ತಾಪಂ ವ್ಯವಸ್ಥೆ ರದ್ದತಿಗೆ ರಾಜ್ಯ ಸರ್ಕಾರ ಚಿಂತನೆ: ಈಶ್ವರಪ್ಪ

ಬೆಂಗಳೂರು: ರಾಜ್ಯದಲ್ಲಿ ೩ ಹಂತದ ಪಂಚಾಯತ್ ರಾಜ್ ವ್ಯವಸ್ಥೆ ಬದಲಾಯಿಸಿ ೨ ಹಂತದ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೊಳಿಸುವ ಸಂಬಂಧ ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಕೈಗೊಂಡು ಸಂವಿಧಾನ ತಿದ್ದುಪಡಿಯ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್   ಖಾತೆ ಸಚಿವ ಕೆ. ಎಸ್. ಈಶ್ವರಪ್ಪ ವಿಧಾನಸಭೆಗೆ ತಿಳಿಸಿದರು.
ಶೂನ್ಯ ವೇಳೆಯಲ್ಲಿ ಬಿಜೆಪಿ ಶಾಸಕ ಕುಮಾರಬಂಗಾರಪ್ಪ ಸೇರಿದಂತೆ ಹಲವು ಸದಸ್ಯರ ಪ್ರಸ್ತಾಪಕ್ಕೆ ಉತ್ತರಿಸಿದ ಅವರು, ಸಂವಿಧಾನದ ೨೪೩ನೇ ಪರಿಚ್ಛೇದ, ೭೩ನೇ ವಿಧಿಯ ತಿದ್ದುಪಡಿಯಂತೆ ರಾಜ್ಯದಲ್ಲಿ ಈಗ ೩ ಹಂತದ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಯಲ್ಲಿದೆ. ಈ ವ್ಯವಸ್ಥೆ ಬದಲಿಸಿ ೨ ಹಂತದ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೊಳಿಸಬೇಕಾದರೆ ಸಂವಿಧಾನದ ತಿದ್ದುಪಡಿಯಾಗಬೇಕು. ಹಾಗಾಗಿ ಈ ಬಗ್ಗೆ ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಂಡು ಕೇಂದ್ರಕ್ಕೆ ಪ್ರಸ್ತಾವನೆ ಕಳುಬಹಿಸಲಾಗುವುದು ಎಂದರು.
ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ತಾಲೂಕು ಪಂಚಾಯತ ವ್ಯವಸ್ಥೆ ಕೈಬಿಟ್ಟು ೨ ಹಂತದ ಪಂಚಾಯ್ತಿ ವ್ಯವಸ್ಥೆ ಸಾಕು ಎಂಬುದು ತಮ್ಮ ಗಮನಕ್ಕೂ ಬಂದಿದೆ. ಹಲವು ಸದಸ್ಯರು ಈ ಬಗ್ಗೆ ಪ್ರಸ್ತಾಪಿಸಿದ್ದಾರೆ. ಈ ಬಗ್ಗೆ ಸಂಪುಟದಲ್ಲಿ ಚರ್ಚಿಸಿ ಒಪ್ಪಿಗೆ ಪಡೆದ ನಂತರ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು ಎಂದರು.
ತಾಲ್ಲೂಕು ಪಂಚಾಯ್ತಿಯಲ್ಲಿ ಬಲ ಇಲ್ಲ ಎಂದು ಕೆಲ ತಾಪಂ ಸದಸ್ಯರು ಗ್ರಾಪಂ ಚುನಾವಣೆಗೂ ನಿಂತ ಉದಾಹರಣೆಗಳಿವೆ ಎಂದ ಅವರು,
ಈ ಹಂತದಲ್ಲಿ ಮಧ್ಯ ಪ್ರವೇಶಿಸಿ ಮತಾನಾಡಿದ ಸಭಾದ್ಯಕ್ಷರು ಈ ಬಗ್ಗೆ ಸದನದಲ್ಲಿ ವಿಶೇಷ ಚರ್ಚೆ ಮಾಡೋಣ, ಇದಕ್ಕೆ ಗಂಬೀರ ಚರ್ಚೆ ನಡೆಯಬೇಕು. . ರಮೇಶ್‌ಕುಮಾರ್ ವರದಿಯೂ ೨ ಹಂತದ ಪಂಚಾಯತ್ ರಾಜ್ ವ್ಯವಸ್ಥೆಗೆ ಪೂರಕವಾಗಿದೆ. ವಿಶೇಷ ಚರ್ಚೆ ನಡೆಸಬೇಕಿದೆ ಎಂದರು.
ಸಭಾಧ್ಯಕ್ಷರ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಸನದದಲ್ಲಿ ಚರ್ಚೆ ಅಗತ್ಯವಿಲ್ಲ ಎಂಬುದು ನನ್ನ ಭಾವನೆ. ಸಂಪುಟದಲ್ಲಿ ತೀರ್ಮಾನ ಕೈಗೊಂಡು ಕೇಂದ್ರಕ್ಕೆ ಕಳುಹಿಸಲು ಅವಕಾಶವಿದೆ ಎಂದರು.
ಆಗ ಸಭಾಧ್ಯಕ್ಷರು ಇಲ್ಲ, ಇದು ಗಂಭೀರ ವಿಚಾರ. ಚರ್ಚೆ ಮಾಡೋಣ ಸಾಧ್ಯವಾದರೆ ನಾಳೆ ಚರ್ಚೆಯನ್ನು ಕೈಗೆತ್ತಿಕೊಳ್ಳೋಣ ಎಂದರು.
ಜೆಡಿಎಸ್‌ನ ನಾಡಗೌಡ, ಈ ಹಿಂದೆ ಇದ್ದ ೨ ಹಂತದ ಪಂಚಾಯತ್ ರಾಜ್ಯ ವ್ಯವಸ್ಥೆ ಉತ್ತಮ. . ಕೆಲವೆಡೆ ಒಂದೇ ರಸ್ತೆ ೨-೩ ಬಿಲ್‌ಗಳನ್ನು ಮಾಡಿ ದುಡ್ಡು ಹೊಡೆಯಲು ಅವಕಾಶವಾಗುತ್ತಿದೆ. ೨ ಹಂತಗಳ ಪಂಚಾಯತ್ ರಾಜ್ ವ್ಯವಸ್ಥೆಯನ್ನೇ ಜಾರಿಗೊಳಿಸಿ ಎಂದು ಒತ್ತಾಯಿಸಿದರು.

ಪ್ರಮುಖ ಸುದ್ದಿ :-   ಮಾಜಿ ಸಚಿವ ಎಚ್.ಡಿ ರೇವಣ್ಣಗೆ ಮತ್ತೊಂದು ಸಂಕಷ್ಟ : ಅಪಹರಣ ಪ್ರಕರಣ ದಾಖಲು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement