ರಾಜ್ಯದ ೬೮ ಲಕ್ಷ ರೈತರಿಗೆ ಸ್ವಾಭಿಮಾನಿ ರೈತ ಕಾರ್ಡ್

ಧಾರವಾಡ: ರಾಜ್ಯದ ರೈತರಿಗೆ ಯಾವುದೇ ಬಗೆಯ ಗುರುತಿನ ಚೀಟಿ ಇಲ್ಲ. ಈ ನಿಟ್ಟಿನಲ್ಲಿ ರೈತರಿಗೆ ‘ಸ್ವಾಭಿಮಾನಿ ರೈತ’ ಎಂಬ ಗುರುತಿನ ಚೀಟಿ ವಿತರಿಸಲು ನಿರ್ಧರಿಸಲಾಗಿದೆ ಎಂದು ರಾಜ್ಯ ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಧಾರವಾಡ ಜಿಲ್ಲೆಯ ನಲವಗುಂದ ತಾಲೂಕಿನಲ್ಲಿ ಆಯೋಜಿಸಲಾಗಿದ್ದ ‘ರೈತರೊಂದಿಗೆ ಒಂದು ದಿನ’ ಕಾರ್ಯಕ್ರಮ ಮಾತನಾಡಿದ ಸಚಿವರು, ‘ರಾಜ್ಯದ ರೈತರಿಗೆ ಯಾವ ಗುರುತಿನ ಚೀಟಿಯೂ ಇಲ್ಲ. ಹೀಗಾಗಿ ರಾಜ್ಯ ಸರ್ಕಾರವು ಚಿಂತನೆ ನಡೆಸಿದ್ದು, ರಾಜ್ಯದ ರೈತರಿಗೆ ‘ಸ್ವಾಭಿಮಾನಿ ರೈತ’ ಎಂಬುವ ಗುರುತಿನ ಚೀಟಿ ವಿತರಿಸಲು ನಿರ್ಧರಿಸಲಾಗಿದೆ. ಇದರಲ್ಲಿ ರೈತನ ಭಾವಚಿತ್ರ, ಆಧಾರ ಸಂಖ್ಯೆ, ಗ್ರಾಮ, ವಿಳಾಸ ದಾಖಲಾಗಿರುತ್ತದೆ. ಕ್ಯೂ ಆರ್‌ ಕೋಡ್‌ ಅದರಲ್ಲಿ ಇರಲಿದೆ. ಈಗಾಗಲೇ ಕೊಪ್ಪಳ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ 1.5 ಲಕ್ಷ ರೈತರಿಗೆ ಈ ಕಾರ್ಡ್‌ ವಿತರಿಸಲಾಗುತ್ತಿದ್ದು, ಮುಂದಿನ ದಿನಗಲಲ್ಲಿ ರಾಜ್ಯದ ‌೬8 ಲಕ್ಷ ರೈತರಿಗೆ ಇದನ್ನು ವಿಸ್ತರಿಸಲಾಗುವುದು’ ಎಂದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement