ಮುಂಬೈ : ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಮೇ 23ರಂದು ಘೋಷಿಸಿದ ಪ್ರಕಾರ ಎರಡು ಸಾವಿರ ಮುಖಬೆಲೆಯ ನೋಟುಗಳ ಬಳಕೆ ಸೆಪ್ಟೆಂಬರ್ 30ಕ್ಕೆ ಕೊನೆಗೊಳ್ಳಲಿದೆ. ಈ ನೋಟುಗಳನ್ನು ಬ್ಯಾಂಕಿಗೆ ಹಿಂದಿರುಗಿಸಲು ಇನ್ನು ಕೇವಲ ಐದು ದಿನಗಳು ಮಾತ್ರ ಬಾಕಿಯಿದೆ.
ವರದಿಗಳ ಪ್ರಕಾರ, ದೇಶದಾದ್ಯಂತ ಇನ್ನೂ 2,400 ಕೋಟಿ ರೂ.ಗಳ ಮೌಲ್ಯದ ನೋಟುಗಳು ಚಲಾವಣೆಯಲ್ಲಿದೆ. ಸೆಪ್ಟೆಂಬರ್ 1ರವರೆಗೆ 3.56 ಟ್ರಿಲಿಯನ್ ನೋಟುಗಳು ಬ್ಯಾಂಕ್ ಗಳಿಗೆ ಜಮಾ ಆಗಿತ್ತು. ಕೇವಲ ಶೇ. 7ರಷ್ಟು ನೋಟುಗಳು ಮಾತ್ರ ಚಲಾವಣೆಯಲ್ಲಿತ್ತು.
ಸದ್ಯ ಚಲಾವಣೆಯಲ್ಲಿ ಇರುವ ನೋಟುಗಳನ್ನು ಸೆಪ್ಟೆಂಬರ್ 30ರ ಒಳಗಾಗಿ ಬ್ಯಾಂಕ್ಗಳಲ್ಲಿ ಠೇವಣಿ ಇಡುವಂತೆ ಅಥವಾ ಬೇರೆ ಮುಖಬೆಲೆಯ ನೋಟುಗಳೊಂದಿಗೆ ಬದಲಾಯಿಸಿಕೊಳ್ಳುವಂತೆ ಆರ್ಬಿಐ ಸೂಚನೆ ನೀಡಿದೆ.
ಸೆ.30ರವರೆಗೆ ಆರ್ ಬಿಐ ನ 19 ಪ್ರಾದೇಶಿಕ ಕಚೇರಿಗಳು ಮತ್ತು ಸಮೀಪದ ಬ್ಯಾಂಕ್ ಗಳಲ್ಲಿ ಸಾರ್ವಜನಿಕರು ತಮ್ಮಲ್ಲಿರುವ 2 ಸಾವಿರ ಮುಖಬೆಲೆಯ ನೋಟುಗಳನ್ನು ಬದಲಾಯಿಸಿಕೊಳ್ಳಬಹುದು. ಆದಾಯ ತೆರಿಗೆ ಕಾಯ್ದೆಯ 114ಬಿ ಅಡಿಯಲ್ಲಿ ₹50 ಸಾವಿರ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಹಣ ಡೆಪಾಸಿಟ್ ಮಾಡಬೇಕಾದರೆ ಗ್ರಾಹಕರು ತಮ್ಮ ಪಾನ್ ಸಂಖ್ಯೆಯನ್ನು ನೀಡಬೇಕಾಗಿರುವುದು ಕಡ್ಡಾಯವಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ