ಕಾರವಾರ: ಚಲಿಸುತ್ತಿರುವ ರೈಲಿನಿಂದ ಬಿದ್ದ ವ್ಯಕ್ತಿ: ಕ್ಷಣಾರ್ಧದಲ್ಲಿ ಬಚಾವ್‌ ಮಾಡಿದ ಪೊಲೀಸ್‌-ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಕಾರವಾರ: ರೈಲ್ವೆ ಬೋಗಿಯಿಂದ ರೈಲಿನಡಿ ಆಯ ತಪ್ಪಿ ಬೀಳುತಿದ್ದ ಪ್ರಯಾಣಿಕರೊಬ್ಬರನ್ನು ಕಾರವಾರದ ಶಿರವಾರಡ ರೈಲ್ವೆ ನಿಲ್ದಾಣದಲ್ಲಿ ಸಾವಿನ ದವಡೆಯಿಂದ ಪಾರು ಮಾಡಿದ ಘಟನೆ ನಡೆದಿದೆ.
ಬೆಂಗಳೂರು ಮೂಲದ ಕೇಂದ್ರ ರಕ್ಷಣಾ ಇಲಾಖೆಯ ಅಧಿಕಾರಿ ಬಿ.ಎಂ.ದೇಸಾಯಿ ಅವರನ್ನು ರೈಲ್ವೆ ಪೊಲೀಸರು ಅಪಾಯದಿಂದ ರಕ್ಷಿಸಿದ್ದಾರೆ.
ಪಂಚಗಂಗಾ ಎಕ್ಸ್ ಪ್ರಸ್ ರೈಲಿನಲ್ಲಿ ಪ್ರಯಾಣಿಸುತಿದ್ದ ವೇಳೆ ಕಾರವಾರದ ಶಿರವಾಡ ರೈಲ್ವೆ ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಯತ್ನಿಸಿದಾಗ  ಪ್ಲಾಟ್‌ಫಾರ್ಮಿನಲ್ಲಿ ಆಯ ತಪ್ಪಿ ಕೆಳಗೆ ಬಿದ್ದಿದ್ದಾರೆ. ಅವರು ಬೀಳುತ್ತಿರುವುದನ್ನು ಗಮನಿಸಿದ ಅಲ್ಲಿನ ರೈಲ್ವೆ ಸಿಬ್ಬಂದಿ ನರೇಶ ಎಂಬವರು ತಕ್ಷಣವೇ ಧಾವಿಸಿ ಬಂದು ಅವರನ್ನು ಹೊರಗೆಳೆದು ರೈಲ್ವೆ ಕೆಳಗಡೆ ಸಿಲುಕುವುದನ್ನು ತಪ್ಪಿಸಿದ್ದಾರೆ.

ರೈಲಿನಲ್ಲಿ ಸೀಟು ಕಾದಿರಿಸಿ ತಮ್ಮ ಲಗೇಜು ತೆಗೆದುಕೊಳ್ಳಲು ರೈಲಿನಲ್ಲಿ ಇಳಿಯುವಾಗ ರೈಲು ಮುಂದೆ ಸಾಗಿದ್ದರಿಂದ ಈ ಘಟನೆ ನಡೆದಿದೆ. ಘಟನೆಯ ವಿಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ರಕ್ಷಣೆ ಮಾಡಿರುವ ವಿಡಿಯೊವನ್ನು ಕೊಂಕಣ ರೈಲ್ವೆ ಇಲಾಖೆ ಬಿಡುಗಡೆ ಮಾಡಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement