ನವ ದೆಹಲಿ: ಸಲಿಂಗಿ ಯುವತಿ ನೆರವಿಗೆ ದೆಹಲಿ ಹೈಕೋರ್ಟ್ ಬಂದಿದೆ.
ತನ್ನ ಇಚ್ಛೆಗೆ ವಿರುದ್ಧವಾಗಿ ತನ್ನ ಪೋಷಕರು ಮದುವೆ ಮಾಡಿದ್ದರಿಂದ ಸಲಿಂಗಿ ಮಹಿಳೆ ಆಕೆಯ ಕುಟುಂಬ ಸದಸ್ಯರು ಮತ್ತು ಅತ್ತೆ ಮಾವನಿಂದ ರಕ್ಷಣೆ ನೀಡುವಂತೆ ಕೋರಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮುಕ್ತಾ ಗುಪ್ತಾ ಅವರು ಲಜಪತ್ ನಗರ ಎಸ್ ಎಚ್.ಇ. ಈ ಮಹಿಳೆಗೆ ರಕ್ಷಣೆ ನೀಡುವಂತೆ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ.
ಅರ್ಜಿ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು ಹಾಗೂ ಸಂಬಂಧಪಟ್ಟ ಸಲಿಂಗಿ ಮಹಿಳೆಯು 23 ವರ್ಷದವಳಿದ್ದಾಳೆ ಎಂದು ಅರ್ಜಿದಾರರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಆಕೆಯ ಲೈಂಗಿಕ ಮನೋಭಾವ ಗೊತ್ತಿದ್ದರೂ ಆಕೆಯ ಪೋಷಕರು ಆಕೆಯನ್ನು ಬಲವಂತವಾಗಿ ಪುರಷನೊಂದಿಗೆ ಮದುವೆ ಮಾಡಿಸಿದ್ದಾರೆ ಎಂದು ಯುವತಿ ಕೋರ್ಟಿಗೆ ತಿಳಿಸಿದಳು.
ತಂದೆ, ಮಾವ ಮತ್ತು ಪತಿ ತನಗೆ ಬೆದರಿಕೆ ಒಡ್ಡದಂತೆ ಆದೇಶಿಸಬೇಕು ಎಂದು ಅರ್ಜಿದಾರರು ಕೋರ್ಟಿಗೆ ಮನವಿ ಮಾಡಿದ್ದಾರೆ, ಹಲವು ಬಾರಿ ವಿಚ್ಛೇದನ ಕ್ಕೆ ಅರ್ಜಿ ಸಲ್ಲಿಸಿದ್ದರೂ ಪತಿ ವಿಳಂಬ ಮಾಡುತ್ತಿದ್ದ ಎಂದೂ ಅರ್ಜಿದಾರರು ಕೋರ್ಟಿಗೆ ತಿಳಿಸಿದ್ದಾಳೆ. ಇದನ್ನೆಲ್ಲ ಗಮನಿಸಿದ ನ್ಯಾಯಾಲಯವು ಈ ಮಹಿಳೆಗೆ ರಕ್ಷಣೆ ನೀಡುವಂತೆ ಪೊಲೀಸರಿಗೆ ನಿರ್ದೇಶನ ನೀಡಿದೆ.
ನಿಮ್ಮ ಕಾಮೆಂಟ್ ಬರೆಯಿರಿ