ಸಿಎಂ ಬೊಮ್ಮಾಯಿಗೆ ಉತ್ತರ ಕರ್ನಾಟಕದ ಬಗ್ಗೆ ಮೂರು ಸವಾಲು ಮುಂದಿಟ್ಟ ಆಮ್‌ ಆದ್ಮಿ ಪಾರ್ಟಿ

ಹುಬ್ಬಳ್ಳಿ: ನೂತನ ಮುಖ್ಯಮಂತ್ರಿ ಮುಂದಿನ ಆರು ತಿಂಗಳಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿಗೆ ಸಮಗ್ರ ಯೋಜನೆ ರೂಪಿಸಲಿ.ಬಿಕೋ ಎನ್ನುತ್ತಿರುವ ಬೆಳಗಾವಿಯ ಸುವರ್ಣ ಸೌಧದಲ್ಲಿ ಮುಖ್ಯಮಂತ್ರಿಗಳ ಕಚೇರಿಯನ್ನು ಹಸ್ತಾಂತರಿಸುವ ಮೂಲಕ ಉತ್ತರ ಕರ್ನಾಟಕದಲ್ಲಿ ಸಾರ್ವತ್ರಿಕ ಬೆಳವಣಿಗೆಗೆ ನಾಂದಿ ಹಾಡಬೇಕು ಎಂದು ಆಮ್‌ ಆಮಿ ಪಕ್ಷದ (ಆಪ್‌) ರಾಜ್ಯ ವೀಕ್ಷಕರಾದ ರೋಮಿ ಭಾಟಿ, ರಾಜ್ಯ ಉಪಾಧ್ಯಕ್ಷರಾದ ಶಾಂತಲಾ ದಾಮ್ಲೆ ಮತ್ತು ಜಿಲ್ಲಾಧ್ಯಕ್ಷ ಸಂತೋಷ ನರಗುಂದ ಒತ್ತಾಯಿಸಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡಲೇ ತಮ್ಮ ಕಚೇರಿಯನ್ನು ಬೆಳಗಾವಿಯ ಸುವರ್ಣಸೌಧಕ್ಕೆ ವರ್ಗಾಯಿಸಿ ಉತ್ತರ ಕರ್ನಾಟಕ ಅಭಿವೃದ್ಧಿ ಗೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಉತ್ತರ ಕರ್ನಾಟಕದಿಂದಲೆ ಸೇರಿದ ನೂತನ ಮುಖ್ಯಮಂತ್ರಿಗಳಿಗೆ ಆಮ್ ಆದ್ಮಿ ಪಕ್ಷದಿಂದ ಈ ಕೆಳಗಿನ ಮೂರು ಸವಾಲುಗಳನ್ನು ಮುಂದಿಡಲು ಬಯಸುತ್ತದೆ. ಬಿಕೋ ಎನ್ನುತ್ತಿರುವ ಬೆಳಗಾವಿಯ ಸುವರ್ಣ ಸೌಧದಲ್ಲಿ ಮುಖ್ಯಮಂತ್ರಿಗಳ ಕಚೇರಿಯನ್ನು ಹಸ್ತಾಂತರಿಸುವ ಮೂಲಕ ಉತ್ತರ ಕರ್ನಾಟಕದಲ್ಲಿ ಸಾರ್ವತ್ರಿಕ ಬೆಳವಣಿಗೆಗೆ ನಾಂದಿ ಹಾಡಬೇಕು.
ಎರಡನೆಯದಾಗಿ ಎಷ್ಟೋ ವರ್ಷಗಳಿಂದ ಹೋರಾಟ ಮಾಡುತ್ತಿದ್ದರೂ, ಎರಡು ವರ್ಷಗಳಿಂದ ತಾಂತ್ರಿಕ ಅನುಮೋದನೆ ಸಿಕ್ಕ ಮೇಲೂ ಕೂಡ, ಕಳಸಾ-ಬಂಡೂರಿ ಯೋಜನೆ ಕಾರ್ಯಾರಂಭವಾಗದೆ ಉತ್ತರ ಕರ್ನಾಟಕದ ಜನತೆ ಕುಡಿಯುವ ನೀರಿನ ಸಮಸ್ಯೆಯಲ್ಲಿ ಒದ್ದಾಡುತ್ತಿದ್ದಾರೆ. ಈ ಭಾಗದವರೇ ಆದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಮೂಲಭೂತ ಸೌಕರ್ಯದ ಸಮಸ್ಯೆ ಈಗ ಬಗೆಹರಿಸಬೇಕು ಎಂದರು..
ಮೂರನೆಯದು ವಿದ್ಯಾಕಾಶಿಯೆಂದೆ ಕರೆಸಲ್ಪಡುವ ಧಾರವಾಡ ಜಿಲ್ಲೆ, ಉತ್ತರ ಕರ್ನಾಟಕದ ಮೂಲೆ ಮೂಲೆಯಿಂದ ಇಲ್ಲಿ ಬಂದು ವ್ಯಾಸಂಗ ಮಾಡಿ, ಇಲ್ಲಿ ಯಾವುದೇ ಉದ್ಯೋಗಾವಕಾಶ ಇಲ್ಲದ ಕಾರಣ ತಮ್ಮ ತವರೂರನ್ನು ಬಿಟ್ಟು ವಲಸೆ ಹೋಗಬೇಕಾದ ಪರಿಸ್ಥಿತಿ ಇದೆ. ಇನ್ಫೋಸಿಸ್ ಸಂಸ್ಥೆ ಕಾರ್ಯಾರಂಭ ಮಾಡಲು ಬೇಕಾದ ಕಟ್ಟಡ, ಮೂಲ ಸೌಕರ್ಯಗಳೆಲ್ಲವೂ ಇದ್ದರೂ, ಇದುವರೆಗೆ ಕಾರ್ಯಾರಂಭ ಮಾಡುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ತಕ್ಷಣ ಕಾರ್ಯಾರಂಭ ಮಾಡಬೇಕು ಎಂದು ಒತ್ತಾಯಿದರು.
ಆಮ್ ಆದ್ಮಿ ಪಕ್ಷವು ಉತ್ತರ ಕರ್ನಾಟಕದ ಜನತೆಯ ಪರವಾಗಿ ಈ ಮೂಲಕ ಮೇಲ್ಕಂಡ ಮೂರು ಸವಾಲುಗಳನ್ನು ಒಪ್ಪಿಕೊಂಡು ಬರುವ ಹತ್ತು ದಿನಗಳಲ್ಲಿ ಇವುಗಳನ್ನು ಪರಿಹರಿಸಲು ಬೇಕಾದ ಇಚ್ಛಾಶಕ್ತಿ ತೋರಿಸಿ ಕಾರ್ಯಾರಂಭ ಮಾಡಬೇಕು ಎಂದು ಆಗ್ರಹಿಸಿದರು.
ಒತ್ತಾಯಿಸಿ ಆಮ್ ಆದ್ಮಿ ಪಕ್ಷ 24 ತಾಸುಗಳ ಉಪವಾಸ ಮಾಡಿ ಮಾಜಿ ಮುಖ್ಯಮಂತ್ರಿಗಳಿಗೆ ಮನವಿ ಕೊಟ್ಟರೂ ಕಿವಿಗೊಡದೆ ಉತ್ತರ ಕರ್ನಾಟಕ ಮತ್ತು ಇಲ್ಲಿಯ ಜನತೆ ಅವರಿಗೆ ಲೆಕ್ಕಕ್ಕಿಲ್ಲವೆಂದು ಸಾರಿ ಹೇಳಿದ್ದಾರೆ. ಇದಕ್ಕಾಗಿ ಮಾನ್ಯ ಮುಖ್ಯಮಂತ್ರಿಗಳು ಕೈಗಾರಿಕಾ ಅಭಿವೃದ್ಧಿಗಾಗಿ ಅದರಲ್ಲೂ ವಿಶೇಷವಾಗಿ ಐಟಿಬಿಟಿ ಕಂಪನಿಗಳೂ ಇಲ್ಲಿ ಹೂಡಿಕೆ ಮಾಡಲು ತಕ್ಷಣವೇ ನೀಲನಕ್ಷೆ ಪ್ರಕಟಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಹು-ಧಾ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಅಶ್ವಿನ ಕುಬಸದಗೌಡರ, ಜಿಲ್ಲಾ ಜಂಟಿ ಕಾರ್ಯದರ್ಶಿಗಳಾದ ಶಾಮ ನರಗುಂದ ಮತ್ತಿತರುದ್ದರು.

ಪ್ರಮುಖ ಸುದ್ದಿ :-   ಕೆಎಎಸ್ ಅಧಿಕಾರಿ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ; ಕಾರಣ ನಿಗೂಢ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement