ಕೊವಿಡ್‌ ಲಸಿಕೆ ಮೊದಲ ಡೋಸ್‌ ಪಡೆದ ದಲೈಲಾಮಾ

ಧರ್ಮಶಾಲಾ: ಕೋವಿಡ್-‌19 ಲಸಿಕೆಯ ಮೊದಲ ಡೋಸ್‌ ಪಡೆದ ಬೌದ್ಧ ಧರ್ಮಗುರು ದಲೈಲಾಮಾ ಅವರು, ಹೆಚ್ಚಿನ ಪ್ರಯೋಜನಕ್ಕಾಗಿʼ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಶನಿವಾರ ಜನರಲ್ಲಿ ಮನವಿ ಮಾಡಿದರು.
ಈ ಚುಚ್ಚುಮದ್ದು ತುಂಬಾ ಉಪಕಾರಿ ಮತ್ತು ಉತ್ತಮವಾದುದು. ಇತರ ರೋಗಿಗಳೂ ಹೆಚ್ಚಿನ ಪ್ರಯೋಜನಕ್ಕಾಗಿ ಈ ಚುಚ್ಚುಮದ್ದು ಪಡೆಯಬಹುದು. ನಾನು ಅದನ್ನು ತೆಗೆದುಕೊಂಡಿದ್ದೇನೆ. ಜನರು ಈ ಚುಚ್ಚುಮದ್ದು ಹಾಕಿಸಿಕೊಳ್ಳುವ ಧೈರ್ಯ ಮಾಡಬೇಕು ಎಂದರು.
86 ವರ್ಷದ ಲಾಮಾ ಅವರು ಕಳೆದ ವರ್ಷ ಜನವರಿಯಿಂದಲೂ ಸ್ವಯಂ ಪ್ರತ್ಯೇಕವಾಸದಲ್ಲಿ ಉಳಿದಿದ್ದರು. ಶನಿವಾರ ತಮ್ಮ ನಿವಾಸದಿಂದ ಹೊರಬಂದು, ಇಲ್ಲಿನ ವಲಯ ಆಸ್ಪತ್ರೆಯಲ್ಲಿ ಬೆಳಗ್ಗೆ 7.10ಕ್ಕೆ ಲಸಿಕೆ ಹಾಕಿಸಿಕೊಂಡರು. ಬಳಿಕ ಸುಮಾರು ಅರ್ಧ ತಾಸು ಅವರ ಆರೋಗ್ಯದ ಮೇಲೆ ನಿಗಾ ಇಡಲಾಗಿತ್ತು.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ವೀಡಿಯೊ..| ಭಾರತದ ಆಪರೇಶನ್‌ ಸಿಂಧೂರ ದಾಳಿ ನಂತ್ರ 2019ರ ʼಪುಲ್ವಾಮಾ ಭಯೋತ್ಪಾದಕ ದಾಳಿʼಯಲ್ಲಿ ತನ್ನ ಪಾತ್ರವಿದೆ ಎಂದು ಒಪ್ಪಿಕೊಂಡ ಪಾಕಿಸ್ತಾನ..!

ನಿಮ್ಮ ಕಾಮೆಂಟ್ ಬರೆಯಿರಿ

advertisement