ಎನ್‌ಡಿಎ ಮೀನುಗಾರಿಕೆ ಸಚಿವಾಲಯ ಆರಂಭವಾದಾಗ ರಾಹುಲ್‌ ರಜೆ ಮೇಲಿದ್ರು: ಶಾ ಟೀಕೆ

ಎನ್‌ಡಿಎ ಸರಕಾರ ೨೦೧೯ರಲ್ಲಿ ಮೀನುಗಾರಿಕೆ ಸಚಿವಾಲಯ ಆರಂಭಿಸಿದಾಗ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ರಜೆಯಲ್ಲಿದ್ದರು ಎಂದು ಗೃಹ ಸಚಿವ ಅಮಿತ್‌ ಶಾ ಟೀಕಿಸಿದರು.
ಕೆಲ ದಿನಗಳ ಹಿಂದೆ ರಾಹುಲ್ ಗಾಂಧಿ ಅವರು ಮೀನುಗಾರಿಕೆ ಇಲಾಖೆ ಏಕೆ ಇಲ್ಲ ಎಂದು ಕೇಳಿದ್ದರು. ಮೀನುಗಾರಿಕಾ ಇಲಾಖೆ 2 ವರ್ಷಗಳಿಂದ ಅಸ್ತಿತ್ವದಲ್ಲಿದೆ ಎಂಬ ವಿಷಯ ತಿಳಿಯದ ನಾಯಕನನ್ನು ಜನರು ಹೇಗೆ ಸಹಿಸಿಕೊಳ್ಳುತ್ತಾರೋ ಗೊತ್ತಿಲ್ಲ ಎಂದರು.
ರಾಹುಲ್ ಗಾಂಧಿ ಫೆಬ್ರವರಿ 17 ರಂದು ಪ್ರತ್ಯೇಕ ಮೀನುಗಾರಿಕೆ ಸಚಿವಾಲಯದ ಅಗತ್ಯತೆಯ ಬಗ್ಗೆ ಮಾತನಾಡಿದ್ದರು. ಇದರ ನಂತರ, ಪ್ರಧಾನಿ ನರೇಂದ್ರ ಮೋದಿ ಮತ್ತು ಗಿರಿರಾಜ್ ಸಿಂಗ್ ಮತ್ತು ಕಿರೆನ್ ರಿಜಿಜು ಸೇರಿದಂತೆ ಹಲವಾರು ಕೇಂದ್ರ ಸಚಿವರು ಕಾಂಗ್ರೆಸ್ ನಾಯಕನನ್ನು ಟೀಕಿಸಿದ್ದರು. ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯವು ಈಗಾಗಲೇ ಅಸ್ತಿತ್ವದಲ್ಲಿದೆ ಎಂದು ತಿಳಿಸಿದ್ದರು.
ನನ್ನ ರಾಜಕೀಯ ಅನುಭವದ ಆಧಾರದ ಮೇಲೆ, ಮುಂದಿನ ಚುನಾವಣೆಗಳಲ್ಲಿ ಪುದುಚೇರಿಯಲ್ಲಿ ಬಿಜೆಪಿ ನಾಯಕತ್ವದಲ್ಲಿ ಎನ್‌ಡಿಎ ಸರ್ಕಾರ ರಚನೆಯಾಗಲಿದೆ ಎಂದು ನಾನು ಹೇಳುತ್ತೇನೆ ಎಂದು ಅವರು ಹೇಳಿದರು.
ಪುದುಚೇರಿಯಲ್ಲಿ 30 ವಿಧಾನಸಭಾ ಸ್ಥಾನಗಳಿಗೆ ಏಪ್ರಿಲ್ 6 ರಂದು ಮತದಾನ ನಡೆಯಲಿದೆ.

ಪ್ರಮುಖ ಸುದ್ದಿ :-   ಮೋದಿ, ಆರ್‌ಎಸ್‌ಎಸ್‌ ನ 'ಅವಹೇಳನಕಾರಿ' ವ್ಯಂಗ್ಯಚಿತ್ರ : ಕಾರ್ಟೂನಿಸ್ಟ್‌ ಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ಮಧ್ಯಪ್ರದೇಶ ಹೈಕೋರ್ಟ್‌

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement