ಉತ್ತರಾಖಂಡ ದುರಂತ ಮೃತರ ಸಂಖ್ಯೆ 61ಕ್ಕೇರಿಕೆ

ಉತ್ತರಾಖಂಡದಲ್ಲಿ ಹಿಮಬಂಡೆ ಕುಸಿದ ಪರಿಣಾಮದಿಂದ ಉಂಟಾದ ಪ್ರವಾಹದ ಘಟನೆಯಲ್ಲಿ ಮೃತರ ಸಂಖ್ಯೆ 61ಕ್ಕೇರಿದೆ.
ಈವರೆಗೆ 61 ಜನರ ಮೃತದೇಹಗಳನ್ನು ಹೂಳಿನಿಂದ ಹೊರ ತೆಗೆಯಲಾಗಿದೆ. ಏತನ್ಮಧ್ಯೆ, ರಾಜ್ಯ ವಿಪತ್ತು ತಡೆ ಪಡೆ ರೆನಿ ಗ್ರಾಮದಿಂದ ಶ್ರೀನಗರಕ್ಕೆ ಕಾಣೆಯಾದವರ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ ಮತ್ತು ಈ ಪ್ರದೇಶದಲ್ಲಿ ಉತ್ತಮ ಸಂವಹನಕ್ಕಾಗಿ ಸಂವಹನ ತಂಡವೂ ಕಾರ್ಯನಿರ್ವಹಿಸುತ್ತಿದೆ.
12 ಎಸ್‌ಡಿಆರ್‌ಎಫ್ ತಂಡಗಳು ಬೈನಾಕ್ಯುಲರ್‌ಗಳು, ಸ್ನಿಫರ್ ನಾಯಿಗಳನ್ನು ಬಳಸಿ ರೆನಿ ಗ್ರಾಮದಿಂದ ಕೆಳಗಿರುವ ಶ್ರೀನಗರ ಪಟ್ಟಣಕ್ಕೆ ಶವಗಳನ್ನು ಹುಡುಕುತ್ತಿವೆ. ಗಂಗಾ, ಋಷಿಗಂಗಾ, ಅಲಕಾನಂದಾ ನದಿಗಳಲ್ಲಿ ರಾಫ್ಟ್ತ್ತ‌ಗಳನ್ನು ಬಳಸಲಾಗುತ್ತಿದೆ. ತಪೋವನ್ ಸುರಂಗದಿಂದ ಒಂದು ದೇಹದ ಕೆಲ ಬಿಡಿ ಭಾಗಗಳನ್ನು ಪತ್ತೆ ಮಾಡಲಾಗಿದೆ. ಎಂದು ಉತ್ತರಾಖಂಡ ಪೊಲೀಸ್ ಮಹಾನಿರ್ದೇಶಕ ಅಶೋಕ್ ಕುಮಾರ್ ತಿಳಿಸಿದ್ದಾರೆ.
ಫೆಬ್ರವರಿ 7 ರಂದು ಉತ್ತರಾಖಂಡದ ಚಮೋಲಿ ಜಿಲ್ಲೆಯ ತಪೋವನ್-ರೆನಿ ಪ್ರದೇಶದಲ್ಲಿ ಹಿಮ ಬಂಡೆ ಕುಸಿದು ಧೌಲಿ ಗಂಗಾ ಮತ್ತು ಅಲಕಾನಂದಾ ನದಿಗಳಲ್ಲಿ ಭಾರಿ ಪ್ರವಾಹ ಉಂಟಾಗಿದ್ದು, ಮನೆಗಳು ಮತ್ತು ಹತ್ತಿರದ ರಿಷಿ ಗಂಗಾ ವಿದ್ಯುತ್ ಯೋಜನೆ ಕಾಮಗಾರಿಗೆ ಹಾನಿಯಾಗಿದೆ.

ಪ್ರಮುಖ ಸುದ್ದಿ :-   ಮಣಿಪುರ : ಮತಗಟ್ಟೆ ಮೇಲೆ ಗುಂಡಿನ ದಾಳಿ; ದಿಕ್ಕಾ ಪಾಲಾಗಿ ಓಡಿದ ಮತದಾರರು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement