ವಿದೇಶ ಸುತ್ತುವ ಪ್ರಧಾನಿಗೆ ರೈತರ ಸಮಸ್ಯೆ ಕೇಳಲು ಸಮಯವಿಲ್ಲ: ಪ್ರಿಯಾಂಕಾ ಲೇವಡಿ

ಪ್ರಪಂಚದ ಹಲವು ದೇಶಗಳಿಗೆ ಭೇಟಿ ನೀಡುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರತಿಭಟನಾ ನಿರತ ರೈತರ ಕಣ್ಣೊರೆಸಲು ಸಮಯವಿಲ್ಲ ಎಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.
ರೈತರು ದೆಹಲಿ ಗಡಿಯಲ್ಲಿ ಕಳೆದ ೯೦ ದಿನಗಳಿಂದ ಪ್ರತಿಭಟನೆ ನಡಸುತ್ತಿದ್ದಾರೆ. ಹಲವು ರೈತರು ಪ್ರತಿಭಟನೆ ನಡೆಯುತ್ತಿರುವ ಸಂದರ್ಭದಲ್ಲಿಯೇ ಜೀವ ಕಳೆದುಕೊಂಡರು. ಪ್ರತಿಭಟನಾನಿರತ ರೈತರ ವಿದ್ಯುತ್‌ ಹಾಗೂ ನೀರಿನ ಸಂಪರ್ಕ ಕಡಿತಗೊಳಿಸಲಾಯಿತು. ಅವರ ಮೇಲೆ ಹಲ್ಲೆ ಮಾಡಲಾಯಿತು. ದೆಹಲಿಯ ಗಡಿಯನ್ನು ದೇಶದ ಗಡಿಯಂತೆ ಮಾಡಲಾಯಿತು. ಪ್ರಧಾನಿ ರೈತರ ಸಮಸ್ಯೆ ಆಲಿಸಲು ಆಸಕ್ತಿ ತೋರುತ್ತಿಲ್ಲ ಎಂದು  ತಿಳಿಸಿದರು.
ನಮ್ಮ ಗಡಿಗಳನ್ನು ರಕ್ಷಿಸಲು ತಮ್ಮ ಪುತ್ರರನ್ನು ಕಳುಹಿಸುವ ರೈತರನ್ನು ಭಯೋತ್ಪಾದಕರು ಎಂದು ಕರೆಯಲಾಗುತ್ತಿದೆ. ರೈತರನ್ನು ಆಂದೋಲನ ಜೀವಿಗಳೆಂದು ಮೂದಲಿಸಲಾಯಿತು. ರೈತ ಮುಖಂಡ ರಾಕೇಶ್‌ ಟಿಕಾಯತ್‌ ಕಣ್ಣೀರು ಹಾಕಿದಾಗ ಇದನ್ನು ಪ್ರಧಾನಿ ತಮಾಷೆ ಎಂದು ಭಾವಿಸುತ್ತಾರೆ ಎಂದರು.
ಮೋದಿ ಸರ್ಕಾರ ವಿವಾದಾತ್ಮಕ ಕಾನೂನುಗಳನ್ನು ಸಂಪೂರ್ಣವಾಗಿ ರದ್ದುಪಡಿಸಬೇಕು ಮತ್ತು ತಮ್ಮ ಉತ್ಪನ್ನಗಳಿಗೆ ಕನಿಷ್ಟ ಬೆಂಬಲ ಬೆಲೆ ಕಾನೂನು ಬೆಂಬಲವನ್ನು ನೀಡಬೇಕೆಂದು ರೈತರು ಬಯಸುತ್ತಾರೆ ಎಂದರು.

ಪ್ರಮುಖ ಸುದ್ದಿ :-   ಧರ್ಮದ ಹೆಸರಿನಲ್ಲಿ ಮತ ಯಾಚನೆ: ಮೋದಿ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಬಂಧಿಸಲು ಕೋರಿ ದೆಹಲಿ ಹೈಕೋರ್ಟ್‌ಗೆ ಅರ್ಜಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement