ಸಿಬಿಐನಿಂದ ಅಭಿಷೇಕ್‌ ಬ್ಯಾನರ್ಜಿ ಅತ್ತಿಗೆ ಮನೇಕಾ ಗಂಭೀರ್‌ ವಿಚಾರಣೆ

ಕೋಲ್ಕತಾ: ಕಲ್ಲಿದ್ದಲು ಅವ್ಯವಹಾರ ಪ್ರಕರಣದಲ್ಲಿ ಸಿಬಿಐ ಸೋಮವಾರ ಸಿಎಂ ಮಮತಾ ಬ್ಯಾನರ್ಜಿ ಸೋದರಳಿಯ ಹಾಗೂ ಸಂಸದ ಅಭಿಷೇಕ್‌ ಬ್ಯಾನರ್ಜಿಯ ಅತ್ತಿಗೆ ಮನೇಕಾ ಗಂಭೀರ್‌ ಅವರನ್ನು ದಕ್ಷಿಣ ಕೋಲ್ಕತ್ತಾ ನಿವಾಸದಲ್ಲಿ ವಿಚಾರಣೆ ನಡೆಸಿದೆ.
ಮನೇಕಾ ಗಂಭೀರ್‌ ಅವರ ವಸತಿ ಸಮುಚ್ಚಯದಲ್ಲಿ ವಿಚಾರಣೆ ನಡೆಯಿತು. ಕಲ್ಲಿದ್ದಲು ಅವ್ಯವಹಾರ ಪ್ರಕರಣದಲ್ಲಿ ಭಾನುವಾರ ಸಿಬಿಐ ಅಭಿಷೇಕ್‌ ಪತ್ನಿ ರುಜಿರಾ ಬ್ಯಾನರ್ಜಿ ಅವರಿಗೆ ನೋಟಿಸ್‌ ನೀಡಿತ್ತು. ಮರುದಿನ ಅಭಿಷೇಕ್‌ ಸೋದರತ್ತೆಯನ್ನು ೩ ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿದೆ. ವಿಚಾರಣೆಗೆ ಅವರು ಸಹಕರಿಸಿದ್ದಾರೆ. ಅಗತ್ಯವಿದ್ದರೆ ಮತ್ತೆ ವಿಚಾರಣೆ ನಡೆಸಬಹುದಾಗಿದೆ ಎಂದು ಸಿಬಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಏತನ್ಮಧ್ಯೆ, ಇಡಿಯು ನಗರಾಭಿವೃದ್ಧಿ ಸಚಿವ ಫಿರ್ಹಾದ್ ಹಕೀಮ್ ಅವರ ಪುತ್ರಿಯರಿಗೆ ಅನುಮಾನಾಸ್ಪದ ನಿಧಿಯನ್ನು ವಿದೇಶದಲ್ಲಿ ಸಾಗಿಸುವ ಸಂಬಂಧ ನೋಟಿಸ್ ನೀಡಿದೆ.
ಕಲ್ಲಿದ್ದಲು ಅವ್ಯವಹಾರ ಕುರಿತು ಉದ್ಯಮಿ ಅನುಪ್ ಕುಮಾರ್ ಅಲಿಯಾಸ್ ಲಾಲಾ ಮತ್ತು ಈಸ್ಟರ್ನ್ ಕೋಲ್ಫೀಲ್ಡ್ ಲಿಮಿಟೆಡ್ (ಇಸಿಎಲ್) ಇಬ್ಬರು ಜನರಲ್ ಮ್ಯಾನೇಜರ್‌ಗಳು ಮತ್ತು ಭದ್ರತಾ ಅಧಿಕಾರಿಗಳ ವಿರುದ್ಧ ಸಿಬಿಐ 2020 ರ ನವೆಂಬರ್‌ನಲ್ಲಿ ಎಫ್‌ಐಆರ್ ದಾಖಲಿಸಿತ್ತು.

ಪ್ರಮುಖ ಸುದ್ದಿ :-   ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಕ್ಷಿಣ ಭಾರತದ ಜನಪ್ರಿಯ ನಟರಾದ ಅದಿತಿ ರಾವ್ ಹೈದರಿ-ಸಿದ್ಧಾರ್ಥ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement