ಅಸ್ಸಾಂ: ಕಾಂಗ್ರೆಸ್ಸಿನ 40 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಅಸ್ಸಾಂ: ಅಸ್ಸಾಂ ವಿಧಾನಸಭೆ ಚುನಾವಣೆ ಮಾರ್ಚ್ 27ರಿಂದ ಮೂರು ಹಂತಗಳಲ್ಲಿ ನಡೆಯಲಿದ್ದು, ಕಾಂಗ್ರೆಸ್ ತನ್ನ 40 ಅಭ್ಯರ್ಥಿಗಳ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದೆ.
ಒಟ್ಟು ೧೨೬ ಸ್ಥಾನಗಳಿಗೆಚುನಾವಣೆ ನಡೆಯಲಿದೆ.ಅಸ್ಸಾಂನಲ್ಲಿ ಸಿಎಎ ಕಾನೂನು ಪ್ರಮುಖ ಚುನಾವಣಾ ವಿಷಯವಾಗಲಿದ್ದು, ಕಾಂಗ್ರೆಸ್‌ ಈ ಬಾರಿ ಉತ್ತರಾಂಚಲದಲ್ಲಿ ಕಳೆದುಕೊಂಡಿರುವ ವರ್ಚಸ್ಸನ್ನು ಮರಳಿ ಪಡೆಯಲು ಯತ್ನಿಸುತ್ತಿದ್ದು, ಅದಕ್ಕಾಗಿ ಅನೇಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದೆ.
ಬಿಜೆಪಿಯ ಪ್ರಬಲ ಸವಾಲಿನ ನಡುವೆ ಕಾಂಗ್ರೆಸ್ ತನ್ನ ಪಕ್ಷವನ್ನು ಅಧಿಕಾರಕ್ಕೆ ತರಲು ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.
ಕಾಂಗ್ರೆಸ್ ನೇತೃತ್ವದ ಮಹಾ ಮೈತ್ರಿಕೂಟದದಲ್ಲಿ ಎಐಯುಡಿಎಫ್‌, ಬಿಪಿಎಫ್, ಸಿಪಿಐ (ಎಂ), ಸಿಪಿಐ, ಸಿಪಿಐ (ಎಂಎಲ್) ಹಾಗೂ ಅಂಚಾಲಿಕ್ ಗಣ ಮೋರ್ಚಾವನ್ನು ಮೈತ್ರಿ ಪಕ್ಷಗಳಾಗಿ ಹೊಂದಿದ್ದು, ತನ್ನ ಪಕ್ಷದಲ್ಲಿ ಸೀಟು ಹಂಚಿಕೆ ಕುರಿತು ತೀವ್ರ ಮಾತುಕತೆ ನಡೆಸುತ್ತಿದೆ.
ಬಿಜೆಪಿಯಿಂದ ಟಿಕೆಟ್ ಸಿಗದೆ ಕಾಂಗ್ರೆಸ್ ಸೇರಿದ್ದ ಬಿಟುಪೊನ್ ಸೈಕಿಯಾ ಅವರಿಗೆ ಗೋಲಾಘಾಟ್‌ನಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಲಾಗಿದೆ. ಅಸ್ಸಾಂ ಮಾಜಿ ಸಚಿವ ಅಂಜನ್ ದತ್ತ ಅವರ ಪುತ್ರಿ ಅಂಕಿತಾ ದತ್ತ ಅಮ್ಗುರಿಯಿಂದ ಕಣಕ್ಕೆ ಇಳಿಯಲಿದ್ದಾರೆ.
ಲಾಹೋವಾಲ್‌ನಿಂದ ಮನೋಜ್ ಧನ್ವಾರ್ ಸ್ಪರ್ಧಿಸಲಿದ್ದಾರೆ. ಪ್ರಣಾಜ್ ಘಾಟೊವರ್ ಮೋರಾನ್‌ನಿಂದ ಸ್ಪರ್ಧಿಸಲಿದ್ದಾರೆ. ಅವರು ಕೂಡ ಕೇಂದ್ರ ಮಾಜಿ ಸಚಿವ ಪ್ರಬನ್ ಸಿಂಗ್ ಗಾಟೋವರ್ ಅವರ ಪುತ್ರ.
ಮೇ 2ರಂದು ಫಲಿತಾಂಶ ಹೊರಬೀಳಲಿದೆ.

ಪ್ರಮುಖ ಸುದ್ದಿ :-   ನಾಳೆ ಫಿಲಿಪ್ಪೀನ್ಸ್‌ಗೆ ʼಬ್ರಹ್ಮೋಸ್ ಕ್ಷಿಪಣಿʼಗಳ ಮೊದಲ ಸೆಟ್ ನೀಡಲಿದೆ ಭಾರತ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement