ಈ ವರ್ಷ ಒಂದೇ ಬಾರಿ ʼನೀಟ್‌ ಪರೀಕ್ಷೆʼ

ನವ ದೆಹಲಿ: 2021ರ ಪರೀಕ್ಷೆಯನ್ನ ನಡೆಸಲು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್ ಟಿಎ) ದಿನಾಂಕವನ್ನ ಪ್ರಕಟಿಸಿದ ಕೆಲವೇ ದಿನಗಳಲ್ಲಿ, ಈ ವರ್ಷ ಕೇವಲ ಒಂದು ಬಾರಿ ಮಾತ್ರ ನೀಟ್‌ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುವುದು ಎಂದು ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಸೋಮವಾರ ಹೇಳಿದ್ದಾರೆ.

ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿರುವ ಪೋಖ್ರಿಯಾಲ್, ‘2021ರಲ್ಲಿ ನೀಟ್ (ಯುಜಿ) ಅನ್ನು ಎನ್ ಟಿಎ ಯಿಂದ ಒಂದು ಬಾರಿ ಮಾತ್ರ ನಡೆಸಲಾಗುತ್ತದೆ. ಈ ಸಂಬಂಧ ಯಾವುದೇ ಮನವಿ ಪತ್ರ ಬಂದಿಲ್ಲ ಎಂದು ಎನ್ ಟಿಎ ಮಾಹಿತಿ ನೀಡಿದೆ’ ಎಂದು ಹೇಳಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದೊಂದಿಗೆ ಸಮಾಲೋಚಿಸಿ, ವೈದ್ಯಕೀಯ ವಿಜ್ಞಾನಗಳ ಸ್ನಾತಕೋತ್ತಕ ಕಾರ್ಯಕ್ರಮದ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್) ಅನ್ನು ಶಿಕ್ಷಣ ಸಚಿವಾಲಯದ ಅಡಿಯಲ್ಲಿ ಎನ್ ಟಿಎ ನಡೆಸುತ್ತದೆ ಎಂದು ಸಚಿವರು ಪುನರುಚ್ಚರಿಸಿದರು.
ಕಳೆದ ವಾರ ಎನ್ ಟಿಎ ಪದವಿ ಪೂರ್ವ ವೈದ್ಯಕೀಯ ಕೋರ್ಸ್ʼಗಳ ಪ್ರವೇಶಕ್ಕಾಗಿ ನೀಟ್ ಪರೀಕ್ಷೆಯನ್ನ ಆಗಸ್ಟ್ 1ರಂದು ನಡೆಸುವುದಾಗಿ ಪ್ರಕಟಿಸಿತ್ತು.

ಪ್ರಮುಖ ಸುದ್ದಿ :-   ಕೋಟಕ್‌ ಮಹೀಂದ್ರಾ ಬ್ಯಾಂಕಿಗೆ ಆರ್‌ಬಿಐ ನಿರ್ಬಂಧ : ಹೊಸ ಗ್ರಾಹಕರ ಆನ್‌ಲೈನ್‌ ಸೇರ್ಪಡೆ, ಹೊಸ ಕ್ರೆಡಿಟ್‌ ಕಾರ್ಡ್‌ ವಿತರಣೆಗೆ ಬ್ರೇಕ್‌

‘ನೀಟ್ (ಯುಜಿ) – 2021 ರ ಪರೀಕ್ಷೆಯನ್ನ ಆಗಸ್ಟ್ 01 (ಭಾನುವಾರ) ಪೆನ್ ಮತ್ತು ಪೇಪರ್ ಮೋಡ್ ಮೂಲಕ ಹಿಂದಿ ಮತ್ತು ಇಂಗ್ಲಿಷ್ ಸೇರಿದಂತೆ 11 ಭಾಷೆಗಳಲ್ಲಿ ನಡೆಸಲಾಗುವುದು’ ಎಂದು ಎನ್ ಟಿಎ ಪ್ರಕಟಣೆ ತಿಳಿಸಿದೆ.

ಎಂಬಿಬಿಎಸ್, ಬಿಡಿಎಸ್, ಬಿಎಎಂಎಸ್, ಬಿಎಂಎಸ್, ಬಿಎಚ್ ಎಂಎಸ್ ಕೋರ್ಸ್ʼಗಳ ಪ್ರವೇಶಕ್ಕೆ ಎನ್ ಟಿಎ ಯಿಂದ ನೀಟ್ ಪರೀಕ್ಷೆ ನಡೆಸಲಾಗುತ್ತದೆ.

 

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement