ಭಾರತ ಸ್ವಾತಂತ್ರ್ಯ ಸಂಗ್ರಾಮದ ವಿಶಿಷ್ಟ ಹುತಾತ್ಮರ ಅನ್ವೇಷಣೆಯಾಗಲಿ: ಡಾ.ಅಜಿತ ಪ್ರಸಾದ

ಧಾರವಾಡ: ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅನೇಕ ವೀರರು ಎಲೆಮರೆಯ ಕಾಯಿಯಂತೆ ವಿಶಿಷ್ಟವಾಗಿ ಹೋರಾಟ ಮಾಡಿ ಸ್ವಾತಂತ್ರ್ಯದ ಕಹಳೆಯನ್ನು ಊದಿದ್ದಾರೆ. ಬ್ರಿಟೀಷರ ದೌರ್ಜನ್ಯವನ್ನು ಧೈರ್ಯದಿಂದ ಎದುರಿಸಿದ ಅನೇಕ ಚೇತನಗಳು ನಿಜಕ್ಕೂ ಬೆಳಕಿಗೆ ಬರಬೇಕಿದೆ ಎಂದು ಕಾಲೇಜಿನ ಪ್ರಾಚಾರ್ಯರಾದ ಡಾ. ಅಜಿತ್ ಪ್ರಸಾದ್ ಹೇಳಿದರು.
ಭಾರತ ಸರ್ಕಾರ ಹಮ್ಮಿಕೊಂಡಿರುವ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಧಾರವಾಡದ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯಲ್ಲಿ ನಡೆದ ಒಂದು ದಿನದ ರಾಷ್ಟ್ರೀಯ ವೆಬಿನಾರ್ ಉದ್ಘಾಟಿಸಿ ಅವರು ಮಾತಾಡಿದರು.
ದೇಶದ ಸ್ವಾತಂತ್ರ್ಯದ ವಿಚಾರ ಬಂದಾಗ ನಾವು ಕೇವಲ ಬೆರಳೆಣಿಕೆಯಷ್ಟು ಹುತಾತ್ಮರನ್ನು ಮಾತ್ರ ನೆನೆಯುತ್ತೇವೆ. ಆದರೆ ಅವರಷ್ಟೇ ದೇಶಭಕ್ತಿಯನ್ನು ಮೆರೆದ ಹೋರಾಟಗಾರರನ್ನು ನಾವು ಇಂದು ಗುರುತಿಸಿ ಅವರ ಆದರ್ಶಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಲು ಪ್ರಯತ್ನ ಪಡೆಬೇಕಾಗಿದೆ. ಈ ಪ್ರಯತ್ನಕ್ಕೆ ಇಂತಹ ವೆಬಿನಾರಗಳು ಹೆಚ್ಚು ಅನುಕೂಲವಾಗುತ್ತವೆ ಎಂದು ಹೇಳಿದರು.
ಇತಿಹಾಸ ಪ್ರಾಧ್ಯಾಪಕರಾಗಿರುವ ಡಾ. ಆರ್. ವಿ ಚಿಟಗುಪ್ಪಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿ, ಭಾರತದ ಸ್ವಾತಂತ್ರ ಹೋರಾಟದಲ್ಲಿ ಸುಪ್ತವಾಗಿ ಉಳಿದ ಅನೇಕ ಹುತಾತ್ಮರ ಬಗ್ಗೆ ವಿವರಿಸಿದರು. ವಿ. ಡಿ. ಸಾವರ್ಕರ್, ನಾನಾಸಾಹೇಬ್, ರಾಘವೇಂದ್ರ ಕಡಪಾ, ಭಿಕಾಜಿ ಕಾಮಾ, ಆನಂದಿಬಾಯಿ ಅವರಂತಹ ಅಪ್ರತಿಮ ಹೋರಾಟಗಾರರ ಬಗ್ಗೆ ಉಲ್ಲೇಖಿಸಿದರು ಅನೇಕ ದೃಷ್ಟಾಂತಗಳೊಂದಿಗೆ ಭಾರತದ ಭವ್ಯ ಸಾಂಸ್ಕೃತಿಕ ಪರಂಪರೆಯ ಬಗ್ಗೆ ಮಾತನಾಡಿದರು.
ಭಾರತದ ವಿಶಿಷ್ಟ ಸಾಂಸ್ಕೃತಿಕ ಘನತೆಯ ಕಳಶಪ್ರಾಯರಾದ ಆರ್ಯಭಟ, ವರಾಹಮಿಹಿರ, ಚರಕರಂತಹ ಅದ್ವಿತೀಯ ಸಾಧಕರನ್ನು ಸ್ಮರಿಸಿದರು ಕೊನೆಗೆ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸಿದರು
ವಿವಿಧ ಭಾಗಗಳಿಂದ ೧೨೨ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಂಸ್ಥೆಯ ಅಧ್ಯಾಪಕರುಗಳಾದ ಪ್ರೊ. ನರಸಿಂಹ. ಬಿ. ಸ್ವಾಗತಿಸಿದರು. ಪ್ರವೀಣ್ ಕೊರ್ಲಹಳ್ಳಿ ಪರಿಚಯಿಸಿದರು. ವಿಭಾ ಮುಗುಳಿ ವಂದಿಸಿದರು. ಶ್ರೀದೇವಿ ಇನಾಮದಾರ ನಿರೂಪಿಸಿದರು. ಬಿ. ಜೆ. ಕುಂಬಾರ ಹಾಗೂ ರಜನಿ ತಾಳಿಕೋಟಿ ಉಪಸ್ಥಿತರಿದ್ದರು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement