
ಬೆಂಗಳೂರು: ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾ ರೂಪಾಂತರಿ ಕೊರೊನಾ ವೈರಸ್ ಪತ್ತೆಯಾಗಿದೆ.
ದುಬೈನಿಂದ ಬಂದಿದ್ದ ಶಿವಮೊಗ್ಗ ಮೂಲದ ೫೩ ವರ್ಷದ ವ್ಯಕ್ತಿಯೊಬ್ಬರಲ್ಲಿ ದಕ್ಷಿಣ ಆಫ್ರಿಕಾ ರೂಪಾಂತರಿ ವೈರಸ್ ಪತ್ತೆಯಾಗಿದ್ದು, ಇವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ದುಬೈನಿಂದ ಬಂದಿದ್ದ ಈ ವ್ಯಕ್ತಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಆರ್ಟಿಪಿಸಿಆರ್ ಪರೀಕ್ಷೆಗೆ ಒಳಪಟ್ಟು ಶಿವಮೊಗ್ಗಗೆ ತೆರಳಿದ್ದರು. ಇವರ ಗಂಟಲು ದ್ರವವನ್ನು ಜೆನೆಟಿಕ್ ಸೀಕ್ವೆನ್ಸ್ಗೆ ಒಳಪಡಿಸಿದಾಗ ದಕ್ಷಿಣ ಆಫ್ರಿಕಾದ ರೂಪಾಂತರಿ ವೈರಸ್ ಪತ್ತೆಯಾಗಿದೆ. ಇವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇವರಿಗೆ ರೋಗಲಕ್ಷಣಗಳಿಲ್ಲಈ ವ್ಯಕ್ತಿಯ ಜೊತೆ ೯ ಮಂದಿ ಸಂಪರ್ಕದಲ್ಲಿದ್ದು, ಇವರನ್ನೂ ಕ್ವಾರಂಟೈನ್ಗೆ ಒಳಪಡಿಸಲಾಗಿದೆ.
ಬೆಂಗಳೂರು ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಬ್ರಿಟನ್ನಿಂದ ಬಂದ ನಾಗರಿಕರಲ್ಲಿ ರೂಪಾಂತರಿ ವೈರಸ್ ಪತ್ತೆಯಾಗಿತ್ತು. ಆದರೆ,ದಕ್ಷಿಣ ಆಫ್ರಿಕಾದ ರೂಪಾಂತರಿ ವೈರಸ್ ಮೊದಲ ಬಾರಿಗೆ ಈಗ ಪತ್ತೆಯಾಗಿದೆ ಎಂದು ರಾಜ್ಯದ ಆರೋಗ್ಯ ಇಲಾಖೆ ಹೇಳಿದೆ.ರಾಜ್ಯದಲ್ಲಿ ಇದುವರೆಗೂ ೬೪ ಜನರಿಗೆ ಬ್ರಿಟನ್ ವೈರಸ್ ದೃಢಪಟ್ಟಿದೆ. ಇದು ದಕ್ಷಿಣ ಆಫ್ರಿಕಾ ರೂಪಾಂತರಿ ವೈರಸ್ ದೃಢಪಟ್ಟ ಮೊದಲ ಪ್ರಕರಣವಾಗಿದೆ.



ನಿಮ್ಮ ಕಾಮೆಂಟ್ ಬರೆಯಿರಿ