ಆಸ್ಪತ್ರೆಯಿಂದ ವೀಲ್‌ಚೇರ್‌ನಲ್ಲಿಯೇ ಹೊರಬಂದ ಮಮತಾ

ಕೊಲ್ಕತ್ತಾ: ಎರಡು ದಿನಗಳ ಹಿಂದೆ ನಂದಿಗ್ರಾಮದಲ್ಲಿ ಗಾಯಗೊಂಡು ಎಸ್‌ಎಸ್ ಕೆಎಂ ಆಸ್ಪತ್ರೆಗೆ ದಾಖಲಾಗಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶುಕ್ರವಾರ ಬಿಡುಗಡೆಯಾಗಿದ್ದಾರೆ.
ಆಸ್ಪತ್ರೆಯಿಂದ ವೀಲ್ ಚೇರ್ ನಲ್ಲಿಯೇಅವರು ಹೊರ ಬಂದಿದ್ದಾರೆ.
ಮಮತಾ ಬ್ಯಾನರ್ಜಿ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದ ಹಿನ್ನೆಲೆಯಲ್ಲಿ ಅವರನ್ನು ಶುಕ್ರವಾರ ಸಂಜೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಕಳೆದ ಬುಧವಾರ ನಂದಿಗ್ರಾಮದಲ್ಲಿ ನಡೆದ ಚುನಾವಣಾ ಪ್ರಚಾರದ ವೇಳೆ ಟಿಎಂಸಿ ಮುಖ್ಯಸ್ಥೆ ಮೇಲೆ ದಾಳಿ ನಡೆದಿದೆ ಎಂದು ಆರೋಪಿಸಲಾಗಿದ್ದು, ಘಟನೆಯಲ್ಲಿ ಮಮತಾ ಬ್ಯಾನರ್ಜಿ ಅವರ ಎಡಗಾಲಿನ ಹಿಮ್ಮಡಿ ಮತ್ತು ಬೆರಳುಗಳಿಗೆ ಗಂಭೀರ ಗಾಯಗಳಾಗಿದ್ದವು.
ನಂದಿಗ್ರಾಮದಲ್ಲಿ ಪ್ರಚಾರದ ವೇಳೆ ಕಾರಿನ ಬಳಿ ನನ್ನನ್ನು ನಾಲ್ಕೈದು ಮಂದಿ ತಳ್ಳಿದರು. ಆಗ ಗಾಯಗೊಂಡೆ. ಇದರ ಹಿಂದೆ ಸಂಚು ಇದೆ’ ಎಂದು ಮಮತಾ ಬ್ಯಾನರ್ಜಿ ಕಳೆದ ಬುಧವಾರ ಆರೋಪಿಸಿದ್ದರು. ಈ ಕುರಿತು ಟಿಎಂಸಿ ಚುನಾವಣೆ ಆಯೋಗಕ್ಕೂ ದೂರು ಸಲ್ಲಿಸಿತ್ತು. ಆದರೆ, ಬಿಜೆಪಿ ಹಾಗೂ ಎಡಪಕ್ಷಗಳು ಇದನ್ನು ಚುನಾವಣಾ ನಾಟಕ ಎಂದು ಹೇಳಿದ್ದವು. ಜೊತೆಗೆ ಅವರ ಭದ್ರತೆ ಉಸ್ತುವಾರಿಯನ್ನು ವರ್ಗಾವಣೆ ಮಾಡಿದ್ದರಿಂದ ಈ ಘಟನೆ ನಡೆದಿದೆ ಎಂದು ದೂರಿತ್ತು. ಚುನಾವಣಾ ಆಯೋಗ ಈ ಟಿಎಂಸಿ ಪತ್ರಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿತ್ತು ಆದರೆ ಘಟೆ ದುರದೃಷ್ಟಕರ ಎಂದು ಹೇಳಿತ್ತು. ಅಲ್ಲದೆ ಈ ಬಗ್ಗೆ ತನಿಖೆ ಮಾಡುವುದಾಗಿ ಹೇಳಿತ್ತು.
ಆದರೆ ಗುರುವಾರ ಬೆಳಗ್ಗೆ ಮಮತಾ ಬ್ಯಾನರ್ಜಿ ಅವರು ವಿಡಿಯೊ ಒಂದನ್ನು ಬಿಡುಗಡೆ ಮಾಡಿದ್ದು, ‘ನನಗೆ ತುಂಬಾ ನೋವಾಗಿದೆ. ಕೈ ಮತ್ತು ಕಾಲಿಗೆ ಗಾಯವಾಗಿದೆ.ಮೂಳೆಗಳೂ ಮುರಿದಿವೆ. ಎದೆನೋವು ಸಹ ಬಂದಿತ್ತು. ಕಾರಿನ ಬಾನೆಟ್ ಮೇಲೆ ನಿಂತು, ಜನರೊಂದಿಗೆ ಮಾತನಾಡುತ್ತಿದ್ದೆ. ಕೆಲವು ಜನರ ಗುಂಪು ನನ್ನ ಮೇಲೆ ಮುಗಿಬಿತ್ತು. ನನ್ನನ್ನು ನೆಲದತ್ತ ತಳ್ಳಲಾಯಿತು. ನನ್ನ ಕಾಲು ಸಿಲುಕಿಕೊಂಡಿತು’ ಎಂದಷ್ಟೇ ಹೇಳಿದ್ದರು.

ಪ್ರಮುಖ ಸುದ್ದಿ :-   ಎಎಪಿಗೆ ಆಘಾತ: ಪಕ್ಷದ ಏಕೈಕ ಲೋಕಸಭಾ ಸದಸ್ಯ ಬಿಜೆಪಿಗೆ ಸೇರ್ಪಡೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement