ಚುನಾವಣೆಯಲ್ಲಿ ಟಿಕೆಟ್‌ ನಿರಾಕರಿಸಿದ್ದಕ್ಕೆ ತಲೆಬೋಳಿಸಿಕೊಂಡ ಕೇರಳ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ…!

ಚಿತ್ರ ಕೃಪೆ-ಇಂಟರ್ನೆಟ್

ತಿರುವನಂತಪುರಂ: ಕೇರಳದಲ್ಲಿ ವಿಕ್ಷಿಪ್ತ ಘಟನೆ ನಡೆದಿದೆ. ಅದೂ ಕೇರಳ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆಯಿಂದ. ಕೇರಳದ ವಿದಾನಸಭೆಗೆ ಪಕ್ಷವು ಅವರಿಗೆ ಟಿಕೆಟ್‌ ನಿರಾಕಿರಿಸಿದ್ದಕ್ಕೆ ಸಿಟ್ಟುಗೊಂಡಿರುವ ಅವರು, ಇದಕ್ಕೆ ಪ್ರತಿಭಟನಾರ್ಥವಾಗಿ ತಮ್ಮ ತಲೆ ಬೋಳಿಸಿಕೊಂಡಿದ್ದಾರೆ…!
ಕೇರಳ ಮಹಿಳಾ ಕಾಂಗ್ರೆಸ್ ಮುಖ್ಯಸ್ಥೆ ಲತಿಕಾ ಸುಭಾಷ್ ತಿರುವನಂತಪುರಂನ ತಮಗೆ ಟಿಕೆಟ್‌ ನೀಡದ ಕಾರಣ ಪಕ್ಷದ ಕಚೇರಿಯ ಮುಂದೆ ತಲೆ ಬೋಳಿಸಿಕೊಂಡಿದ್ದಾರೆ, ಅಷ್ಟೇ ಅಲ್ಲ, ತಮ್ಮ ಹುದ್ದೆಗೂ ರಾಜೀನಾಮೆ ನೀಡಿದ್ದಾರೆ.
ನಂತರ ಪ್ರತಿಕ್ರಿಯೆ ನೀಡಿದ ಅವರು, ನಾನು ಯಾವುದೇ ಪಕ್ಷ ಸೇರುತ್ತಿಲ್ಲ, ಆದರೆ ನನ್ನ ಹುದ್ದೆಗೆ ರಾಜೀನಾಮೆ ನೀಡಿದ್ದೇನೆ ಎಂದು ಹೇಳಿದ್ದಾರೆ.
ಕೇರಳ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಮುಲ್ಲಪಲ್ಲಿ ರಾಮಚಂದ್ರನ್ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸುತ್ತಿದ್ದಾಗ ಲತಿಕಾ ಸುಭಾಷ್ ಇಂದಿರಾ ಭವನದಲ್ಲಿದ್ದರು. ಅವರು ವೈಪೀನ್ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಇಚ್ಛಿಸಿದ್ದರು. ಆದರೆ ಪಟ್ಟಿಯಲ್ಲಿ ತಮ್ಮ ಹೆಸರಿಲ್ಲ ಎಂಬುದನ್ನು ಗೊತ್ತಾದ ತಕ್ಷಣವೇ ಪಕ್ಷದ ನಾಯಕರ ವಿರುದ್ಧ ಪ್ರತಿಭಟನಾರ್ಥವಾಗಿ ತಮ್ಮ ಕೂದಲು ಕತ್ತರಿಸಿಕೊಂಡು ತಲೆ ಬೋಳಿಸಿಕೊಂಡಿದ್ದಾರೆ.
ಆದರೆ ಅಭ್ಯರ್ಥಿಗಳ ಪಟ್ಟಿಯಲ್ಲಿ ಮಹಿಳೆಯರಿಗೆ ತಕ್ಕ ಸರಿಯಾದ ಪ್ರಾತಿನಿಧ್ಯ ಕೊಡಲಾಗಿಲ್ಲ. ಹೀಗಾಗಿ ಇದರ ವಿರುದ್ಧ ಅಸಮಾದಾನ ವ್ಯಕ್ತಪಡಿಸಲು ತಲೆ ಬೋಳಿಸಿಕೊಳ್ಳುತ್ತಿರುವುದಾಗಿ ಅವರು ಮಾಧ್ಯಮದವರ ಮುಂದೆ ಹೇಳಿಕೊಂಡಿದ್ದಾರೆ.

ಪ್ರಮುಖ ಸುದ್ದಿ :-   ಮೋದಿ, ರಾಹುಲ್ ಗಾಂಧಿಯಿಂದ ನೀತಿ ಸಂಹಿತೆ ಉಲ್ಲಂಘನೆ ಆರೋಪ: ಉತ್ತರ ನೀಡಲು ಚುನಾವಣಾ ಆಯೋಗ ಸೂಚನೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement