ಎಂ.ಜೆ. ಅಕ್ಬರ್‌ ಮಾನಷ್ಟ ಮೊಕದ್ದಮೆ ತೀರ್ಪು: ಫೆ.೧೭ಕ್ಕೆ ಮುಂದೂಡಿಕೆ

ಲೈಂಗಿಕ ಕಿರುಕುಳ ಆರೋಪ ಮಾಡಿದ ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಮಾಜಿ ಕೇಂದ್ರ ಸಚಿವ ಎಂ.ಜೆ. ಅಕ್ಬರ್‌ ದಾಖಲಿಸಿದ ಮಾನಹಾನಿ ಪ್ರಕರಣದ ತೀರ್ಪನ್ನು ದೆಹಲಿ ನ್ಯಾಯಾಲಯ ಫೆ.೧೭ಕ್ಕೆ ಮುಂದೂಡಿದೆ.
ಎರಡೂ ಪಕ್ಷಗಳಿಂದ ಲಿಖಿತ ಸಲ್ಲಿಕೆಯಲ್ಲಿ ವಿಳಂಬವಾಗಿದ್ದರಿಂದ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ರವೀಂದ್ರಕುಮಾರ ಪಾಂಡೆ ತೀರ್ಪನ್ನು ಮುಂದೂಡಿದ್ದಾಗಿ ತಿಳಿಸಿದರು.
೧೯೯೪ರಲ್ಲಿ ಏಷ್ಯನ್‌ ಏಜ್‌ ಪತ್ರಿಕೆಯಲ್ಲಿ ಪತ್ರಕರ್ತರಾಗಿ ಕೆಲಸ ಮಾಡುವ ಸಂದರ್ಭದಲ್ಲಿ ಎಂ.ಜೆ. ಅಕ್ಬರ್‌ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಪ್ರಿಯಾ ರಮಣಿ ೨೦೧೮ರಲ್ಲಿ ಮೀಟೂ ಆಂದೋಲನ ಸಂದರ್ಭದಲ್ಲಿ ಆರೋಪಿಸಿದ್ದರು.
ಇದರಿಂದಾಗಿ ೨೦೧೮ರಲ್ಲಿ ಎಂ.ಜೆ. ಅಕ್ಬರ್‌ ಕೇಂದ್ರ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಬೇಕಾಯಿತು.
ನಂತರ ಎಂ.ಜೆ. ಅಕ್ಬರ್‌ ಪ್ರಿಯಾ ರಮಣಿ ವಿರುದ್ಧ ಮಾನಹಾನಿ ಮೊಕದ್ದಮೆ ದಾಖಲಿಸಿದ್ದರು. ನ್ಯಾಯಾಲಯವು ಫೆಬ್ರವರಿ 17 ರಂದು ತೀರ್ಪು ನೀಡುವ ಸಾಧ್ಯತೆಯಿದೆ.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement