ದತ್ತು ಮಗಳ ಮೇಲೆ ಅತ್ಯಾಚಾರದ ಆರೋಪ: ಪದ್ಮಶ್ರೀ ಪುರಸ್ಕೃತಗೆ ನ್ಯಾಯಾಂಗ ಬಂಧನ​​

ಉತ್ತರ ಲಖಿಂಪುರ (ಅಸ್ಸಾಂ): ಅಸ್ಸಾಂನ ಲಖಿಂಪುರ ಜಿಲ್ಲೆಯ ನ್ಯಾಯಾಲಯವು ಶುಕ್ರವಾರ ಖ್ಯಾತ ನವೋದ್ಯಮಿ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಉದ್ಧಬ್‌ಕುಮಾರ್ ಭಾರಾಲಿ ತಾವು ದತ್ತು ತೆಗೆದುಕೊಂಡಿದ್ದ ಅಪ್ರಾಪ್ತ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಅವರ ಮಧ್ಯಂತರ ನಿರೀಕ್ಷಣಾ ಜಾಮೀನನ್ನು ಗುವಾಹತಿ ಹೈಕೋರ್ಟ್ ರದ್ದುಗೊಳಿಸಿದ ಒಂದು ದಿನದ ನಂತರ, ಉತ್ತರ ಲಖಿಂಪುರ ಪಟ್ಟಣದಲ್ಲಿ ಜಿಲ್ಲಾ ವಿಶೇಷ ನ್ಯಾಯಾಧೀಶರಾದ ರಸ್ಮಿತಾ ದಾಸ್ ಅವರ ಮುಂದೆ ಭಾರಾಲಿ ಶರಣಾದರು.
ನ್ಯಾಯಾಲಯವು ಭಾರಾಳಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿತು, ನಂತರ ಅವರನ್ನು ಉತ್ತರ ಲಖಿಂಪುರದ ಜಿಲ್ಲಾ ಕಾರಾಗೃಹಕ್ಕೆ ಕರೆದೊಯ್ಯಲಾಯಿತು.
ವಿಜ್ಞಾನ ಮತ್ತು ಇಂಜಿನಿಯರಿಂಗ್ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳಿಗಾಗಿ 2019ರಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದಿರುವ ಭಾರಾಲಿ, ತಾನು ಪಿತೂರಿಯ ಬಲಿಪಶು ಎಂದು ಹೇಳಿಕೊಂಡಿದ್ದು, ಅದರ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಹೇಳಿದ್ದಾರೆ.
ಗುರುವಾರ, ಗುವಾಹತಿ ಹೈಕೋರ್ಟ್ ಭಾರಾಲಿಗೆ ಅವರು ಪೋಷಣೆ ಮಾಡುತ್ತಿದ್ದ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಕ್ಕಾಗಿ ನೀಡಲಾಗಿದ್ದ ಮಧ್ಯಂತರ ನಿರೀಕ್ಷಣಾ ಜಾಮೀನನ್ನು ರದ್ದುಗೊಳಿಸಿದ್ದು, ಅವರ ಕಸ್ಟಡಿ ವಿಚಾರಣೆ “ಅಗತ್ಯ” ಎಂದು ತಿಳಿಸಿದ್ದಾರೆ.
ಅರ್ಜಿದಾರರು ಮತ್ತು ರಾಜ್ಯದ ಪರ ವಕೀಲರ ವಾದವನ್ನು ಆಲಿಸಿದ ಹೈಕೋರ್ಟ್ ನ್ಯಾಯಮೂರ್ತಿ ಹಿತೇಶಕುಮಾರ್ ಶರ್ಮಾ ಅವರು ಎಫ್‌ಐಆರ್‌ನಲ್ಲಿ ಮಾಡಲಾದ ಆರೋಪಗಳನ್ನು ಗಮನದಲ್ಲಿಟ್ಟುಕೊಂಡು ಪ್ರಕರಣದ ತನಿಖೆಯ ಉದ್ದೇಶಕ್ಕಾಗಿ ಭಾರಾಲಿಯ ಕಸ್ಟಡಿ ವಿಚಾರಣೆ “ಅಗತ್ಯ” ಎಂದು ಗಮನಿಸಿದರು.
ನ್ಯಾಯಮೂರ್ತಿ ಶರ್ಮಾ ಅವರು ಆದೇಶವನ್ನು ನೀಡುವಾಗ, ಪ್ರಕರಣದ ಡೈರಿ ಮತ್ತು ಅಪ್ರಾಪ್ತ ಸಂತ್ರಸ್ತೆ ಮತ್ತು ಇತರ ಇಬ್ಬರು ಅಪ್ರಾಪ್ತ ಸಾಕ್ಷಿಗಳ ಹೇಳಿಕೆಗಳನ್ನು ಅವಲಂಬಿಸಿದ್ದಾರೆ, ಅವರು “ಅರ್ಜಿದಾರರು ಸಂತ್ರಸ್ತ ಬಾಲಕಿಯೊಂದಿಗೆ ಮಾತ್ರವಲ್ಲದೆ ಇತರ ಕೆಲವರೊಂದಿಗೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಭಾರತೀಯ ದಂಡ ಸಂಹಿತೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಉತ್ತರ ಲಖಿಂಪುರ ಪೊಲೀಸ್ ಠಾಣೆಯಲ್ಲಿ ಕಳೆದ ವರ್ಷ ಡಿಸೆಂಬರ್ 23 ರಂದು ಸುಮಾರು 150 ಆವಿಷ್ಕಾರಗಳ ಹೆಗ್ಗಳಿಕೆಗೆ ಪಾತ್ರವಾಗಿರುವ ಭಾರಾಲಿ ಅವರು ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು.ರಜಾಕಾಲದ ಪೀಠದಿಂದ ಡಿಸೆಂಬರ್ 28 ರಂದು ನವೋದ್ಯಮಿಗೆ ಬಂಧನ ಪೂರ್ವ ಜಾಮೀನು ನೀಡಲಾಯಿತು.
ನಾನು ಪಿತೂರಿಯ ಬಲಿಪಶು. ನನ್ನ ಜಾಮೀನು ಅರ್ಜಿ ತಿರಸ್ಕೃತಗೊಂಡಿದ್ದರಿಂದ ಶರಣಾಗುವುದನ್ನು ಬಿಟ್ಟು ನನಗೆ ಬೇರೆ ದಾರಿಯಿಲ್ಲ. ನಾನು ಇಂದು ಹೋಗಿ ಸಿಜೆಎಂ ಮುಂದೆ ಹಾಜರಾಗುತ್ತೇನೆ ಎಂದು ಜಿಲ್ಲಾ ನ್ಯಾಯಾಲಯಕ್ಕೆ ಹೋಗುವ ಮೊದಲು ಭರಾಲಿ ಉತ್ತರ ಲಖಿಂಪುರ ನಿವಾಸದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಪ್ರಮುಖ ಸುದ್ದಿ :-   ಸೇನಾಧಿಕಾರಿ ಸೋಫಿಯಾ ಕುರೇಷಿ ಬಗ್ಗೆ ವಿವಾದಾತ್ಮಕ ಹೇಳಿಕೆ : ಮಧ್ಯಪ್ರದೇಶ ಸಚಿವನ ವಿರುದ್ಧ ಎಫ್ಐಆರ್ ದಾಖಲಿಸಲು ಹೈಕೋರ್ಟ್ ಆದೇಶ

 

 

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement