ನೀರಿನ ತೊಟ್ಟಿಯಲ್ಲಿ ಮೂರು ಪಂಚಲೋಹ ವಿಗ್ರಹ ಪತ್ತೆ

ಕೊಯಮತ್ತೂರು: ಇಲ್ಲಿನ ಐತಿಹಾಸಿಕ ಪತ್ತೀಶ್ವರರ್ ದೇವಾಲಯದ ನೀರಿನ ತೊಟ್ಟಿಯಲ್ಲಿ ಮೂರು ಪಂಚಲೋಹ ವಿಗ್ರಹಗಳನ್ನು ದೊರೆತಿದೆ.
ದೇವಾಲಯ ಸಮಿತಿ ಅವುಗಳನ್ನು ಸೋಮವಾರ ವಶಕ್ಕೆ ತೆಗೆದುಪಡೆದುಕೊಂಡಿದೆ. ಬೆಳಗ್ಗೆ ವಾಕಿಂಗ್ ಮಾಡುತ್ತಿದ್ದ ಸ್ಥಳೀಯರ ಕಣ್ಣಿಗೆ ಬಾವಿಯ ಪಕ್ಕದ ತೊಟ್ಟಿಯಲ್ಲಿ ವಿಗ್ರಹಗಳು ಬಿದ್ದಿರುವುದು ಕಂಡುಬಂದಿದೆ. ಗಮನಿಸಿದ ಅವರು ತಕ್ಷಣ ದೇವಾಲಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಎರಡರಿಂದ ಮೂರು ಅಡಿ ಎತ್ತರರ ವಿಷ್ಣು ಮೂರ್ತಿಯ ವಿವಿಧ ರೂಪಗಳ ವಿಗ್ರಹಗಳು ಇವಾಗಿವೆ. ಈ ವಿಗ್ರಹ ದೇವಸ್ಥಾನಕ್ಕೆ ಸೇರಿದ್ದವೇ ಅಥವಾ ಯಾರಾದರೂ ದುಷ್ಕರ್ಮಿಗಳು ಬೇರೆ ದೇವಾಲಯಗಳಿಂದ ಕದ್ದು ತಂದು ಇಲ್ಲಿ ಹಾಕಿದ್ದಾರೆಯೇ ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಶಿರಸಿ: ಕಸ್ತೂರಿರಂಗನ್ ವರದಿಯಿಂದ ಉತ್ತರ ಕನ್ನಡ ಜಿಲ್ಲೆಯ 567 ಹಳ್ಳಿಗಳನ್ನು ಕೈಬಿಡಲು ಒತ್ತಾಯಿಸಿ ಸಹಸ್ರಾರು ಆಕ್ಷೇಪಣಾ ಪತ್ರ ಸಲ್ಲಿಕೆ

ನಿಮ್ಮ ಕಾಮೆಂಟ್ ಬರೆಯಿರಿ

advertisement