ಕೇರಳ: ಪಾಲಕ್ಕಾಡ್‌ನಿಂದ ಮೆಟ್ರೋ ಮ್ಯಾನ್‌ ಸ್ಪರ್ಧೆ

ನವ ದೆಹಲಿ: ಏ.೬ರಂದು ನಡೆಯಲಿರುವ ಕೇರಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಎಂದೇ ಹೇಳಲಾಗುತ್ತಿರುವ ಮೆಟ್ರೋ ಮ್ಯಾನ್ ಖ್ಯಾತಿಯ ಇ. ಶ್ರೀಧರನ್ ಅವರಿಗೆ ಬಿಜೆಪಿ ಟಿಕೆಟ್ ನೀಡಲಾಗಿದೆ.
ಕಂಜಿರಪಲ್ಲಿ ವಿಧಾನಸಭೆ ಕ್ಷೇತ್ರದಿಂದ ಆಲ್ಫಾನ್ಸೊ, ತ್ರಿಶೂರ್ ಅಸೆಂಬ್ಲಿ ಕ್ಷೇತ್ರದಿಂದ ಸುರೇಶ್ ಗೋಪಿ ಸ್ಪರ್ಧಿಸಲಿದ್ದಾರೆ. ಶ್ರೀಧರನ್ ಕೇರಳದ ಪಾಲಕ್ಕಾಡ್ ಮತಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಕೇರಳ ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ಕುಮ್ಮನಮ್ ನೆಮೊಮ್ ವಿಧಾನಸಭೆ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ.ಡಾ. ಅಬ್ದುಲ್ ಸಲಾಂ ತಿರೂರು ಕ್ಷೇತ್ರದಿಂದ, ಮಾಜಿ ಡಿಜಿಪಿ ಜಾಕೊಬ್ ಥಾಮಸ್ ಅವರು ಇರಿಂಜಲಕುಡ ಮತ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಪಿಐಎಸ್‌ಎ 2025 ವರದಿ : ಜಾಗತಿಕವಾಗಿ ವಿದ್ಯಾರ್ಥಿಗಳ ಓದು, ಗಣಿತ ಸಾಮರ್ಥ್ಯದಲ್ಲಿ ಭಾರಿ ಕುಸಿತ ; ಎಐ ಬಳಕೆಯಿಂದ ಮತ್ತಷ್ಟು ಸಂಕೀರ್ಣ

ನಿಮ್ಮ ಕಾಮೆಂಟ್ ಬರೆಯಿರಿ

advertisement