ಗಾಲ್ವಾನ್‌ ಕಣಿಗೆ ಭೇಟಿ ನೀಡಲಿರುವ ಸಂಸದೀಯ ರಕ್ಷಣಾ ಸ್ಥಾಯಿ ಸಮಿತಿ

ನವದೆಹಲಿ: ಸಂಸದೀಯ ರಕ್ಷಣಾ ಸ್ಥಾಯಿ ಸಮಿತಿ ಭಾರತ ಹಾಗೂ ಚೀನಾ ಪಡೆಗಳ ಮಧ್ಯೆ ಅಹಿತಕರ ಘಟನೆ ನಡೆದ ಪೂರ್ವ ಲದಾಖ್‌ನ ಗಾಲ್ವಾನ್‌ ಕಣಿವೆ ಹಾಗೂ ಪಾಂಗಾಂಗ್‌ ಸರೋವರಕ್ಕೆ ಭೇಟಿ ನೀಡಲು ನಿರ್ಧರಿಸಿದೆ.
ಗಾಲ್ವಾನ್‌ ಹಾಗೂ ಪಾಂಗಾಂಗ್‌ಗೆ ಭೇಟಿ ನೀಡುವ ಮುನ್ನ ಸರ್ಕಾರದ ಅನುಮತಿಯನ್ನು ಪಡೆಯಬೇಕಿದೆ. ಮಾಜಿ ಕೇಂದ್ರ ಸಚಿವ ಜುವಾಲ್‌ ಓರಮ್‌ ಅಧ್ಯಕ್ಷತೆಯ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಸದಸ್ಯರಾಗಿರುವ ೩೦ ಸದಸ್ಯರ ಸಮಿತಿ ಮೇ ಅಥವಾ ಜೂನ್‌ ತಿಂಗಳಲ್ಲಿ ಭೇಟಿ ನೀಡಲು ಉದ್ದೇಶಿಸಿದೆ. ಇತ್ತೀಚಿಗೆ ನಡೆದ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ನೈಜ ಗಡಿ ರೇಖೆಯ ಸಮೀಪ ಸಮಿತಿ ತೆರಳಲು ಸರಕಾರ ಅನುಮತಿ ನೀಡಬೇಕಿದೆ.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   'ತಾರಕ್ ಮೆಹ್ತಾ' ನಟ ಗುರುಚರಣ್ ಸಿಂಗ್ ಐದು ದಿನಗಳಿಂದ ನಾಪತ್ತೆ ; ಸಿಸಿಟಿವಿಯಲ್ಲಿ ರಸ್ತೆ ದಾಟುತ್ತಿರುವುದು ಸೆರೆ

ನಿಮ್ಮ ಕಾಮೆಂಟ್ ಬರೆಯಿರಿ

advertisement