ಒಂದೇ ದಿನದಲ್ಲಿ 20.54 ಲಕ್ಷ ಜನರಿಗೆ ಕೊರೊನಾ ಲಸಿಕೆ: ಭಾರತದ ಹೊಸ ದಾಖಲೆ

ನವದೆಹಲಿ: ಒಂದೇ ದಿನದಲ್ಲಿ 20 ಲಕ್ಷಕ್ಕೂ ಮೇಲ್ಪಟ್ಟು ಜನರಿಗೆ ಕೊರೊನಾ ನಿಯಂತ್ರಣ ಲಸಿಕೆ ಹಾಕುವ ಮೂಲಕ ಭಾರತ ದಾಖಲೆ ನಿರ್ಮಿಸಿದೆ.
ಏಳು ರಾಜ್ಯಗಳ 20.54 ಲಕ್ಷ ಜನರಿಗೆ ಕೊರೊನಾ ಲಸಿಕೆ ಹಾಕಲಾಗಿದೆ. ಇದರಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದ್ದು, 3.3 ಲಕ್ಷ ಜನರಿಗೆ ಲಸಿಕೆ ಹಾಕಿದೆ. ಉಳಿದಂತೆ ಮಹಾರಾಷ್ಟ್ರ , ಕೇರಳ, ಪಂಜಾಬ್, ಕರ್ನಾಟಕ , ಗುಜರಾತ್ , ತಮಿಳುನಾಡು , ಮಧ್ಯಪ್ರದೇಶ ರಾಜ್ಯಗಳು ಶೇ.87. 72ರಷ್ಟು ಲಸಿಕೆ ಗುರಿ ತಲುಪಿವೆ. ದೇಶದಲ್ಲಿ ಈವರೆಗೂ 2.82 ಕೋಟಿ ಜನರಿಗೆ ಲಸಿಕೆ ಹಾಕಲಾಗಿದೆ. ಕೊರೊನಾ ನಿಯಂತ್ರಣಕ್ಕೆ ಮೊದಲ ಹಂತದ ಲಸಿಕೆ ಮುಗಿದಿದ್ದು, ಈಗ ಎರಡನೆ ಹಂತದ ಲಸಿಕೆ ಆಂದೋಲನ ಚಾಲನೆಯಲ್ಲಿದೆ.ಜಾಗತಿಕ ಮಟ್ಟದಲ್ಲಿ ದಾಖಲೆ ನಿರ್ಮಿಸುವ ಒಂದೇ ದಿನ 20 ಲಕ್ಷ ಮಂದಿಗೆ ಲಸಿಕೆ ಹಾಕುವ ಆಂದೋಲನ ಎಲ್ಲಿಯೂ ನಡೆದಿಲ್ಲ. ಭಾರತ ಈ ಮೈಲುಗಲ್ಲು ಸ್ಥಾಪಿಸಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement