ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿರುವ ರಾಜ್ಯ ಮಹಿಳಾ ಆಯೋಗ, ಸಂತ್ರಸ್ತ ಯುವತಿಗೆ ರಕ್ಷಣೆ ನೀಡಲಾಗುವುದು ಎಂದು ಹೇಳಿದೆ.
ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮಿಳಾ ನಾಯ್ಡು ಈ ಕುರಿತು ಮಾತನಾಡಿ, ದೂರು ದಾಖಲಾದ ಬಳಿಕ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಯುವತಿ ತನಗೆ ಹಾಗೂ ತನ್ನ ಕುಟುಂಬಕ್ಕೆ ರಕ್ಷಣೆ ನೀಡುವಂತೆ ಕೋರಿದ್ದಾಳೆ. ಅಲ್ಲದೇ ಸಿಡಿ ಪ್ರಕರಣದ ಬಳಿಕ ತಮಗಾಗುತ್ತಿರುವ ತೊಂದರೆ, ಬೆದರಿಕೆ ಹಾಗೂ ಆತ್ಮಹತ್ಯೆ ಯತ್ನದ ಬಗ್ಗೆಯೂ ವಿಡಿಯೋದಲ್ಲಿ ಹೇಳಿಕೊಂಡಿದ್ದಾಳೆ. ಹೀಗಾಗಿ ಮಹಿಳಾ ಆಯೋಗವು ಯುವತಿಗೆ ರಕ್ಷಣೆ ನೀಡಲಿದೆ ಎಂದು ತಿಳಿಸಿದರು.
ಈ ವಿಷಯದ ಕುರಿತು ಬೆಂಗಲೂರು ಪೊಲೀಸ್ ಆಯುಕ್ತರ ಜೊತೆ ಮಾತನಾಡಿದ್ದೇನೆ ಎಂದು ಹೇಳಿದ ಪ್ರಮಿಳಾ ನಾಯ್ಡು, ಯುವತಿ ಹಾಗೂ ಯುವತಿ ಕುಟುಂಬದವರು ಧೃತಿಗೆಡುವ ಅಗತ್ಯವಿಲ್ಲ, ಯುವತಿ ಹಾಗೂ ಅವಳ ಕುಟುಂಬಕ್ಕೆ ರಕ್ಷಣೆ ನೀಡಲಾಗುವುದು ಎಂದು ಹೇಳಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ