ಭವಿಷ್ಯ‌ ನಿಧಿ ಠೇವಣಿ ಬಡ್ಡಿ ದರ ಶೇ.8.5

ಉದ್ಯೋಗಿಗಳ ಭವಿಷ್ಯ‌ ನಿಧಿ ಠೇವಣಿಯ ಬಡ್ಡಿ ದರವನ್ನು ಶೇ.8.5 ರಲ್ಲಿ ಯಥಾಸ್ಥಿತಿ ಮುಂದುವರಿಸಲಾಗಿದೆ.
ಮೂಲ ವೇತನದಲ್ಲಿ ಉದ್ಯೋಗಿಗಳ ಭವಿಷ್ಯನಿಧಿ ಸಂಘಟನೆ ಪ್ರಕಾರ ಶೇ.12ರಷ್ಟು ಉದ್ಯೋಗಿಗಳು ಮತ್ತು ಅಷ್ಟೇ ಪ್ರಮಾಣದ ಮೊತ್ತವನ್ನು ಉದ್ಯೋಗದಾತರು ನೀಡಬೇಕಾಗುತ್ತದೆ ಎಂದು ಭವಿಷ್ಯ ನಿಧಿ ಸಂಘಟನೆ ತಿಳಿಸಿದೆ.
2020-21 ನೇ ಸಾಲಿನಲ್ಲಿ ಭವಿಷ್ಯ ನಿಧಿಯ ಠೇವಣಿ ಬಡ್ಡಿದರ ಶೇಕಡಾ 8.5 ರಲ್ಲಿ ಮುಂದುವರಿಸಲು ಕಾರ್ಮಿಕ ಭವಿಷ್ಯ ನಿಧಿ ಸಂಘಟನೆ ನಿರ್ಧರಿಸಿದೆ.
ಈ ನಿರ್ಧಾರದಿಂದಾಗಿ ದೇಶದ 50 ದಶಲಕ್ಷ ಕ್ಕೂ ಹೆಚ್ಚು ಉದ್ಯೋಗದಾತರಿಗೆ ಅನುಕೂಲವಾಗಲಿದೆ. ಉದ್ಯೋಗಿಗಳ ಭವಿಷ್ಯನಿಧಿಯ 65 ಸಾವಿರ ಕೋಟಿ ರೂಪಾಯಿಯನ್ನು ಹಣಕಾಸು ವಲಯದಲ್ಲಿ ಮಾಡಿತ್ತು ಶೇಕಡಾ 8.5 ರಷ್ಟು ಠೇವಣಿ ಮೇಲಿನ ಬಡ್ಡಿಯನ್ನು ಭವಿಷ್ಯನಿಧಿ ಉದ್ಯೋಗಿಗಳಿಗೆ ನೀಡಲಾಗುವುದು ಎಂದು ಕಾರ್ಮಿಕ ಭವಿಷ್ಯ ನಿಧಿ ಸಂಘಟನೆಯ ಆಡಳಿತ ಮಂಡಳಿಯ ಸದಸ್ಯ ವಿರ್ಜೇಶ್ ಉಪಾಧ್ಯಾಯ ಹೇಳಿದ್ದಾರೆ. 2019-20 ರಲ್ಲಿ ಭವಿಷ್ಯ ನಿಧಿಯ ಠೇವಣಿಯ ಬಡ್ಡಿದರ ಶೇ.8.15 ರಷ್ಟು ಇತ್ತು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ