ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ: ರೈಲಿನಲ್ಲಿಯೇ ಸಿನಿಮಾ, ನ್ಯೂಸ್

ನವದೆಹಲಿ: ರೈಲುಗಳಲ್ಲಿ ಪ್ರಯಾಣಿಕರಿಗೆ ಬೇಡಿಕೆಯ ಅನುಸಾರ ಚಲನಚಿತ್ರ, ಸುದ್ದಿ, ವಿಡಿಯೋಗಳನ್ನು ವಿವಿಧ ಭಾಷೆಗಳಲ್ಲಿ ಪ್ರದರ್ಶಿಸಲು ಚಿಂತನೆ ನಡೆದಿದೆ.
ಸಂಗೀತ, ಸಿನಿಮಾ, ಸಾಮಾನ್ಯ ಮನರಂಜನೆ, ಸುದ್ದಿ ಸೇರಿದಂತೆ ವಿವಿಧ ಭಾಷೆಗಳ ವಿಡಿಯೋಗಳನ್ನು ರೈಲುಗಳಲ್ಲಿ ಪ್ರದರ್ಶಿಸಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.
ಮೀಡಿಯಾ ಸರ್ವರ್ ಗಳನ್ನು ಬೋಗಿಗಳ ಒಳಗೆ ಇರಿಸಲಾಗುವುದು ಎಂದು ರೈಲ್ವೆ ಸಿಎಂಡಿ ಪುನೀತ್ ಚಾವ್ಲಾ ತಿಳಿಸಿದ್ದಾರೆ. ಇದರಿಂದಾಗಿ ಪ್ರಯಾಣಿಕರಿಗೆ ಮನರಂಜನೆ ಸಿಗಲಿದೆ. 5723 ಉಪನಗರ ರೈಲುಗಳು, 5952 ಹೆಚ್ಚು ವೈಫೈ ಸೌಲಭ್ಯ ಹೊಂದಿದ ರೈಲು ನಿಲ್ದಾಣಗಳು ಸೇರಿದಂತೆ 8731 ರೈಲುಗಳಲ್ಲಿ ಈ ಸೇವೆ ಒದಗಿಸಲಾಗುತ್ತದೆ ಎನ್ನಲಾಗಿದೆ.

4 / 5. 1

ಶೇರ್ ಮಾಡಿ :
ಪ್ರಮುಖ ಸುದ್ದಿ :-   ವೀಡಿಯೋ..| ಎರಡೂ ಕೈತೋಳುಗಳಿಲ್ಲದೆ ಡ್ರೈವಿಂಗ್‌ ಲೈಸೆನ್ಸ್‌ ಪಡೆದ ಏಷ್ಯಾದ ಮೊದಲ ಮಹಿಳೆ ಇವರು : ಕೇರಳದ ಯುವತಿಯ ಕಾರ್‌ ಚಾಲನೆಗೆ ಬೆರಗಾಗ್ತೀರಾ..!

ನಿಮ್ಮ ಕಾಮೆಂಟ್ ಬರೆಯಿರಿ

advertisement