ಕೋಲ್ಕತ್ತಾ: ೧೦೦ ಗ್ರಾಂ ಕೊಕೇನ್‌ ಸಹಿತ ಬಿಜೆಪಿ ಯುವ ನಾಯಕಿ ಬಂಧನ

ಕೋಲ್ಕತ್ತಾ: ದಕ್ಷಿಣ ಕೋಲ್ಕತ್ತಾದ ಐಷಾರಾಮಿ ನ್ಯೂ ಅಲಿಪೋರ್ ಪ್ರದೇಶದಿಂದ ಶುಕ್ರವಾರ 10 ಲಕ್ಷ ರೂ.ಗಳ ಮೌಲ್ಯದ 100 ಗ್ರಾಂ ಕೊಕೇನ್‌ನೊಂದಿಗೆ ತನ್ನ ಸಹಚರನೊಂದಿಗೆ ಬಂಧಿಸಲ್ಪಟ್ಟ ಪಶ್ಚಿಮ ಬಂಗಾಳದ ಯುವ ವಿಭಾಗದ ಮುಖಂಡರಾದ ಪಮೇಲಾ ಗೋಸ್ವಾಮಿ ಅವರನ್ನು ಫೆಬ್ರವರಿ 25ರ ವರೆಗೆ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ.
ಕೋಲ್ಕತ್ತಾದ ಎನ್‌ಡಿಪಿಎಸ್ ನ್ಯಾಯಾಲಯವು ಗೋಸ್ವಾಮಿಯನ್ನು ಫೆಬ್ರವರಿ 25 ರವರೆಗೆ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ. ನ್ಯಾಯಾಲಯದಲ್ಲಿ, ಗೋಸ್ವಾಮಿ ಅವರು ತಮ್ಮನ್ನು ಉದ್ದೇಶಪೂರ್ವಕಾಗಿ ಸಿಲುಕಿಸಲು ಪಿತೂರಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.
ಏತನ್ಮಧ್ಯೆ, ವಿಚಾರಣೆಯ ನಂತರ ಆಕೆಯನ್ನು ನ್ಯಾಯಾಲಯದಿಂದ ಹೊರಗೆ ಕರೆದೊಯ್ಯುವಾಗ, ಈ ಪ್ರಕರಣದ ಸಿಐಡಿ ತನಿಖೆಗಾಗಿ ತನ್ನ ಬೇಡಿಕೆ ಇದೆ ಎಂದು ಕೂಗಿದ್ದಾಳೆ. ಶುಕ್ರವಾರ, ಭಾರತೀಯ ಜನತ ಯುವ ಮೋರ್ಚಾ (ಬಿಜೆವೈಎಂ) ಪ್ರಧಾನ ಕಾರ್ಯದರ್ಶಿ ಗೋಸ್ವಾಮಿ ಮತ್ತು ಸಹವರ್ತಿ ಪ್ರಬೀರ್ ಕುಮಾರ್ ಡೇ ಅವರನ್ನು ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸುಳಿವು ಸಿಕ್ಕ ತಕ್ಷಣ ಪೊಲೀಸರು ಕಾರನ್ನು ತಡೆದರು ಮತ್ತು ಆಕೆಯ ಕೈಚೀಲದಲ್ಲಿ ಸುಮಾರು 100 ಗ್ರಾಂ ಕೊಕೇನ್ ಕಂಡುಬಂದಿದೆ. ನಿಷೇಧಿತ ಡ್ರಗ್ಸ್‌ನ ಮಾರುಕಟ್ಟೆ ಮೌಲ್ಯ ಸುಮಾರು 10 ಲಕ್ಷ ರೂ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಬಿಜೆಪಿ ನಾಯಕನ ಜೊತೆಯಲ್ಲಿ ಗೋಸ್ವಾಮಿಯ ವೈಯಕ್ತಿಕ ಭದ್ರತಾ ಸಿಬ್ಬಂದಿಯನ್ನು ಸಹ ವಶಕ್ಕೆ ತೆಗೆದುಕೊಳ್ಳಲಾಗಿದೆ.
ಬಿಜೆಪಿ ಸಂಸದ ಲಾಕೆಟ್ ಚಟರ್ಜಿ, “ಪಮೇಲಾ ಚಿಕ್ಕ ಹುಡುಗಿ. ಅವಳನ್ನು ಬಂಧಿಸಲು ತೃಣಮೂಲ ಕಾಂಗ್ರೆಸ್ ನೇತೃತ್ವದ ಸರ್ಕಾರಿ ಪೊಲೀಸರು ಸಂಚು ರೂಪಿಸಬಹುದು. ಕಾನೂನು ತನ್ನದೇ ದಾರಿಯಲ್ಲಿ ಸಾಗುತ್ತದೆ ತೆಎಂದು ಹೇಳಿದ್ದಾರೆ.
ತೃಣಮೂಲ ಕಾಂಗ್ರೆಸ್ ಮುಖಂಡ ಮತ್ತು ಸಚಿವ ಚಂದ್ರಮಾ ಭಟ್ಟಾಚಾರ್ಯ ಮಾತನಾಡಿ, ಬಿಜೆಪಿಯ ಮಹಿಳಾ ನಾಯಕರು ಕೂಡ ಮಾದಕವಸ್ತು ಸಂಬಂಧಿತ ಅಕ್ರಮ ಕೃತ್ಯಗಳಲ್ಲಿ ಭಾಗಿಯಾಗಿರುವುದು ನಾಚಿಕೆಗೇಡಿನ ಸಂಗತಿ. “ಈ ಮೊದಲು, ಮಕ್ಕಳ ಕಳ್ಳಸಾಗಣೆಯಲ್ಲಿ ಹಲವಾರು ಬಿಜೆಪಿ ನಾಯಕರ ಪಾಲ್ಗೊಳ್ಳುವಿಕೆಯನ್ನು ನಾವು ನೋಡಿದ್ದೇವೆ” ಎಂದು ಹೇಳಿದ್ದಾರೆ.
ಮಾಡೆಲ್ ಹಾಗೂ ನಟಿ ಗೋಸ್ವಾಮಿ ಮತ್ತು ಕೆಲವು ಟಾಲಿವುಡ್ ನಟಿಯರು ಜುಲೈ 2019 ರಲ್ಲಿ ಬಿಜೆಪಿಗೆ ಸೇರಿದ್ದರು. ಮತ್ತು ಕಳೆದ ವರ್ಷ ಅವರನ್ನು ಬಿಜೆವೈಎಂ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಗಿತ್ತು.

ಪ್ರಮುಖ ಸುದ್ದಿ :-   ಧರ್ಮದ ಹೆಸರಿನಲ್ಲಿ ಮತ ಯಾಚನೆ: ಮೋದಿ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಬಂಧಿಸಲು ಕೋರಿ ದೆಹಲಿ ಹೈಕೋರ್ಟ್‌ಗೆ ಅರ್ಜಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement