ಬಿಎಸ್‌ವೈ, ಈಶ್ವರಪ್ಪ ಹಗರಣ ಬಯಲಿಗೆಳೆಯುವೆ: ಶಾಸಕ ಸಂಗಮೇಶ ಎಚ್ಚರಿಕೆ

ಬೆಂಗಳೂರು: ಇನ್ನೊಂದು ತಿಂಗಳಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಅವರ ಪುತ್ರ ಸಂಸದ ಬಿ.ವೈ.ರಾಘವೇಂದ್ರ ಹಾಗೂ ಸಚಿವ ಕೆ.ಎಸ್.ಈಶ್ವರಪ್ಪ ಅವರ ಹಗರಣ, ಅಕ್ರಮ ಆಸ್ತಿಗಳ ವಿವರಗಳನ್ನು ಬಯಲು ಮಾಡುವುದಾಗಿ ಸದನದಿಂದ ಅಮಾನತಾಗಿರುವ ಭದ್ರಾವತಿ ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್ ಹೇಳಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದಾವರು,ಮುಖ್ಯಮಂತ್ರಿ ಯಡಿಯೂರಪ್ಪ, ಅವರು ಪುತ್ರ ರಾಘವೇಂದ್ರ, ಈಶ್ವರಪ್ಪ ಸಣ್ಣತನದ ರಾಜಕೀಯ ಮಾಡುತ್ತಿದ್ದಾರೆ. ನಮ್ಮ ಹಾಗೂ ಕಾರ್ಯಕರ್ತರ ಮೇಲೆ, ಕುಟುಂಬದ ಮೇಲೆ ಕೇಸ್ ಹಾಕಿದ್ದಾರೆ. ಸ್ಪೀಕರ್ ನಮಗೆ ನ್ಯಾಯ ಕೊಡಿಸಬೇಕು. ಯಡಿಯೂರಪ್ಪ ಸೂಚನೆ ಮೇರೆಗೆ ಸದನದಿಂದ ನನ್ನನ್ನು ಸ್ಪೀಕರ್ ಅಮಾನತು ಮಾಡಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಇವರ ಹಗರಣ ಹೊರಬಂದು ಬಿಜೆಪಿ ಸರ್ಕಾರ ಪತನಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನೊಂದು ತಿಂಗಳಿನಲ್ಲಿ ಅವರ ಹಗರಣ ಬಿಡುಗಡೆ ಮಾಡಿ, ಅಕ್ರಮ ಆಸ್ತಿ ದಾಖಲೆ ಬಿಡುಗಡೆ ಮಾಡುತ್ತೇನೆ. ನಾನು ಬ್ಲಾಕ್ಮೇಲ್ ಮಾಡುವ ರಾಜಕಾರಣಿಯಲ್ಲ. ಇನ್ನೂ ಮೂರು ತಿಂಗಳಷ್ಟೇ ಈ ಸರ್ಕರದ ಆಯಸ್ಸು ಎಂದರು.
ಈ ಸರ್ಕಾರವನ್ನು ಹೆಣ್ಣುಮಕ್ಕಳು ಅನುಮಾನದಿಂದ ನೋಡುವಂತಾಗಿದೆ. ವಿಧಾನಸೌಧದ ಪಾವಿತ್ರ್ಯ ಹಾಳಾಗಿದೆ. ಸತ್ಯವಂತರಾಗಿದ್ದರೆ ಆರು ಸಚಿವರು ನ್ಯಾಯಾಲಯಕ್ಕೆ ಹೋಗುವ ಅವಶ್ಯಕತೆಯೇನಿತ್ತು? ಏಕೆ ಇವರೆಲ್ಲ ಹೆದರಿಕೊಂಡು ಮಾಧ್ಯಮಗಳ ಸುದ್ದಿಪ್ರಸಾರಕ್ಕೆ ತಡೆ ತಂದಿದ್ದಾರೆ. ಇವರುಗಳನ್ನು ಜನರು ತಮ್ಮ ಸೇವೆ ಮಾಡಲಿ ಎಂದು ಆರಿಸಿ ಕಳುಹಿಸಿದ್ದರೆ, ಇವರೆಲ್ಲ ಮಾಡುತ್ತಿರುವುದೇನು ಎಂದು ಪ್ರಶ್ನಿಸಿದರು.

ಪ್ರಮುಖ ಸುದ್ದಿ :-   ದೆಹಲಿಯಲ್ಲಿ ಮತ್ತೆ ಕಾಂಗ್ರೆಸ್ಸಿಗೆ ಆಘಾತ : ಪಕ್ಷಕ್ಕೆ ರಾಜೀನಾಮೆ ನೀಡಿದ ಇಬ್ಬರು ಹಿರಿಯ ನಾಯಕರು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement