ಗಣರಾಜ್ಯೋತ್ಸವ ಹಿಂಸಾಚಾರ-೩೮ ಜನರ ಮೇಲೆ ಪ್ರಕರಣ ದಾಖಲು: ಸಚಿವ ಕೃಷ್ಣಾರೆಡ್ಡಿ

ನವದೆಹಲಿ: ಗಣರಾಜ್ಯೋತ್ಸವದಂದು ರೈತರ ಪ್ರತಿಭಟನೆ ಸಂದರ್ಭದಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಈವರೆಗೆ ೩೮ ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಜಿ.ಕೃಷ್ಣಾರೆಡ್ಡಿ ತಿಳಿಸಿದ್ದಾರೆ.
ಕೃಷಿ ಕಾನೂನುಗಳನ್ನು ವಿರೋಧಿಸಿ ದೆಹಲಿಯಲ್ಲಿ ನಡೆದ ಪ್ರತಿಭಟನೆ ವೇಳೆ ಸೈಬರ್‌ ಅಪರಾಧ ಸೇರಿದಂತೆ ಕಾನೂನು ಉಲ್ಲಂಘಿಸಿದ ೩೮ ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ ಎಂದರು.
ಪ್ರತಿಭಟನಾಕಾರರನ್ನು ತಡೆಯುವುದಕ್ಕಾಗಿ ರಸ್ತೆಗಳ ಮಧ್ಯೆ ಗುಂಡಿಗಳನ್ನು ತೆಗೆದಿಲ್ಲ, ಭದ್ರತೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದರು.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಅಮೆರಿಕ ನೇತೃತ್ವದ 25 ರಾಷ್ಟ್ರಗಳ ಜಾಗತಿಕ 6G ಒಕ್ಕೂಟಕ್ಕೆ ಭಾರತ ಸೇರ್ಪಡೆ

ನಿಮ್ಮ ಕಾಮೆಂಟ್ ಬರೆಯಿರಿ

advertisement