ಕೇಂದ್ರೀಯ ತನಿಖಾ ಏಜೆನ್ಸಿಗಳ ಕಚೇರಿಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಕೆ: ಕೇಂದ್ರದ ಮೇಲೆ ಸುಪ್ರೀಂಕೋರ್ಟ್‌ ಅತೃಪ್ತಿ

ನವ ದೆಹಲಿ: ಸಿಬಿಐ, ಇಡಿ ಮತ್ತು ಎನ್ ಐಎ ಒಳಗೊಂಡಂತೆ ತನಿಖಾ ಏಜೆನ್ಸಿಗಳ ಕಚೇರಿಗಳಲ್ಲಿ ಸಿಸಿಟಿವಿ ಕ್ಯಾಮರಾಗಳ ಅಳವಡಿಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೆಚ್ಚಿನ ಸಮಯಾವಕಾಶ ಕೇಳಿರುವುದಕ್ಕೆ ಸುಪ್ರೀಂ ಕೋರ್ಟ್ ಮಂಗಳವಾರ ಅಸಮಾಧಾನ ವ್ಯಕ್ತಪಡಿಸಿದೆ.
ನ್ಯಾಯಮೂರ್ತಿ ಆರ್ ಎಫ್ ನಾರಿಮನ್ ನೇತೃತ್ವದ ನ್ಯಾಯಪೀಠ, ಈ ವಿಷಯವು ನಾಗರಿಕರ ಹಕ್ಕುಗಳಿಗೆ ಸಂಬಂಧಿಸಿದೆ ಎಂದು ಅಭಿಪ್ರಾಯಪಟ್ಟಿದೆ. ಈ ವಿಷಯದಲ್ಲಿ ಮುಂದೂಡಿಕೆ ಕೋರಿ, ಕೇಂದ್ರ ಸರ್ಕಾರ ಸಲ್ಲಿಸಿದ ಪತ್ರದಲ್ಲಿ ನೀಡಲಾದ ನೆಪಗಳನ್ನು ಸ್ವೀಕರಿಸಲಾಗದು ಎಂದು ಹೇಳಿದೆ. ಸಿಸಿಟಿವಿ ಅಳವಡಿಸದೆ ಸುಮ್ಮನೆ ಕಾಲಹರಣ ಮಾಡುತ್ತಿದ್ದೀರಿ ಎಂದು ನ್ಯಾಯಾಧೀಶರಾದ ಬಿಆರ್ ಗವಾಯಿ ಮತ್ತು ಹೃಷಿಕೇಶ್ ರಾಯ್ ಅವರನ್ನೊಳಗೊಂಡ ಪೀಠ, ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಹೇಳಿದೆ.
ಸಿಬಿಐ, ರಾಷ್ಟ್ರೀಯ ವಿಚಾರಣಾ ಏಜೆನ್ಸಿ, ಇಡಿ ಮತ್ತಿತರ ಕೇಂದ್ರೀಯ ತನಿಖಾ ಸಂಸ್ಥೆಗಳ ಕಚೇರಿಗಳಲ್ಲಿ ಸಿಸಿಟಿವಿ ಕ್ಯಾಮರಾಗಳು ಮತ್ತು ಹೇಳಿಕೆ ದಾಖಲು ಸಲಕರಣೆಗಳನ್ನು ಅಳವಡಿಸಬೇಕೆಂದು ಕಳೆದ ವರ್ಷದ ಡಿಸೆಂಬರ್ 2 ರಂದು ಅಪೆಕ್ಸ್ ಕೋರ್ಟ್ ನಿರ್ದೇಶನ ನೀಡಿತ್ತು.
ಈ ವಿಚಾರವು ಹೆಚ್ಚಿನ ಪರಿಣಾಮ ಬೀರಬಹುದೆಂದು ತುಷಾರ್ ಮೆಹ್ತಾ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ವಿಚಾರಣೆ ವೇಳೆಯಲ್ಲಿ ಹೇಳಿದರು. ಇದು ನಾಗರಿಕ ಹಕ್ಕಗಳಿಗೆ ಸಂಬಂಧಿಸಿದೆಯೇ ಎಂದು ಕೇಳಿದ ನ್ಯಾಯಾಲಯ, ನೆಪಗಳನ್ನು ಸ್ವೀಕರಿಸುವುದಿಲ್ಲ ಎಂದು ಹೇಳಿತು.
ಈ ವಿಚಾರಕ್ಕೆ ಸಂಬಂಧಿಸಿದಂತೆ ಅಫಿಡವಿಟ್ ಸಲ್ಲಿಸಲು ಸಮಾಯವಕಾಶವನ್ನು ಮೆಹ್ತಾ ಕೋರಿದರು. ಅಫಿಡವಿಟ್ ಸಲ್ಲಿಸಲು ಮೂರು ವಾರಗಳ ಸಮಾಯವಕಾಶವನ್ನು ಸುಪ್ರೀಂಕೋರ್ಟ್ ನೀಡಿತು.

ಪ್ರಮುಖ ಸುದ್ದಿ :-   ನೂಪುರ್ ಶರ್ಮಾ ಸೇರಿದಂತೆ ಹಲವು ಹಿಂದೂ ನಾಯಕರ ಹತ್ಯೆಗೆ ಸಂಚು: ಮೌಲ್ವಿ ಬಂಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement