಾಡಲಾಗಿದೆ.

ಸಾಮಾಜಿಕ ಜಾಲತಾಣ ಸಂಚಾಲಕರಾಗಿ ಪ್ರಶಾಂತ ಮಾಕನೂರು, ಸಹ ಸಂಚಾಲಕರಾಗಿ ನರೇಂದ್ರ ಮೂರ್ತಿ ಅವರನ್ನು ನೇಮಕ ಮಾಡಲಾಗಿದೆ. ಮಾಹಿತಿ ತಂತ್ರಜ್ಞಾನ ವಿಭಾಗದ ಸಂಚಾಲಕರಾಗಿ ನಿತಿನ್‌ ರಾಜ ನಾಯಕ, ಸಹ ಸಂಚಾಲಕರಾಗಿ ಶ್ಯಾಮಲಾ ರಘುನಂದನ್ ,
ಮಾಧ್ಯಮ ವಿಭಾಗದ ಸಂಚಾಲಕರಾಗಿ ಕರುಣಾಕರ ಖಾಸಲೆ ಹಾಗೂ ಸಹ ಸಂಚಾಲಕರಾಗಿ ಪ್ರಶಾಂತ ಕೆಡಂಜಿ ಅವರನ್ನು ನೇಮಕ ಮಾಡಲಾಗಿದೆ. ವಿಜಯೇಂದ್ರ ಅಧ್ಯಕ್ಷರಾದ ಬಳಿಕ ವಿವಿಧ ಪ್ರಕೋಷ್ಠಗಳನ್ನು ಸಕ್ರಿಯಗೊಳಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ.

ಪ್ರಮುಖ ಸುದ್ದಿ :-   ಪ್ರಧಾನಿಯವರು ಪತ್ರಿಕಾಗೋಷ್ಠಿಗಳನ್ನು ಏಕೆ ನಡೆಸುವುದಿಲ್ಲ? : ಹೆಚ್ಚು ಸಲ ಕೇಳಿದ ಪ್ರಶ್ನೆಗೆ ಕೊನೆಗೂ ಉತ್ತರಿಸಿದ ನರೇಂದ್ರ ಮೋದಿ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement