ಹುಬ್ಬಳ್ಳಿಯಲ್ಲಿ ಸನ್ಯಾಸ ದೀಕ್ಷಾ ಸಮಾರಂಭದ ಪ್ರಯುಕ್ತ ಗಿರಿನಾರ ಭಾವಯಾತ್ರೆ

ಹುಬ್ಬಳ್ಳಿ: ಜೈನ ಮರುಧರ ಸಂಘ ಹಾಗೂ ಕೇಶ್ವಾಪುರ ಜೈನ ಸಂಘದ ಆಶ್ರಯದಲ್ಲಿ ೧೦ ಜನರ ಸನ್ಯಾಸ ದೀಕ್ಷಾ ಸಮಾರಂಭದ ನಿಮಿತ್ತ ಗಿರಿನಾರ ಭಾವಯಾತ್ರೆ ನಡೆಯಿತು.
ಕೇಶ್ವಾಪುರದ ಅರಿಹಂತ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಚಾರ್ಯ ಅಭಯಶೇಖರ ಸುರೀಶ್ವರಜಿ, ಆಚಾರ್ಯ ಅಜಿತಶೇಖರ ಸುರೀಶ್ವರಜಿ, ಆಚಾರ್ಯ ವಿಮಲಬೋಧಿ ಸುರೀಶ್ವರಜಿ, ಸಾಧ್ವಿ ಚರಿತ್ರವರ್ಧನನಾಶ್ರೀಜಿ, ಸಾಧ್ವಿ ಜ್ಯೋತಿವರ್ಧನಾಶ್ರೀಜಿ ಭಾವಯಾತ್ರೆಯನ್ನು ಬೀಳ್ಕೊಟ್ಟರು. ನಂತರ ಸನ್ಯಾಸ ದೀಕ್ಷೆ ಪಡೆಯುವವರ ಬಟ್ಟೆಗೆ ಬಣ್ಣ ಹಚ್ಚುವ ಕಾರ್ಯಕ್ರಮ ನಡೆಯಿತು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ “ಗರೀಬ್‌ ಘರ್‌ ಕಾ ಚಿರಾಗ್‌ʼ ಕೃತಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು. ಪ್ರತಿಷ್ಠಿತ ಕುಟುಂಬದವರು ಸನ್ಯಾಸ ದೀಕ್ಷೆ ಪಡೆಯುತ್ತಿರುವುದು ಅಚ್ಚರಿ ಮೂಡಿಸಿದೆ. ಹಣ, ಆಸ್ತಿ ಎಲ್ಲವನ್ನೂ ತೊರೆದು ಸನ್ಯಾಸ ಜೀವನ ಸ್ವೀಕರಿಸಿ ತ್ಯಾಗಮಯ ಜೀವನಕ್ಕೆ ಕಾಲಿಡುವುದು ಸುಲಭವಲ್ಲ ಎಂದರು.
ದೀಕ್ಷಾರ್ಥಿಗಳ ಪರಿವಾರದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ನಂತರ ಮಹಾಆರತಿ ನಡೆಯಿತು. ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಗೋವಿಂದ ಜೋಶಿ, ಪ್ರಭು ನವಲಗುಂದಮಠ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಜೈನ ಮರುಧರ ಸಂಘದ ಪುಖರಾಜ ಸಂಘ್ವಿ, ರಮೇಶ ಕೊಠಾರಿ, ಜೈನ ರಾಜಸ್ಥಾನಿ ವಿದ್ಯಾ ಪ್ರಚಾರಕ ಮಂಡಲದ ಅಧ್ಯಕ್ಷ ಭವರ್‌ಲಾಲ್‌ ಜೈನ್‌, ಸುಖನ್‌ರಾಜ್‌ ಬಾಫನಾ, ಮಹೇಂದ್ರ ಕೌತಾಳ, ಅಮೃತ ಜೈನ್‌, ದಿನೇಶ್‌ ಸಂಘ್ವಿ, ಸುರೇಶ ಜೈನ್‌ ಮೊದಲಾದವರಿದ್ದರು.

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ : ಕರ್ನಾಟಕದ ಮೊದಲ ಹಂತದಲ್ಲಿ ಶೇ. 69.23 ಮತದಾನ ; 14 ಕ್ಷೇತ್ರಗಳ ಮತದಾನದ ಪ್ರಮಾಣದ ವಿವರ...

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement