ಪುಸ್ತಕದಲ್ಲಿ ತಿದ್ದುಪಡಿಗೆ ಎನ್‌ಸಿಇಆರ್‌ಟಿಗೆ ಲೀಗಲ್‌ ನೋಟಿಸ್;ಯಾಕೆಂದರೆ ಮೊಘಲರು ದೇಗುಲ ದುರಸ್ತಿಗೆ ಅನುದಾನ ನೀಡಿದ ಬಗ್ಗೆ ಅದರ ಬಳಿ ಪುರಾವೆಯೇ ಇಲ್ಲ..!!

ಆರ್‌ಟಿಐ ಕಾರ್ಯಕರ್ತರೊಬ್ಬರು ಎನ್‌ಸಿಇಆರ್‌ಟಿಗೆ (ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಷನಲ್ ರಿಸರ್ಚ್ ಅಂಡ್ ಟ್ರೈನಿಂಗ್) ಲೀಗಲ್‌ ನೋಟಿಸ್ ಕಳುಹಿಸಿದ್ದಾರೆ.
ಮೊಘಲ್ ಚಕ್ರವರ್ತಿ ಔರಂಗಜೇಬ್ ಹಾಗೂ ಷಹಜಹಾನ್‌ ಹಿಂದೂ ದೇವಾಲಯಗಳ ದುರಸ್ತಿಗೆ ಅನುದಾನ ನೀಡಿದ 12 ನೇ ತರಗತಿ ಪುಸ್ತಕಗಳಲ್ಲಿನ ಪಾಠದ ಬಗ್ಗೆ ತಮ್ಮ ಬಳಿ ಯಾವುದೇ ಉಲ್ಲೇಖಗಳಿಲ್ಲ ಎಂದು ಎನ್‌ಸಿಇಆರ್‌ಟಿ ಹೇಳಿದ ನಂತರ ಪುಸ್ತಕದಲ್ಲಿ ತಿದ್ದುಪಡಿ ಮಾಡುವಂತೆ ಸಹ ಅವರು ನೋಟಿಸ್‌ನಲ್ಲಿ ಕೋರಿದ್ದಾರೆ ಎಂದು ಓಪ್‌ಇಂಡಿಯಾ ವರದಿ ಮಾಡಿದೆ.
ವರದಿಗಳ ಪ್ರಕಾರ, ಭರತಪುರದ ಆರ್‌ಟಿಐ ಕಾರ್ಯಕರ್ತ ದಪಿಂದರ್ ಸಿಂಗ್ ಎನ್‌ಸಿಇಆರ್‌ಟಿ ಪುಸ್ತಕಗಳಲ್ಲಿ ಉಲ್ಲೇಖಿಸಿರುವ ಮಾಹಿತಿಯು ಸತ್ಯವನ್ನು ಆಧರಿಸದೇ ಇರುವ ಕಾರಣ ಶಾಲಾ ಮಕ್ಕಳಿಗೆ ಕಲಿಸಿದ ಪುಸ್ತಕಗಳಲ್ಲಿ ಈ ಬಗ್ಗೆ ತಿದ್ದುಪಡಿ ಮಾಡಲು ಒತ್ತಾಯಿಸಿದ್ದಾರೆ.
ಯಾವುದೇ ಪುರಾವೆಗಳಿಲ್ಲದೆ ಮೊಘಲ್ ದೊರೆಗಳಾದ ಔರಂಗಜೇಬ್ ಮತ್ತು ಷಹಜಹಾನ್ ಅವರನ್ನು ಶಾಲಾ ಇತಿಹಾಸ ಪುಸ್ತಕಗಳಲ್ಲಿ ಶ್ರೇಷ್ಠರೆಂದು ಚಿತ್ರಿಸಲಾಗಿದೆ ಎಂದು ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. ಇತಿಹಾಸ ಪುಸ್ತಕಗಳು ಸತ್ಯಗಳನ್ನು ಆಧರಿಸಿರಬೇಕು ಮತ್ತು ಯಾವುದೇ ಪುರಾವೆಗಳಿಲ್ಲದ ಮಾಹಿತಿಯ ಬಗ್ಗೆ ಹೇಳಿದರೆ ಅದು ಇತಿಹಾಸವನ್ನು ವಿರೂಪಗೊಳಿಸುತ್ತದೆ. ದೇವಾಲಯಗಳ ದುರಸ್ತಿ ಕೆಲಸಕ್ಕೆ ಮೊಘಲ್ ದೊರೆ ಅನುದಾನವನ್ನು ನೀಡಿದ್ದಕ್ಕಾಗಿ ಜನವರಿ ತಿಂಗಳಲ್ಲಿ ಆರ್‌ಟಿಐ ಅರ್ಜಿ ಸಲ್ಲಿಸಲಾಗಿತ್ತು. ಇತಿಹಾಸ ಪಠ್ಯಪುಸ್ತಕದ 234ನೇ ಪುಟದಲ್ಲಿ, “ಎಲ್ಲಾ ಮೊಘಲ್ ಚಕ್ರವರ್ತಿಗಳು ಪೂಜಾ ಸ್ಥಳಗಳ ಕಟ್ಟಡ ಮತ್ತು ನಿರ್ವಹಣೆಯನ್ನು ಬೆಂಬಲಿಸಲು ಅನುದಾನ ನೀಡಿದರು. ಯುದ್ಧದ ಸಮಯದಲ್ಲಿ ದೇವಾಲಯಗಳು ನಾಶವಾದಾಗಲೂ, ಅವುಗಳ ದುರಸ್ತಿಗಾಗಿ ಅನುದಾನವನ್ನು ನೀಡಲಾಯಿತು ಇದು ಷಹಜಹಾನ್ ಮತ್ತು ಔರಂಗಜೇಬನ ಆಳ್ವಿಕೆಯಿಂದ ನಮಗೆ ತಿಳಿದಿದೆ ಎಂದು ಎನ್‌ಸಿಇಆರ್‌ಟಿ ೧೨ನೇ ತರಗತಿ ಪಠ್ಯದಲ್ಲಿದೆ.
ಹೀಗಾಗಿ ಔರಂಗಜೇಬ್‌ ದೇವಸ್ತಾನಗಳ ದುರಸ್ತಿಗೆ ಅನುದಾನ ನೀಡಿದ ಬಗ್ಗೆ ಅರ್ಜಿದಾರರು ಎನ್‌ಸಿಆರ್‌ಟಿಸಿ ಬಳಿ ಎರಡು ವಿವರಗಳನ್ನು ಕೋರಿದ್ದರು. ಮೊದಲನೆಯದಾಗಿ, ಷಹಜಹಾನ್ ಮತ್ತು ಔರಂಗಜೇಬರ ಆಳ್ವಿಕೆಯಲ್ಲಿ ಯುದ್ಧದಲ್ಲಿ ನಾಶವಾದ ದೇವಾಲಯಗಳನ್ನು ಪುನರ್ನಿರ್ಮಿಸಲು ಮೊಘಲರು ಅನುದಾನ ನೀಡಿದ್ದಾರೆ ಎಂದು ಎನ್‌ಸಿಇಆರ್‌ಟಿ ತೀರ್ಮಾನಿಸಿದ ಮೂಲ ಮತ್ತು ಎರಡನೆಯದಾಗಿ, ಔರಂಗಜೇಬ್ ಮತ್ತು ಷಹಜಹಾನ್ ದುರಸ್ತಿ ಮಾಡಿದ ದೇವಾಲಯಗಳ ಸಂಖ್ಯೆ. ಈ ಎರಡೂ ಪ್ರಶ್ನೆಗಳಿಗೆ ಇಲಾಖೆಯ ಫೈಲ್‌ಗಳಲ್ಲಿ ಮಾಹಿತಿ ಲಭ್ಯವಿಲ್ಲ ಎಂಬ ಉತ್ತರ ಬಂದಿದೆ. ಸಾಮಾಜಿಕ ವಿಜ್ಞಾನ ಶಿಕ್ಷಣ ವಿಭಾಗದ ಮುಖ್ಯಸ್ಥ ಮತ್ತು ಸಾರ್ವಜನಿಕ ಮಾಹಿತಿ ಅಧಿಕಾರಿ ಪ್ರೊಫೆಸರ್ ಗೌರಿ ಶ್ರೀವಾಸ್ತವ ಅವರು ಈ ಉತ್ತರ ನೀಡಿದ್ದಾರೆ.

ಪ್ರಮುಖ ಸುದ್ದಿ :-   ಪತ್ನಿಗೆ ವಿಡಿಯೋ ಕಾಲ್‌ ಮಾಡಿ ಕ್ಯಾಮರಾ ಮುಂದೆಯೇ ಮಗಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ತಂದೆ...!

ಕಲ್ಪನೆಯ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಇತಿಹಾಸವನ್ನು ಕಲಿಸಲಾಗುತ್ತದೆ ಎಂದು ಮತ್ತೊಬ್ಬ ಆರ್‌ಟಿಐ ಕಾರ್ಯಕರ್ತ ಸಂಜೀವ್ ವಕೀಲ್ ಹೇಳಿದ್ದಾರೆ ಎಂದು ಎನ್‌ಬಿಟಿ ವರದಿ ಹೇಳಿದೆ. “ಎನ್‌ಸಿಇಆರ್‌ಟಿ ಪುಸ್ತಕಗಳನ್ನು ಶೈಕ್ಷಣಿಕ ಪುಸ್ತಕಗಳಿಗೆ ಮಾನದಂಡವೆಂದು ಪರಿಗಣಿಸಲಾಗಿದೆ. ನಾಗರಿಕ ಸೇವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಕೆಗೆ ಸಹ ಅವುಗಳನ್ನು ಬಳಸಲಾಗುತ್ತದೆ. ಭವಿಷ್ಯದ ಪೀಳಿಗೆಯನ್ನು ತಪ್ಪು ದಿಕ್ಕಿಗೆ ತಳ್ಳಲಾಗುತ್ತಿದೆ ಮತ್ತು ಇದು ಹಾನಿಕಾರಕ ಫಲಿತಾಂಶಗಳಿಗೆ ಕಾರಣವಾಗಬಹುದು ”ಎಂದು ಅವರು ಹೇಳಿದ್ದಾರೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement