ಹೊನ್ನಾವರ: ಇಂದು ಸಂಜೆಯಿಂದ ಬೆಳದಿಂಗಳ ಸಂಗೀತೋತ್ಸವ

ಹೊನ್ನಾವರ: ುತ್ತರ ಕನ್ನಡ ಜಿಲ್ಲೆಯ ಹೊನ್ನಾವರ  ತಾಲೂಕಿನ   ನೀಲ್ಕೋಡ ಕರಿಕಾನಮ್ಮನ ಆವಾರದಲ್ಲಿ ಫೆ.೨೭ರಂದು ೨೩ನೇ ವರ್ಷದ ಬೆಳದಿಂಗಳ ಸಂಗೀತೋತ್ಸವ ನಡೆಯಲಿದೆ.
ಕಲಾಮಂಡಲ ಹೊನ್ನಾವರ, ಎಸ್‌ಕೆಪಿ ಮ್ಯೂಸಿಕ್‌ ಟ್ರಸ್ಟ್‌ ಅರೆಅಂಗಡಿ, ಎಸ್‌ಕೆಪಿ ದೇವಸ್ಥಾನ ಟ್ರಸ್ಟ್‌ ನೀಲ್ಕೊಡು ಸಹಯೋಗದಲ್ಲಿ ಅಹೋರಾತ್ರಿ ಸಂಗೀತೋತ್ಸವ ಜರುಗಲಿದೆ. ಸಂಜೆ ೭:೧೫ಕ್ಕೆ ಸಭಾ ಕಾರ್ಯಕ್ರಮ ಜರುಗಲಿದ್ದು, ಶಾಸಕ ದಿನಕರ ಶೆಟ್ಟಿ ಉದ್ಘಾಟನೆ ನೆರವೇರಿಸುವರು. ಮುಖ್ಯ ಅತಿಥಿಯಾಗಿ ಕುಮಾರ ಬಂಗಾರಪ್ಪ, ನಾಧಮಾಧವ ರಾಷ್ಟ್ರೀಯ ಪ್ರಶಸ್ತಿಯನ್ಪುನು   ಪಂ. ಎಸ್‌.ಎಂ. ಭಟ್‌ ಕಟ್ಟಿಗೆ ಅವರಿಗೆ ನೀಡಲಾಗುತ್ತದೆ. ಅವಿನಾಶ ಹೆಬ್ಬಾರ ಸಂಸ್ಮರಣ ಯುವ ಪುರಸ್ಕಾರವನ್ನುಅವಿನಾಶ ಐತಾಳ  ಅನಿರುದ್ಧ ಐತಾಳ ಅವರಿಗೆ ನೀಡಲಾಗುವುದು. ವೇ.ಸುಬ್ರಮಣ್ಯ ಭಟ್‌, ವಿಷ್ಣು ಭಟ್‌ ಆಗಮಿಸುವರು. ಡಾ.ಎಂ.ಜಿ. ಹೆಗಡೆ ಅಧ್ಯಕ್ಷತೆ ವಹಿಸುವರು.
ಶ್ರೀಧರ ಹೆಗಡೆ ಕಲ್ಭಾಗ, ರೇಖಾ ದಿನೇಶ, ವಸುಂಧರಾ ಭಟ್‌, ವಿನಾಯಕ ಹೆಗಡೆ ಹಿರೇಹದ್ದ, ಸುಪ್ರಿಯಾ ಹೆಗಡೆ ಹಿತ್ಲಳ್ಳಿ, ವಿನಾಯಕ ಹೆಗಡೆ ಮುರ್ತ್ಮುಡು, ಶ್ರೀಲತಾ ಗುರುರಾಜ ಹೆಗಡೆ ಆಡುಕಳ, ಅನಿರುದ್ಧ ಐತಾಳ, ಕೇದಾರ ಮರವಂತೆ ಅವರಿಂದ ಹಿಂದೂಸ್ತಾನಿ ಗಾಯನ ನಡೆಯಲಿದೆ, ಅಲ್ಲದೆ ಶಿರಸಿಯ ಪ್ರಕಾಶ ಹೆಗಡೆ ಅವರ ಹಾರ್ಮೋನಿಯಂ ಸೋಲೊ, ರಾಮಕೃಷ್ಣ ಹೆಗಡೆ ಹಿತ್ಲಸರ ಸಿತಾರ್‌, ಸುಧೀರ ಹೆಗಡೆ ಕನಮುಲ್ಲೆ ಕೊಳಲು ವಾದನ ನಡೆಯಲಿದೆ.  ಉದಯೋನ್ಮುಖ ಕಲಾವಿರಾದ ಅಜಯ ಹೆಗಡೆ ಶಿರಸಿ  ಹಾಗೂ ಹೇಮಂತ್‌ ಭಟ್‌ ಅವರಿಂದ ಹಾರಮೋನಿಯಂ ಜುಗಲ್‌ ಬಂಧಿ ಸಹ ನಡೆಯಲಿದೆ.

ಹಾರ್ಮೋನಿಯಂನಲ್ಲಿ ಗೌರೀಶ ಯಾಜಿ ಕೂಜಳ್ಳಿ, ಹರಿಶ್ಚಂದ್ರ ನಾಯ್ಕ ಇಡಗುಂಜಿ, ಭರತ್‌ ಹೆಗಡೆ ಹೆಬ್ಬಲಸು ಪಾಲ್ಗೊಳ್ಳಲಿದ್ದಾರೆ. ತಬಲಾದಲ್ಲಿ ರಾಜು ಹೆಬ್ಬಾರ್‌, ಭಾರವಿ ದೇರಾಜೆ, ಮಧು ಕುಡಾಲ್ಕರ್‌, ಎಂ.ಎಸ್‌. ಭಟ್‌ ಕಟ್ಟಿಗೆ ಮೊದಲಾದವರು ಪಾಲ್ಗೊಳ್ಳಿದ್ದಾರೆ.

 

ಎಂದು ಪ್ರಕಟನೆ ತಿಳಿಸಿದೆ.

3.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement