ಬಿಜೆಪಿ ವಿರುದ್ಧ ಬಂಗಾಳದಲ್ಲಿ ಬಿಕೆಯು ನಾಯಕ ಟಿಕಾಯತ್‌ ಪ್ರಚಾರ

ನವ ದೆಹಲಿ: ಭಾರತೀಯ ಕಿಸಾನ್ ಒಕ್ಕೂಟದ (ಬಿಕೆಯು) ನಾಯಕ ರಾಕೇಶ್ ಟಿಕಾಯತ್ ಟಿಎಂಸಿಗೆ ಬೆಂಬಲ ಸೂಚಿಸಿದ್ದು, ಚುನಾವಣಾ ಪ್ರಚಾರಕ್ಕೆ ದುಮುಖಿದ್ದಾರೆ.
ಶನಿವಾರ ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದಾರೆ. ಬಂಗಾಳ ರಾಜ್ಯದ ರೈತರ ಸಂಕಷ್ಟಗಳನ್ನ ಅರ್ಥಮಾಡಿಕೊಳ್ಳಲು ರಾಜ್ಯಕ್ಕೆ ಭೇಟಿ ನೀಡಿದ ರೈತ ನಾಯಕ, ನಂದಿಗ್ರಾಮ ಮತ್ತು ಕೊಲ್ಕತಾದಲ್ಲಿ ಬೃಹತ್ ‘ಮಹಾ ಪಂಚಾಯತ್’ಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇನ್ನು ಈ ‘ಮಹಾಪಂಚಾಯತ್’ಗಳ ಸಂದರ್ಭದಲ್ಲಿ, ರಾಕೇಶ ಟಿಕಾಯತ್ ಅವರು ನಂದಿಗ್ರಾಮದಿಂದ ಬಿಜೆಪಿ ವಿರುದ್ಧ ಪ್ರಚಾರ ನಡೆಸಲಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಬಿಕೆಯು ನಾಯಕ, ಈ ಪ್ರಶ್ನೆಗೆ ಸ್ವತಃ ಉತ್ತರ ನೀಡಿದ್ದಾರೆ. ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿಗೆ ಮತ ಹಾಕದಂತೆ ರೈತರಿಗೆ ಮನವಿ ಮಾಡುತ್ತೇನೆ’ ಎಂದು ಹೇಳಿದರು.
ಮಮತಾ ಬ್ಯಾನರ್ಜಿ ಅವರು ರೈತರ ಹೋರಾಟಕ್ಕೆ ಬಹಿರಂಗವಾಗಿ ಬೆಂಬಲ ನೀಡಿದ್ದರು. ಇತ್ತೀಚೆಗೆ ನಂದಿಗ್ರಾಮದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮ ಗಾಯಗೊಂಡ’ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಕಾಯಟ್ ತನಿಖೆಗೆ ಆಗ್ರಹಿಸಿದ್ದರು. ‘ಮತ್ತೊಬ್ಬ ಅಭ್ಯರ್ಥಿಗೆ ನೋವಾಗಬಾರದು. ಘಟನೆ ಬಗ್ಗೆ ತನಿಖೆಯಾಗಬೇಕು ಎಂದಿದ್ದರು.
ಪಶ್ಚಿಮ ಬಂಗಾಳದಲ್ಲಿ 8 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮಾರ್ಚ್ 27ರಿಂದ ಏಪ್ರಿಲ್ 29ರಂದು ಅಂತಿಮ ಹಂತದ ಮತದಾನ ನಡೆಯಲಿದೆ. ಇನ್ನು ಮೇ 2ರಂದು ಮತ ಎಣಿಕೆ ನಡೆಯಲಿದೆ.

ಪ್ರಮುಖ ಸುದ್ದಿ :-   ಎಟಿಎಂಗೆ ಹಣ ತುಂಬಿಸಲು ಬಂದಿದ್ದ ವಾಹನದಿಂದ 50 ಲಕ್ಷ ರೂ. ದರೋಡೆ

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement