ಪಶ್ಚಿಮ ಬಂಗಾಳ: ಬಿಜೆಪಿ ತೆಕ್ಕೆಗೆ ಸೇರಿದ ಟಿಎಂಸಿ ಸಚಿವ, ಶಾಸಕ

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಟಿಎಂಸಿ ಟಿಕೇಟ್‌ ನಿರಾಕರಿಸಿದ ನಂತರ ಸಚಿವ ಬಚ್ಚು ಹನ್ಸದಾ ಹಾಗೂ ಶಾಸಕ ಗೌರಿಶಂಕರ ದತ್ತ ಬಿಜೆಪಿ ಪಾಳೆಯಕ್ಕೆ ಬಂದು ಸೇರಿದ್ದಾರೆ.
ಉತ್ತರ ಬಂಗಾಳ ಅಭಿವೃದ್ಧಿ ರಾಜ್ಯ ಸಚಿವ ಬಚ್ಚು ಹನ್ಸದಾ ಬಿಜೆಪಿ ರಾಜ್ಯ ಅಧ್ಯಕ್ಷ ದಿಲೀಪ್ ಘೋಷ್ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರಿದರು. ಅವರು ದಕ್ಷಿಣ ದಿನಾಜ್‌ಪುರ ಜಿಲ್ಲೆಯ ತಪನ್ ಸ್ಥಾನದಿಂದ ಎರಡು ಬಾರಿ ಶಾಸಕರಾಗಿದ್ದಾರೆ. ನಾಡಿಯಾದ ತೆಹಟ್ಟಾದ ಶಾಸಕ ಗೌರಿ ಶಂಕರ್ ದತ್ತಾ ಕೂಡ ಬಿಜೆಪಿಗೆ ಸೇರ್ಪಡೆಗೊಂಡರು. ಇದೇ ಸಂದರ್ಭದಲ್ಲಿ ಚಿತ್ರನಟರಾದ ರಾಜಶ್ರೀ ರಾಜ್‌ಬಶಿ ಹಾಗೂ ಬೋನಿ ಸೇನ್‌ಗುಪ್ತಾ ಅವರನ್ನು ಪಕ್ಷಕ್ಕೆ ಸೆಳೆದುಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿದೆ.
೨೦೧೯ರ ಲೋಕಸಭಾ ಚುನಾವಣೆಯ ನಂತರ ಒಟ್ಟು 26 ಟಿಎಂಸಿ ಶಾಸಕರು ಮತ್ತು ಇಬ್ಬರು ಸಂಸದರು ಬಿಜೆಪಿಗೆ ಸೇರಿದ್ದಾರೆ. ಆದರೆ, ಮಾಜಿ ರಾಜ್ಯ ಸಚಿವರಾದ ಸುವೆಂಡು ಅಧಿಕಾರಿ ಮತ್ತು ರಾಜೀಬ್ ಬ್ಯಾನರ್ಜಿ ಮತ್ತು ರಾಜ್ಯಸಭಾ ಸಂಸದ ದಿನೇಶ್ ತ್ರಿವೇದಿ ಅವರನ್ನು ಹೊರತುಪಡಿಸಿ ಯಾರೂ ವಿಧಾನಸಭೆ ಅಥವಾ ಸಂಸತ್ತಿನ ಸದಸ್ಯತ್ವವನ್ನು ಬಿಟ್ಟುಕೊಟ್ಟಿಲ್ಲ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ 2024 : 2ನೇ ಹಂತದ 88 ಕ್ಷೇತ್ರಗಳಲ್ಲಿ 63% ಮತದಾನ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement