ಹೊಸ ಗೆಟಪ್ಪಿನ ಧೋನಿ ಫೋಟೋ ಭಾರೀ ವೈರಲ್..!

ನವ ದೆಹಲಿ:ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಈಗ ತಮ್ಮ ಫೋಟೋ ಮೂಲಕ ಸುದ್ದಿಯಾಗಿದ್ದಾರೆ.ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.
ಶನಿವಾರ, ಇಂಡಿಯನ್ ಪ್ರಿಮಿಯರ್ ಲೀಗ್‌ನ ಅಧಿಕೃತ ಪ್ರಸಾರಕರಾದ ಸ್ಟಾರ್ ಸ್ಪೋರ್ಟ್ಸ್ ಚಾನೆಲ್‌ ಎಂ.ಎಸ್. ಧೋನಿ ಸನ್ಯಾಸಿ ತರಹದ ರೂಪದಲ್ಲಿ ಕ್ಲೀನ್-ಶೇವ್ ಆಗಿರುವ ಹೊಸ ಫೋಟೋ ಪೋಸ್ಟ್ ಮಾಡಿದೆ. ಈ ಫೋಟೋ ಭಾರೀ ವೈರಲ್ ಆಗಿದ್ದು ನೆಟ್ಟಿಗರು ಧೋನಿಯ ಈ ಹೊಸ ಫೋಟೋಕ್ಕೆ ಲೈಕ್‌ ಮಾಡಿದ್ದಾರೆ.
ಎಂ.ಎಸ್. ಧೋನಿ ತಮ್ಮ ವೃತ್ತಿಯ ಆರಂಭದಲ್ಲಿ ಉದ್ದ ಕೂದಲು ಬಿಡುವುದರ ಮೂಲಕ ಟ್ರೆಂಡ್ ಸೆಟ್‌ ಮಾಡಿದ್ದರು. ತನ್ನ ಅಂತರರಾಷ್ಟ್ರೀಯ ವೃತ್ತಿಜೀವನದ ಕೊನೆಯ ವರ್ಷಗಳಲ್ಲಿ ಕೂದಲನ್ನು ಕಟ್‌ ಮಾಡಿ ಕ್ಲೀನ್-ಶೇವ್ ಲುಕ್‌ಗಳಲ್ಲಿ ಕಾಣಿಸಿಕೊಂಡಿದ್ದರು.ಈಗ ಸನ್ಯಾಸಿ ತರಹದ ಗೆಟ್‌ಅಪ್‌ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ಟ್ರೆಂಡ್‌ಗೆ ಕಾರಣವಾಗುತ್ತಿದೆ.

4 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement