ಐಪಿಎಲ್‌ಗೆ ಮುಹೂರ್ತ ಫಿಕ್ಸ್‌, ಏ೯ರಿಂದ ಆರಂಭ

ನವ ದೆಹಲಿ: ಕ್ರಿಕೆಟ್ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದ 2021ರ ಇಂಡಿಯನ್​ ಪ್ರೀಮಿಯರ್ ಲೀಗ್ (ಐಪಿಎಲ್)​ ಟೂರ್ನಿಗೆ ಮುಹೂರ್ತ ಫಿಕ್ಸ್ ಆಗಿದ್ದು, ಏಪ್ರಿಲ್​​ 9 ರಿಂದ ಪಂದ್ಯ ಆರಂಭಗೊಳ್ಳಲಿದೆ.
ಒಟ್ಟು ೬೦ ಪಂದ್ಯಗಳನ್ನೊಳಗೊಂಡ ಈ ಐಪಿಎಲ್‌ ಪಂದ್ಯಾವಳಿಯು ಏ.೯ರಿಂದ ಆರಂಭವಾಗಲಿದ್ದು, ಅಂತಿಮ ಪಂದ್ಯ ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ತಿಳಿಸಲಾಗಿದೆ.
ಪಂದ್ಯಾವಳಿಯು ಏಪ್ರಿಲ್​​ 9 ರಿಂದ ಮೇ 30ರ ವರೆಗೆ ಒಟ್ಟು ೫೨ ದಿನಗಳ ಕಾಲ ನಡೆಯಲಿದೆ.ಮುಂಬೈ, ಅಹಮದಾಬಾದ್​​, ಚೆನ್ನೈ, ಬೆಂಗಳೂರು, ನವ ದೆಹಲಿ, ಕೋಲ್ಕತ್ತಾ ನಗರಗಳಲ್ಲಿ ಪಂದ್ಯ ನಡೆಯಲಿದ್ದು, ಏ.೯ರಂದು ಮೊದಲ ಪಂದ್ಯ ಚೆನ್ನೈನಲ್ಲಿ ನಡೆಯಲಿದ್ದರೆ, ಮೇ 30 ರಂದು ಫೈನಲ್‌ ಹಣಾಹಣಿ ಅಹಮದಾಬಾದಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ.ಕಳೆದ ವರ್ಷ ಕೋವಿಡ್​ ನಿಂದಾಗಿ ಸಂಯುಕ್ತ ಅರಬ್ ಸಂಸ್ಥಾನದಲ್ಲಿ (ಯುಎಇ) ಐಪಿಎಲ್ ಟೂರ್ನಿ ನಡೆದಿತ್ತು. ಅದರಲ್ಲಿ ಮುಂಬೈ ಇಂಡಿಯನ್ಸ್​ ತಂಡ ಗೆಲುವು ಸಾಧಿಸಿತ್ತು.ಈ ವರ್ಷ ಭಾರತದಲ್ಲಿಯೇ ಕ್ರಿಕೆಟ್‌ ಪಂದ್ಯಾವಳಿ ನಡೆಸಲಾಗುತ್ತಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement