ಏಕತಾ ಪ್ರತಿಮೆಗೆ ೫೦ ಲಕ್ಷಕ್ಕೂ ಹೆಚ್ಚು ಪ್ರವಾಸಿಗರ ಭೇಟಿ

ಅಹಮದಾಬಾದ್: ಗುಜರಾತ್‍ನ ನರ್ಮದಾ ಜಿಲ್ಲಾಯ ಕೆವಾಡಿಯಾದಲ್ಲಿ ಇರುವ ಏಕತಾ ಪ್ರತಿಮೆ ಉದ್ಘಾಟನೆಯ ನಂತರ ಈವರೆಗೆ 50 ಲಕ್ಷ ಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದಾರೆ.
ಈ ಪ್ರತಿಮೆ ಅಂತರರಾಷ್ಟ್ರೀಯ ಪ್ರವಾಸಿಗರನ್ನೂಸೆಳೆಯುತ್ತಿದ್ದು, ಎಲ್ಲಾ ವಯಸ್ಸಿನವರಿಗೆ ಆಕರ್ಷಣೆ ಕೇಂದ್ರಬಿಂದುವಾಗಿದೆ ಎಂದು ಗುಜರಾತ್‍ನ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಅರಣ್ಯ ಮತ್ತು ಪರಿಸರ) ರಾಜೀವ್ ಗುಪ್ತಾ ಟ್ವೀಟ್ ಮೂಲಕ ತಿಳಿಸಿದ್ದಾರೆ.
ವಿಶ್ವದ ಅತಿ ಎತ್ತರದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 182 ಮೀಟರ್ ಎತ್ತರದ ಪ್ರತಿಮೆಯನ್ನು ಕೆವಾಡಿಯಾದ ಸರ್ದಾರ್ ಸರೋವರ್ ಅಣೆಕಟ್ಟಿನ ಬಳಿ ಪ್ರಧಾನಿ ನರೇಂದ್ರ ಮೋದಿ ಅಕ್ಟೋಬರ್ 31, 2018 ರಂದು ಉದ್ಘಾಟಿಸಿದ್ದರು.
ಕೆವಾಡಿಯಾಕ್ಕೆ ರೈಲು ಮತ್ತು ವಾಯು ಸಂಪರ್ಕವನ್ನು ಸುಧಾರಿಸಲು, ಸರ್ಕಾರ ಇತ್ತೀಚೆಗೆ ದೇಶದ ಕೆಲವು ಭಾಗಗಳು ಮತ್ತು ಅಹಮದಾಬಾದ್‍ನಿಂದ ಎಂಟು ಹೊಸ ರೈಲುಗಳನ್ನು ಸೇರಿಸಿದ್ದು, ಪರಿಣಾಮ ಪ್ರವಾಸಿ ತಾಣಕ್ಕೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿದೆ. ಸಮೀಕ್ಷೆಯ ಪ್ರಕಾರ ಅಮೆರಿಕದ ಲಿಬರ್ಟಿ ಪ್ರತಿಮೆ ವೀಕ್ಷಕರಿಗಿಂತ ಹೆಚ್ಚು ಜನ ಕೆವಾಡಿಯಾಕ್ಕೆ ಭೇಟಿ ನೀಡಲಿದ್ದಾರೆ ಎಂದು ತಿಳಿಸಿದೆ

ಪ್ರಮುಖ ಸುದ್ದಿ :-   ನಾಳೆ ಫಿಲಿಪ್ಪೀನ್ಸ್‌ಗೆ ʼಬ್ರಹ್ಮೋಸ್ ಕ್ಷಿಪಣಿʼಗಳ ಮೊದಲ ಸೆಟ್ ನೀಡಲಿದೆ ಭಾರತ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement