ಮೈಸೂರು : ವಿಧಾನ ಪರಿಷತ್ತಿನ ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು ಜೆಡಿಎಸ್-ಬಿಜೆಪಿ ಅಭ್ಯರ್ಥಿ ಜೆಡಿಎಸ್ನ ಭೋಜೇಗೌಡ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಮತ ಎಣಿಕೆ ಪ್ರಕ್ರಿಯೆ ಮುಕ್ತಾಯವಾಗಿದ್ದು, ಮೊದಲ ಪ್ರಾಶಸ್ತ್ಯ ಮತದಲ್ಲೇ ಭೋಜೇಗೌಡ ಅವರು 5267 ಮತಗಳ ಭಾರಿ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಒಟ್ಟು ಚಲಾವಣೆ ಆಗಿದ್ದು 19479 ಮತಗಳು 18,658 ಮತಗಳು ಸಿಂಧು ಮತಗಳಾಗಿವೆ.
ಮೊದಲ ಪ್ರಾಶಸ್ತ್ಯಕ್ಕೆ 9,3330 ಖೋಟಾ ನಿಗದಿಯಾಗಿತ್ತು. ಭೋಜೇಗೌಡ ಅವರು 9829 ಮತಗಳಿಗೆ ಮೊದಲ ಪ್ರಾಶಸ್ತ್ಯ ಮತಗಳಲ್ಲೇ ಗೆಲುವು ಸಾಧಿಸಿದರು. ಕಾಂಗ್ರೆಸ್ ಅಭ್ಯರ್ಥಿ ಕೆ.ಕೆ. ಮಂಜುನಾಥ 4562 ಮತಗಳನ್ನ ಪಡೆದು ಸೋಲನುಭವಿಸಿದರು.
ನೈರುತ್ಯ ಪದವೀಧರರ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಮುಂದೆ…
ನೈರುತ್ಯ ಪದವೀಧರರ ಕ್ಷೇತ್ರ ಮತ ಎಣಿಕೆ ನಡೆಯುತ್ತಿದ್ದು ಇದುವರೆಗೂ 14 ಸಾವಿರ ಮತಗಳ ಎಣಿಕೆಯಾಗಿದೆ. ಮೈತ್ರಿ ಅಭ್ಯರ್ಥಿಯಾದ ಬಿಜೆಪಿಯ ಧನಂಜಯ ಸರ್ಜಿ ಮುಂದಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ