ಮ್ಯಾನ್‌ಹೋಲ್‌ನಲ್ಲಿ ಒತ್ತಾಯ ಪೂರ್ವಕವಾಗಿ ಇಳಿಸಿದ್ದಕ್ಕೆ ಪೌರ ಕಾರ್ಮಿಕ ಆತ್ಮಹತ್ಯೆ

ಕರ್ನಾಟಕ ಮಂಡ್ಯ ಜಿಲ್ಲೆಯ ಮದ್ದೂರ ಪಟ್ಟಣದ ಪುರಸಭೆಯಲ್ಲಿ ಕೆಲಸ ಮಾಡುತ್ತಿದ್ದ ಪೌರ ಕಾರ್ಮಿಕ ಮ್ಯಾನ್‌ಹೋಲ್‌ ಸ್ವಚ್ಛಗೊಳಿಸುವಂತೆ ಪುರಸಭೆ ಅಧಿಕಾರಿಗಳು ಒತ್ತಡ ಹೇರಿದ್ದನ್ನು ಖಂಡಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ನಾರಾಯಣ (೩೪) ಮೃತ ವ್ಯಕ್ತಿ. ಪುರಸಭೆಯ ಅಧಿಕಾರಿಗಳು ೨೦೨೦ರ ನವಂಬರ್‌ಲ್ಲಿ ಮ್ಯಾನ್‌ಹೋಲ್‌ನಲ್ಲಿ ಇಳಿಯುವಂತೆ ಒತ್ತಡ ಹೇರಿದ್ದರು. ನಾರಾಯಣ ನಿರಾಕರಿಸಿದ್ದಕ್ಕೆ ಅವನ ಸಂಬಳವನ್ನು ೬೦೦೦ರೂ.ಗಳಿಗೆ ಕಡಿತಗೊಳಿಸಲಾಗಿತ್ತು. ಇದನ್ನು ಖಂಡಿಸಿ ನಾರಾಯಣ ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೂ ಮುನ್ನ ಪತ್ರ ಬರೆದಿದ್ದು, ಅದರಲ್ಲಿ ಇಬ್ಬರು ಅಧಿಕಾರಿಗಳಾದ ಮುರಗೇಶ ಹಾಗೂ ಆರೋಗ್ಯ ನಿರೀಕ್ಷಕ ಜಾಸಿಮ್‌ ಖಾನ್‌ ಸುರಕ್ಷಾ ಸಾಧನಗಳಿಲ್ಲದೇ ಒಳಚರಂಡಿಯಲ್ಲಿ ಇಳಿಯುವಂತೆ ಒತ್ತಡ ಹೇರಿದ್ದರು ಎಂದು ಆರೋಪಿಸಲಾಗಿದೆ.
ನಾರಾಯಣ ಸುರಕ್ಷಾ ಸಾಧನಗಳಿಲ್ಲದೇ ಒಳಚರಂಡಿಯಲ್ಲಿ ಇಳಿದು ಸ್ವಚ್ಛಗೊಳಿಸಿದ್ದ ವಿಡಿಯೋವನ್ನು ರಾಜ್ಯ ಸಫಾಯಿ ಕರ್ಮಚಾರಿ ಆಯೋಗಕ್ಕೆ ನೀಡಲಾಯಿತು. ಅಲ್ಲದೇ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.
ಕಳೆದ ವಾರ ಪುರಸಭೆ ಅಧಿಕಾರಿ ಮುರಗೇಶ ಅವರ ಆಡಿಯೋ ಸೋರಿಕೆಯಾಗಿದ್ದು, ಮಂಡ್ಯ ಜಿಲ್ಲಾಧಿಕಾರಿ ಎಂ.ವಿ. ವೆಂಕಟೇಶ ಈ ಘಟನೆಯ ವಿಚಾರಣೆಯನ್ನು ಕೈಬಿಡುತ್ತಾರೆ. ಕೇವಲ ೪ ಛಾಯಾಚಿತ್ರಗಳಿಂದ ವಿಚಾರಣೆ ಪ್ರಕ್ರಿಯೆ ಪೂರ್ಣಗೊಳ್ಳುವುದಿಲ್ಲ ಎಂದು ಆಡಿಯೋದಲ್ಲಿ ಮಾತನಾಡಿದ್ದರು.
ಮುರುಗೇಶ್ ಮತ್ತು ಜಾಸಿಮ್ ಖಾನ್ ವಿರುದ್ಧ ಮದ್ದೂರ ಪೊಲೀಸ್ ಠಾಣೆಯಲ್ಲಿ ನೋಂದಾಯಿಸಲಾದ ಪ್ರಥಮ ಮಾಹಿತಿ ವರದಿಯಲ್ಲಿ ಆರೋಪ ಹೊರಿಸಲಾಗಿದೆ. ನಾರಾಯಣನಿಗೆ ಸುರಕ್ಷಾ ಸಾಧನಗಳಿಲ್ಲದೇ ಮ್ಯಾನ್‌ ಹೋಲ್‌ನಲ್ಲಿ ಇಳಿಯುವಂತೆ ಒತ್ತಾಯಿಸಲಾಗಿತ್ತು ಎಂದು ಕರ್ನಾಟಕ ನಗರ ಸ್ಥಳಿಯ ಸಂಸ್ಥೆಗಳ ಹೊರಗುತ್ತಿಗೆ ನೌಕರರ ಒಕ್ಕೂಟದ ಅಧ್ಯಕ್ಷ ಎಂ.ಬಿ.ನಾಗಣ್ಣಗೌಡ ಹೇಳಿದ್ದಾರೆ.
ನಾರಾಯಣ ಸಾವಿನಿಂದಾಗಿ ಸಹೋದ್ಯೋಗಿಗಳು ಪುರಸಭೆ ಕಚೇರಿಯಲ್ಲಿ ಪ್ರತಿಭಟನೆ ನಡೆಸಿದರು. ಅಲ್ಲದೇ ಫೆ.೨೬ರಂದು ಮತ್ತೊಂದು ಮುಷ್ಕರವನ್ನು ನಡೆಸುವ ಉದ್ದೇಶ ಹೊಂದಿದ್ದಾರೆ. ನಾರಾಯಣಗೆ ಮೂವರು ಮಕ್ಕಳಿದ್ದು, ಇಬ್ಬರು ಪುತ್ರಿಯರು ಕ್ರಮವಾಗಿ ೫ ಹಾಗೂ ೭ನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿದ್ದು, ಪುತ್ರ ೨ನೇ ತರಗತಿಯಲ್ಲಿ ಕಲಿಯುತ್ತಿದ್ದಾನೆ. ನಾರಾಯಣನ ಪತ್ನಿ ೫ ವರ್ಷಗಳ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದಾಳೆ. ಈಗ ಮಕ್ಕಳು ಅನಾಥರಾದಂತಾಗಿದೆ.
ಚರಂಡಿಗಳು ಅಥವಾ ಮ್ಯಾನ್‌ಹೋಲ್‌ಗಳನ್ನು ಕೈಯಿಂದ ಸ್ವಚ್ಛಗೊಳಿಸಲು ಅವಕಾಶ ನೀಡುವುದನ್ನು ನಿಲ್ಲಿಸುವಂತೆ ಕರ್ನಾಟಕ ಹೈಕೋರ್ಟ್ ಎಲ್ಲಾ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದ ಒಂದು ವಾರದ ನಂತರ ಈ ಘಟನೆ ನಡೆದಿದೆ.

ಪ್ರಮುಖ ಸುದ್ದಿ :-   ಕರ್ನಾಟಕ ಬಿಜೆಪಿ ಹಂಚಿಕೊಂಡ ಅನಿಮೇಟೆಡ್ ವೀಡಿಯೊ ತೆಗೆದುಹಾಕಿ ; ಎಕ್ಸ್​ ಗೆ ಚುನಾವಣಾ ಆಯೋಗ ಸೂಚನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement