ಜಮ್ಮು-ಕಾಶ್ಮೀರ: ಸಹಜ ಸ್ಥಿತಿಗೆ ಮರಳಲು ಭಾರತದ ಕ್ರಮಕ್ಕೆ ಅಮೆರಿಕ ಸ್ವಾಗತ

ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಿದ ನಂತರ ಪೂರ್ಣ ಪ್ರಮಾಣದ ಆರ್ಥಿಕ ಮತ್ತು ರಾಜಕೀಯ ಸಹಜ ಸ್ಥಿತಿಗೆ ಮರಳಿಸಲು ಭಾರತ ಸರ್ಕಾರ ತೆಗೆದುಕೊಂಡ ಕ್ರಮಗಳನ್ನು ಅಮೆರಿಕ ಸರ್ಕಾರ ಸ್ವಾಗತಿಸಿದೆ.
ಭಾರತದ ಪ್ರಜಾಪ್ರಭುತ್ವ ಮೌಲ್ಯಗಳಿಗೆ ಅನುಗುಣವಾಗಿ ಕಣಿವೆ ರಾಜ್ಯದ ಕೇಂದ್ರ ಪ್ರದೇಶವನ್ನು ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಸಹಜ ಸ್ಥಿತಿಗೆ ಮರಳಿಸಲು ನವದೆಹಲಿ ಕೈಗೊಂಡ ಕ್ರಮಗಳನ್ನು ಬೈಡೆನ್ ಆಡಳಿತ ಪ್ರಸಂಶಿಸಿದೆ.
ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರ ನೆಡ್ ಪ್ರೈಸ್ ಮಾತನಾಡಿ, ಅಮೆರಿಕ ಸ್ಟೇಟ್ ಇಲಾಖೆ ಅದೇ ಸಮಯದಲ್ಲಿ ಜಮ್ಮು ಮತ್ತು ಕಾಶ್ಮೀರದ ಬೆಳವಣಿಗೆಗಳನ್ನು ತೀರ ಸಮೀಪದಿಂದ ಗಮನಿಸುತ್ತಿದೆ. ಆದರೆ, ಕಾಶ್ಮೀರದ ವಿಷಯದಲ್ಲಿ ಅಮೆರಿಕ ನೀತಿ ಮಾತ್ರ ಬದಲಾಗಿಲ್ಲ. ಕೇಂದ್ರಾಡಳಿ ಪ್ರದೇಶದ ಘೋಷಣೆ ಮತ್ತು ಭಾರತದ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಅನುಗುಣವಾಗಿ, ಆ ದೇಶ ತೆಗೆದುಕೊಂಡಿರುವ ನಿರ್ಧಾರವನ್ನು ಸಮರ್ಥಿಸುತ್ತೇವೆ ಎಂದು ಹೇಳಿದ್ದಾರೆ.
ಭಾರತ, ಅಮೆರಿಕ, ಆಸ್ಟ್ರೇಲಿಯಾ ಮತ್ತು ಜಪಾನ್ ಒಳಗೊಂಡ ಕ್ವಾಡ್ ಮುಕ್ತ ಮತ್ತು ಮುಕ್ತ ಇಂಡೋ-ಪೆಸಿಫಿಕ್ ವಲಯವನ್ನು ಖಾತರಿಪಡಿಸುವ ಗುರಿ ಹೊಂದಿದೆ. ಇತ್ತೀಚಿನ ವರ್ಷಗಳಲ್ಲಿ ಈ ವಲಯದಲ್ಲಿ ಹೆಚ್ಚುತ್ತಿರುವ ಚೀನಾದ ಮಿಲಿಟರಿ ಪ್ರಭಾವ ನಿಯಂತ್ರಿಸಲು ಕ್ವಾಡ್ ಸಾಕ್ಷಿಯಾಗಿದೆ ಎಂದು ಹೇಳಿದರು.

ಪ್ರಮುಖ ಸುದ್ದಿ :-   ವೀಡಿಯೊ...| ಶಿವಸೇನೆ ನಾಯಕಿ ಕರೆದೊಯ್ಯಲು ಬಂದಿದ್ದ ಹೆಲಿಕಾಪ್ಟರ್ ಅಪಘಾತ

5 / 5. 2

ಶೇರ್ ಮಾಡಿ :

  1. Geek

    ಇಷ್ಟು ದಿನ ಕಾಶ್ಮೀರ ಸಮಸ್ಯೆಯನ್ನು ಜೀವಂತವಾಗಿಟ್ಟಿದ್ದೇ ಅಮೇರಿಕಾ ನೇತೃತ್ವದ ಬಂಡವಾಳಶಾಹಿಗಳು

ನಿಮ್ಮ ಕಾಮೆಂಟ್ ಬರೆಯಿರಿ

advertisement