ಐಎನ್‌ಎಸ್‌ ವಿರಾಟ ಒಡೆಯಲು ಸುಪ್ರೀಂಕೋರ್ಟ್‌ ತಡೆ

ವಿಮಾನವಾಹಕ ನೌಕೆ ಐಎನ್‌ಎಸ್‌ ವಿರಾಟ್ ‌ಅನ್ನು ಒಡೆಯುವ ಪ್ರಕ್ರಿಯೆಗೆ ಸರ್ವೋಚ್ಚ ನ್ಯಾಯಾಲಯ ತಡೆಯೊಡ್ಡಿದ್ದು, ವಿಶಾಲವಾದ ಹಡಗನ್ನು ವಸ್ತುಸಂಗ್ರಹಾಲಯ ಮಾಡುವಂತೆ ಆದೇಶ ನೀಡಿದೆ.
ವಿಮಾನವಾಹನ ನೌಕೆಯನ್ನು ವಸ್ತುಸಂಗ್ರಹಾಲಯವಾಗಿ ರೂಪಿಸಬೇಕೆಂಬ ಎನ್ವಿಟೆಕ್‌ ಮೆರೈನ್‌ ಕನ್ಸಲ್ಟಂಟ್‌ ಲಿಮಿಟೆಡ್‌ನ ಮನವಿಯನ್ನು ರಕ್ಷಣಾ ಸಚಿವಾಲಯ ತಿರಸ್ಕರಿಸಿದ ನಂತರ ಸಂಸ್ಥೆ ಸರ್ವೋಚ್ಚ ನ್ಯಾಯಾಲಯದಲ್ಲಿ ದೂರು ದಾಖಲಿಸಿತ್ತು.
ಐಎನ್‌ಎಸ್‌ ವಿರಾಟನ್ನು ಒಡೆಯದೇ ಯಥಾಸ್ಥಿತಿ ಉಳಿಸಿಕೊಳ್ಳುವಂತೆ ನ್ಯಾಯಾಲಯ ಆದೇಶ ನೀಡಿದೆ. ಹಡಗಿನ ಸುರಕ್ಷತೆ ಹಾಗೂ ಸ್ಥಿತಿಯನ್ನು ಪರಿಗಣಿಸಿ ಅದನ್ನು ವಸ್ತುಸಂಗ್ರಹಾಯಲವಾಗಿಸುವುದು ಸೂಕ್ತವಲ್ಲ ಎಂದು ಸಚಿವಾಲಯ ಮೂರು ಪುಟಗಳ ಪತ್ರವನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಆದರೆ ವಾದವನ್ನು ಒಪ್ಪಿಕೊಳ್ಳದ ಸರ್ವೋಚ್ಚ ನ್ಯಾಯಾಲಯ ವಿರಾಟ್‌ ವಿಮಾನವಾಹಕ ನೌಕೆಯನ್ನು ವಸ್ತುಸಂಗ್ರಹಾಲಯವಾಗಿಸುವಂತೆ ಸೂಚಿಸಿದೆ.
ವಿಮಾನವಾಹಕವನ್ನು ವಸ್ತುಸಂಗ್ರಹಾಲಯವನ್ನಾಗಿ ಪರಿವರ್ತಿಸುವ ಹಲವಾರು ಪ್ರಯತ್ನಗಳು ವಿಫಲವಾದ ನಂತರ ಸೆಪ್ಟೆಂಬರ್ 28 ರಂದು ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ ಮತ್ತು ನೌಕಾಪಡೆಯ ಅಧಿಕಾರಿಗಳು ಭಾಗವಹಿಸಿದ ಔಪಚಾರಿಕ ಸಮಾರಂಭದಲ್ಲಿ ಐಎನ್‌ಎಸ್ ವಿರಾಟ್‌ಅನ್ನು ಸಮುದ್ರ ದಡದಲ್ಲಿ ನಿಲ್ಲಿಸಲಾಗಿತ್ತು.
ಎನ್ವಿಟೆಕ್ ಮರೀನ್ ಕನ್ಸಲ್ಟೆಂಟ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಖಾಸಗಿ ಕಂಪನಿಯು ಶ್ರೀ ರಾಮ್ ಗ್ರೂಪ್‌ನಿಂದ ಐಎನ್‌ಎಸ್ ವಿರಾಟ್ ಖರೀದಿಸಿ ಅದನ್ನು ಮ್ಯೂಸಿಯಂ ಆಗಿ ಪರಿವರ್ತಿಸಲು ಮುಂದಾಯಿತು. ಆದರೂ ಕಂಪನಿಯು ಕೇಂದ್ರದಿಂದ ಯಾವುದೇ ನಿರಪೇಕ್ಷಣಾ ಪ್ರಮಾಣಪತ್ರವನ್ನು ಪಡೆಯಲು ಸಾಧ್ಯವಾಗಿರಲಿಲ್ಲ.

ಪ್ರಮುಖ ಸುದ್ದಿ :-   ದೆಹಲಿ ವಕ್ಫ್ ಬೋರ್ಡ್ ಹಗರಣ : 9 ತಾಸುಗಳ ವಿಚಾರಣೆಯ ನಂತರ ಎಎಪಿ ನಾಯಕ ಅಮಾನತುಲ್ಲಾ ಖಾನ್ ಬಂಧಿಸಿದ ಇ.ಡಿ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement