ಸದನದಲ್ಲಿ ಶರ್ಟ್‌ ಬಿಚ್ಚಿದ ಶಾಸಕ ಸಂಗಮೇಶ: ಕೆರಳಿದ ಸ್ಪೀಕರ್‌ ಕಾಗೇರಿ

ಬೆಂಗಳೂರು: ಸದನದಲ್ಲಿ ಪ್ರತಿಭಟನೆ ನಡೆಯುತ್ತಿದ್ದ ವೇಳೆ ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್ ತಮ್ಮ ಶರ್ಟ್ ಬಿಚ್ಚಿ ಪ್ರತಿಭಟನೆ ನಡೆಇದ್ದನ್ನು ಕಂಡ ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಕೆಂಡಾಮಂಡಲವಾದ ಘಟನೆಗೆ ವಿಧಾನಸಭೆ ಗುರುವಾರ ಸಾಕ್ಷಿಯಾಯಿತು.
ಈ ರೀತಿ ನಡೆದುಕೊಂಡರೆ ಸದನದಿಂದ ಹೊರ ಕಳಿಸಬೇಕಾಗುತ್ತದೆ ಎಂದು ಅವರು ಶಾಕ ಸಂಗಮೇಶ ಅವರಿಗೆ ಎಚ್ಚರಿಕೆ ನೀಡಿದ ಪ್ರಸಂಗವೂ ನಡೆಯಿತು.
ವಿಧಾನಸಭೆಯಲ್ಲಿ ಗುರುವಾರ ಒಂದು ರಾಷ್ಟ್ರ ಒಂದು ಚುನಾವಣೆ ಕುರಿತಾಗಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ತಮ್ಮ ಭಾಷಣ ಮುಗಿಸಿ ಸದಸ್ಯರೆಲ್ಲರೂ ತಮ್ಮ ತಮ್ಮ ಆಸನಗಳಿಗೆ ಹಿಂತಿರುಗಬೇಕೆಂದು ಮನವಿ ಮಾಡಿದರು. ಆಗ ಭದ್ರಾವತಿ ಕ್ಷೇತ್ರದ ಶಾಸಕ ಬಿ.ಕೆ.ಸಂಗಮೇಶ್ ಅವರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಲು ಆರಂಭಿಸಿದರು.
ತಮ್ಮ ಶರ್ಟ್ ಕಳಚಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಲು ಆರಂಭಿಸಿದಾಗ ಕೆರಳಿದ ಸ್ಪೀಕರ್ ಅವರು, 50 ವರ್ಷ ಆಡಳಿತ ನಡೆಸಿದ ರಾಷ್ಟ್ರೀಯ ಪಕ್ಷದ ಸದಸ್ಯರು ನಡೆದುಕೊಳ್ಳುವ ರೀತಿ ಇದೇನಾ ಎಂದು ಪ್ರಶ್ನಿಸಿದರು. ನಿಮ್ಮ ಅಭಿಪ್ರಾಯಗಳು ಏನೇ ಇರಲಿ ಮೊದಲು ನಿಮ್ಮ ನಿಮ್ಮ ಸ್ಥಾನಗಳಿಗೆ ಮರಳಿ. ಈ ವಿಷಯ ಕುರಿತಾಗಿ ನಾನು ಸದನದಲ್ಲೇ ಮಾಹಿತಿ ನೀಡಿದ್ದೇನೆ.ಈ ವಿಷಯದ ಮೇಲೆ ಇಂತಿಂತವರೇ ಚರ್ಚೆ ಮಾಡುತ್ತೇವೆ ಎಂದು ಹೆಸರುಗಳನ್ನೂ ಕೊಡಲಾಗಿದ. ಬೆಳಗ್ಗೆಯಿಂದ ನಿಮ್ಮ ನಿಲುವು ಬದಲಾದರೆ ನಾನೇನು ಮಾಡಲಿ ಎಂದು ಪ್ರಶ್ನಿಸಿದರು.
ಈ ಹಂತದಲ್ಲೂ ಶಾಸಕ ಸಂಗಮೇಶ್ ಅವರು ತಮ್ಮ ಶರ್ಟ್ ಕಳಚಿ ತೋಳನ್ನು ಮೇಲೆತ್ತಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುವುದನ್ನು ಮುಂದುವರಿಸಿದರು. ಇದರಿಂದ ಮತ್ತಷ್ಟು ಕೆರಳಿದ ಸ್ಪೀಕರ್‌ ಕಾಗೇರಿ, ಒಬ್ಬ ಹಿರಿಯ ಸದಸ್ಯರಾಗಿ ನಡೆದುಕೊಳ್ಳುವ ರೀತಿ ಇದೇನಾ? ನಿಮ್ಮ ನಡವಳಿಕೆಯನ್ನು ತಿದ್ದಿಕೊಳ್ಳದಿದ್ದರೆ ಸದನದಿಂದ ಹೊರ ಹಾಕಬೇಕಾಗುತ್ತದೆ ಎಂದು ಗಂಭೀರ ಎಚ್ಚರಿಕೆ ನೀಡಿದರು.
ಆಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತಿತರರು ಬಂದು ಸಂಗಮೇಶ್ ಅವರಿಗೆ ಶರ್ಟ್ ಹಾಕಿಸಿದರು. ಸದಸ್ಯರ ಗದ್ದಲ ಮುಂದುವರಿದಿದ್ದರಿಂದ ಕಲಾಪವನ್ನು ಸಭಾಧ್ಯಕ್ಷರು 15 ನಿಮಿಷಗಳ ಕಾಲ ಮುಂದೂಡಿದರು.

ಪ್ರಮುಖ ಸುದ್ದಿ :-   ಪ್ರಜ್ವಲ್ ಅಶ್ಲೀಲ ವೀಡಿಯೊ ಪ್ರಕರಣ : ವಾದಿಸಲು ವಿಶೇಷ ಅಭಿಯೋಜಕರನ್ನು ನೇಮಿಸಿದ ರಾಜ್ಯ ಸರ್ಕಾರ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement