ಕುಮಟಾ : ಉತ್ತರ ಕನ್ನಡದ ಕರಾವಳಿ ತೀರದಲ್ಲಿ ಧಾರಾಕಾರ ಮಳೆಯಾಗುತ್ತಿದೆ.
ಶನಿವಾರದಿಂದ ಎಡೆ ಬಿಡದೆ ಮಳೆ ಸುರಿಯುತ್ತಿದೆ. ಮೊಳಕೆ ಬಿತ್ತನೆ ಮಾಡಿರುವ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ವಿಪರೀತ ಮಳೆ ಸುರಿಯುತ್ತಿರುವುದರಿಂದ ಬಿತ್ತನೆ ಮಾಡಿರುವ ಭತ್ತದ ಬೀಜ ತುಂಬಿರುವ ನೀರಿನಲ್ಲಿ ತೇಲಿ ಹೋಗುತ್ತಿದೆ. ಅಳಿದುಳಿದ ಬೀಜವು ಹೆಚ್ಚಿರುವ ನೀರಿನಿಂದ ಕೊಳೆತು ಹೋಗುವ ಭಯದಲ್ಲಿ ರೈತರಿದ್ದಾರೆ. ನೆರೆಹಾವಳಿ ಭೀತಿ ಇದ್ದು ತಾಲೂಕಾಡಳಿತವು ಜನರಿಗೆ ಉಂಟಾಗುವ ಸಮಸ್ಯೆ ತಪ್ಪಿಸುವದಕ್ಕಾಗಿ ಪ್ರತ್ಯೇಕ ತಂಡ ರಚನೆ ಮಾಡಿ ಸಜ್ಜಾಗಿದೆ.
ಸೋಮವಾರ ತಹಶೀಲ್ದಾರ್ ಉಮೇಶ್ ಅವರು ಸತತ ಮೂರು ಸಭೆ ನಡೆಸಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. ಪ್ರವಾಹ ಸಂಭವನೀಯ ಪ್ರದೇಶ ವಾದ ದೀವಗಿ. ಕೊಡ್ಕಣಿ. ಮೊಸಳೆ ಸಾಲು. ಹೆಗಡೆ ತಾರಿ. ಲುಕ್ಕೇರಿ, ಅಘನಾಶಿನಿ ತೀರ ಮೊದಲಾದ ಕಡೆಗಳಲ್ಲಿ ಕಂದಾಯ ನಿರೀಕ್ಷಕರು ಮತ್ತು ಅಧಿಕಾರಿಗಳನ್ನು ಸ್ಥಳಕ್ಕೆ ಕಳಿಸಿ ಪರಿಶೀಲನೆ ನಡೆಸಿರುವುದಾಗಿ ತಹಸೀಲ್ದಾರ್ ತಿಳಿಸಿದರು.
ಅರಬ್ಬಿ ಸಮುದ್ರವು ಉಕ್ಕೇರುತ್ತಿದ್ದು, ತೆರೆಗಳ ಅಬ್ಬರ ಜೋರಾಗಿದೆ ಕೆಲವು ಕಡೆಯಲ್ಲಿ ಕಡಲು ಕೊರೆತ ಆರಂಭವಾಗಿದೆ. ಸಮುದ್ರದ ಅಬ್ಬರ ಭಯ ತರಿಸುತ್ತಿದೆ. ಮೀನುಗಾರರ ದೋಣಿ ಶೆಡ್ ತನಕವೂ ಸಮುದ್ರದ ಅಲೆ ಅಪ್ಪಳಿಸುತ್ತಿದೆ. ಅಘನಾಶಿನಿ ನದಿ, ಹೊಳೆ ಇತ್ಯಾದಿ ತೀರ ಪ್ರದೇಶದ ಜನರಿಗೆ ಎಚ್ಚರಿಕೆಯಿಂದ ಇರುವಂತೆ ತಿಳಿಸಲಾಗಿದೆ ಎಂದು ಅವರು ತಿಳಿಸಿದರು


ನಿಮ್ಮ ಕಾಮೆಂಟ್ ಬರೆಯಿರಿ