ತಂದೆ ಶವಸಂಸ್ಕಾರಕ್ಕೆ ಹೂವು ತರಲು ಹೋದ ಮಗನನ್ನೂ ಬಿಡದ ವಿಧಿ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲೊಂದು ಹೃದಯ ವಿದ್ರಾವಕ ಘಟನೆ ನಡೆದಿದೆ. ತಂದೆಯ ಶವ ಸಂಸ್ಕಾರಕ್ಕೆ ಹೂವು ತರಲೆಂದು ಹೋಗಿದ್ದ ಮಗನೂ ಅಪಘಾತದಲ್ಲಿ ಮೃತಪಟ್ಟ ಹೃದಯ ವಿದ್ರಾವಕ ಘಟನೆ ನಡೆದಿದ್ದು ಈ ಘಟನೆಗೆ ಸ್ಥಳೀಯ ಜನ ಮಮ್ಮಲಮರುಗಿದ್ದಾರೆ.
ಶಿರಸಿ ನಗರದ ಎಸ್‌ಬಿಐ ವೃತ್ತದ ಬಳಿ ಈ ದುರ್ಘಟನೆ ನಡೆದಿದ್ದು, ಸಾರಿಗೆ ಸಂಸ್ಥೆಯ ಬಸ್ ಹಾಗೂ ದ್ವಿಚಕ್ರ ವಾಹನದ ನಡುವೆ ಮುಖಾಮುಖಿ ಡಿಕ್ಕಿಯಲ್ಲಿ ದ್ವಿಚಕ್ರ ವಾಹನದ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಶಿರಸಿಯ ಗಣೇಶ ನಗರದ ರವಿಚಂದ್ರ ವಡ್ಡರ್ ಸುನೀಲ ಇಂದೂರ ಎಂಬವರನ್ನು ಮೃತಪಟ್ಟವರು ಎಂದು ಗುರುತಿಸಲಾಗಿದೆ. ರವಿಚಂದ್ರ ಅವರ ತಂದೆ ಹನುಮಂತಪ್ಪ ಸೋಮವಾರ ಬೆಳಗಿನ ಜಾವ ಮೃತಪಟ್ಟಿದ್ದು, ಹೀಗಾಗಿ ತಂದೆಯ ಶವಸಂಸ್ಕಾರಕ್ಕೆ ಹೂ ತರಲು ರವಿಚಂದ್ರ ಮತ್ತೊಬ್ಬರ ಜೊತೆಗೆ ಮಾರುಕಟ್ಟೆಗೆ ಹೊರಟಿದ್ದರು. ಈ ವೇಳೆ ಇನ್ನೊಂದು ರಸ್ತೆಯಿಂದ ಬಂದ ಬಸ್ ಹಾಗೂ ಇವರಿದ್ದ ಬೈಕ್‌ ನಡುವೆ ಮುಖಾಮುಖಿಯಾಗಿ ಡಿಕ್ಕಿ ಸಂಭವಿಸಿದೆ. ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಬಸ್ ಅಡಿಗೆ ಸಿಲುಕಿ ಇಬ್ಬರು ಮೃತಪಟ್ಟಿದ್ದಾರೆ. ಕೆಲಕಾಲ ಸ್ಥಳದಲ್ಲಿ ಗೊಂದಲದ ವಾತಾವರಣ ಉಂಟಾಗಿತ್ತು. ತಂದೆ ಹಾಗೂ ಮಗನನ್ನು ಒಂದೇ ದಿನ ಕಳೆದುಕೊಂಡ ಕುಟುಂಬಸ್ಥರು ಹಾಗೂ ಬಂಧು ಬಳಗದವರ ಆಕ್ರಂದನ ಮುಗಿಲು ಮುಟ್ಟಿತ್ತು.

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement