ನೌಕರಿ ಭರವಸೆ ನೀಡಿ ಯುವತಿ ಮೇಲೆ ಸಚಿವರಿಂದ ಲೈಂಗಿಕ ದೌರ್ಜನ್ಯವೋ ಅಥವಾ ಬ್ಲ್ಯಾಕ್‌ಮೇಲೋ..?

ಬೆಂಗಳೂರು: ರಾಜ್ಯದ ಜಲಸಂಪನ್ಮೂಲ ಸಚಿವ ಹಾಗೂ ಪ್ರಬಾವಿ ರಾಜಕಾರಣಿ ರಮೇಶ್ ಜಾರಕಿಹೊಳಿ ರಾಸಲೀಲೆ ನಡೆಸಿದ್ದಾರೆ ಎನ್ನಲಾದ ಸಿಡಿ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸುತ್ತಿದೆ. ಯುವತಿಗೆ ಕೆಪಿಟಿಸಿಎಲ್ ನಲ್ಲಿ ನೌಕರಿ ಕೊಡಿಸುವುದಾಗಿ ಭರವಸೆ ನೀಡಿ ಸಚಿವರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

ನಾಗರಿಕ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ದಿನೇಶ್ ಕಲ್ಲಹಳ್ಳಿ ಎಂಬುವವರು ಈ ಬಗ್ಗೆ ದೂರು ನೀಡಿದ್ದಾರೆ.ಇದು ನಿಜವಾಗಿಯೂ ಲೈಂಗಿಕ ದೌರ್ಜನ್ಯವೋ ಅಥವಾ ಬ್ಲ್ಯಾಕ್ಮೇಲ್‌ ತಂತ್ರವೋ ಅಥವಾ ನಕಲಿಯೋ ಎಂಬುದರ ಸತ್ಯಾಸತ್ಯತೆ ತಖೆಯಿಂದ ತಿಳಿದುಬರಬೇಕಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುವತಿಗೆ ಹಾಗೂ ಆಕೆಯ ಇಡೀ ಕುಟುಂಬಕ್ಕೆ ಜೀವ ಬೆದರಿಕೆ ಇದ್ದು, ಯುವತಿ ಕುಟುಂಬದವರ ಮನವಿ ಮೇರೆಗೆ ಅವರ ಪರವಾಗಿ ನಾನು ಪೊಲೀಸ್‌ ಕಮಿಶನರ್‌ ಅವರಿಗೆ ದೂರು ನೀಡಲು ಬಂದಿದ್ದೇನೆ ಎಂದರು.
ಉತ್ತರ ಕರ್ನಾಟಕ ಮೂಲದ ಯುವತಿ ಬೆಂಗಳೂರಿನಲ್ಲಿ ವಾಸವಿದ್ದು, ಯುವತಿಯು ಡ್ಯಾಂ ಒಂದರ ಕಿರುಚಿತ್ರ ನಿರ್ಮಾಣ ಕುರಿತು ಮಾತನಾಡಲು ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಭೇಟಿಯಾಗಿದ್ದಳು. ಡ್ರೋಣ್ ಕ್ಯಾಮೆರಾ ಮೂಲಕ ಡ್ಯಾಂ ಚಿತ್ರೀಕರಣಕ್ಕೆ ಅವಕಾಶ ಕೋರಿದ್ದಳು. ಈ ವೇಳೆ ಕೆಪಿಟಿಸಿಎಲ್ ನಲ್ಲಿ ಕೆಲಸ ಕೊಡುವುದಾಗಿ ಆಮಿಷವೊಡ್ಡಿ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ.  ಕೆಲದಿನಗಳಾದರೂ ಯುವತಿಗೆ ಕೆಲಸ ನೀಡದಿದ್ದಾಗ ಯುವತಿ ಕಂಗಾಲಾಗಿದ್ದಾಳೆ. ಸಚಿವರಿಗೆ ಯುವತಿ ಬಳಿ ತನ್ನ ವಿಡಿಯೋ ಇರುವ ಬಗ್ಗೆ ಗೊತ್ತಾಗಿದೆ. ಆಗ ಯುವತಿಗೆ ಹಾಗೂ ಕುಟುಂಬದವರಿಗೆ ಸಿಡಿ ನೀಡುವಂತೆ ಬೆದರಿಕೆ ಹಾಕಿದ್ದಾರೆ. ಸಚಿವರ ರಾಸಲೀಲೆ ಸಿಡಿ ಪ್ರಕರಣದ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.  ತನಿಖೆಯಿಂದಷ್ಟೇ ಇದರ ಈ ಸಿಡಿ ಸತ್ಯಾಸತ್ಯತೆ ಹೊರಬರಲಿದೆ.

ಪ್ರಮುಖ ಸುದ್ದಿ :-   ಮತಗಟ್ಟೆ ಬಳಿ ಮಹಿಳೆಗೆ ಹೃದಯಾಘಾತ ; ತಕ್ಷಣವೇ ಸಿಪಿಆರ್‌ ಮಾಡಿ ಜೀವ ಉಳಿಸಿದ ಮತದಾನ ಮಾಡಲು ಬಂದಿದ್ದ ವೈದ್ಯ

 

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement