ಜೆಡಿಎಸ್‌ಗೆ ಥೂ….ಎಂದು ಉಗಿದು ಕಾಂಗ್ರೆಸ್‌ ಸೇರಿದ ದೇವೆಗೌಡರ ಸಂಬಂಧಿ..!

ಪಿರಿಯಾಪಟ್ಟಣ: ಜೆಡಿಎಸ್‌ ಪಕ್ಷಕ್ಕೆ ಯಾವುದೇ ತತ್ವ ಸಿದ್ಧಾಂತವಿಲ್ಲ, ಕೇವಲ ಸ್ವಾರ್ಥ ಹಾಗೂ ಅವಕಾಶವಾದಿ ರಾಜಕಾರಣ ಮಾತ್ರ ಗೊತ್ತಿದೆ ಎಂದು ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರಿದ ಮಾಜಿ ಶಾಸಕ ಕೆ. ವೆಂಕಟೇಶ ಆರೋಪ ಮಾಡಿದರು.
ತಾಲೂಕಿನ ಭುವನಹಳ್ಳಿಯಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡ ವೆಂಕಟೇಶ ಮಾತನಾಡಿ, ೨೫ ವರ್ಷಗಳಿಂದ ಜೆಡಿಎಸ್‌ನಲ್ಲಿದ್ದೆ. ಎಚ್‌.ಡಿ. ದೇವೆಗೌಡರು ನಮ್ಮ ಸಂಬಂಧಿಕರು. ಆದರೆ ಜೆಡಿಎಸ್‌ ಪಕ್ಷದವರು ತತ್ವ, ಸಿದ್ಧಾಂತ, ನಿಷ್ಠಾವಂತ ಕಾರ್ಯಕರ್ತರಿಗೆ ಬೆಲೆ ಕೊಡದೇ ಕೇವಲ ಸ್ವಾರ್ಥ ರಾಜಕಾರಣ ಮಾಡಿದ ಕಾರಣ ಜೆಡಿಎಸ್‌ನಿಂದ ಹೊರ ಬಂದಿದ್ದೇನೆಯೇ ಹೊರತು ಸಚಿವ ಸ್ಥಾನ ಕೊಟ್ಟಿಲ್ಲ ಎಂಬುದು ಸರಿಯಲ್ಲ ಎಂದರು.
ಕಾಂಗ್ರೆಸ್‌ ಪಕ್ಷಕ್ಕೆ ಸೇರುವಾಗ ಮುಖಂಡರೊಂದಿಗೆ ಯಾವುದೇ ಮಾತುಕತೆ ನಡೆಸಿಲ್ಲ. ತಾಲೂಕಿನ ಅಭಿವೃದ್ಧಿ ವಿಚಾರದಲ್ಲಿ ಪ್ರತಿ ಹಳ್ಳಿಗಳಲ್ಲಿ ಸಮೀಕ್ಷೆ ನಡೆಯಲಿ. ಯಾರ ಅವಧಿಯಲ್ಲಿ ಎಷ್ಟು ಶಾಶ್ವತವಾಗಿ ಉಳಿಯುವ ಕಾರ್ಯಗಳು ನಡೆದಿವೆ ಎಂಬುದನ್ನು ಜನರಿಗೆ ತಿಳಿಸಬೇಕು. ಅಗ್ನಿಶಾಮಕ ಠಾಣೆ, ಸಾರಿಗೆ ಘಟಕ, ಸಾರ್ವಜನಿಕ ಆಸ್ಪತ್ರೆ ಮೆಲ್ದರ್ಜೆ, ವಿವಿಧ ಜನಾಂಗಗಳ ಸಮುದಾಯ ಭವನ ಮಂಜೂರು, ಪಾಲಿಟೆಕ್ನಿಕ್‌ ಮಂಜೂರು, ಮಿನಿ ವಿಧಾನಸೌಧ, ಪುರಸಭಾ ಕಟ್ಟಡ, ಉಗ್ರಾಣ ನಿರ್ಮಾಣ ಸೇರಿದಂತೆ ಶಾಶ್ವತವಾಗಿ ಉಳಿಯುವ ಕೆಲಸಗಳನ್ನು ಮಾಡಿದ್ದೇನೆ. ಈಗಿನ ಶಾಸಕರು ಕೈಯಲ್ಲಿ ಗುದ್ದಲಿ ಹಿಡಿದು ಕೇವಲ ಕಿತ್ತು ಹೋದ ರಸ್ತೆಗಳಿಗೆ ತೇಪೆ ಹಾಕುವುದಕ್ಕೆ ಚಾಲನೆ ನೀಡಿ ಅಭಿವೃದ್ಧಿ ಎಂದರೆ ಯಾರು ಒಪ್ಪುತ್ತಾರೆ ಎಂದರು.
ನಾನು ಮಾಡಿದ ಕಾರ್ಯವನ್ನು ಜನರಿಗೆ ತಿಳಿಸದಿದ್ದರಿಂದ ಕಳೆದ ಚುನಾವಣೆಯಲ್ಲಿ ನನಗೆ ಸೋಲಾಯಿತು. ಈಗಿನ ಶಾಸಕರ ನಡೆಯಿಂದ ತಾಲೂಕಿನ ಜನರು ಬೇಸತ್ತಿದ್ದಾರೆ. ದುರಾಡಳಿತಕ್ಕೆ ಜನರು ತಕ್ಕ ಪಾಠ ಕಲಿಸುವುದರಲ್ಲಿ ಸಂಶಯವಿಲ್ಲ ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ಇನ್ಮುಂದೆ ಎಸ್ ​ಎಸ್ಎ ಲ್ ​ಸಿಗೆ ಗ್ರೇಸ್ ಮಾರ್ಕ್ಸ್ ರದ್ದು ಮಾಡಲು ಸಿಎಂ ಸಿದ್ದರಾಮಯ್ಯ ಸೂಚನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement