ನಟ ಕಮಲ್ ಹಾಸನ್ ಕಾರಿನ ಮೇಲೆ ದಾಳಿಗೆ ಯತ್ನ

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆ ತುರುಸು ಪಡೆಯುತ್ತಿರುವಾಗಲೇ ಮಕ್ಕಳ ನೀಧಿ ಮಯ್ಯಂ ಪಕ್ಷದ ಮುಖ್ಯಸ್ಥ ಹಾಗೂ ಖ್ಯಾತ ನಟ ಕಮಲ್ ಹಾಸನ್ ಅವರ ಕಾರಿನ ಮೇಲೆ ಅಪರಿಚಿತರು ದಾಳಿ ನಡೆಸಿದ ಘಟನೆ ಭಾನುವಾರ ರಾತ್ರಿ ನಡೆದಿದೆ.
ತಮಿಳುನಾಡಿನ ಕಾಂಚಿಪುರಂ ಜಿಲ್ಲೆಯ ಗಾಂಧಿ ರಸ್ತೆಯಲ್ಲಿ ಕಮಲ್ ಹಾಸನ್ ಪ್ರಯಾಣಿಸುತ್ತಿದ್ದ ಕಾರನ್ನು ಅಡ್ಡಗಟ್ಟಿದ ಅಪರಿಚಿತರು ಕಾರಿನ ಗ್ಲಾಸ್ ಒಡೆಯಲು ಪ್ರಯತ್ನಿಸಿದ್ದಾರೆ. ಆದರೆ ಕಾರಿಗೆ ಯಾವುದೇ ರೀತಿ ಧಕ್ಕೆ ಆಗಿಲ್ಲ.
ಭಾನುವಾರವಷ್ಟೇ ಕಮಲ್ ಹಾಸನ್ ಅವರು ಕಾಂಚಿಪುರಂ ವಿಧಾನಸಭಾ ಕ್ಷೇತ್ರದ ಮಕ್ಕಳ ನೀಧಿ ಮಯ್ಯಂ ಪಕ್ಷದ ಅಭ್ಯರ್ಥಿ ಎಸ್ ಕೆಪಿ ಗೋಪಿನಾಥ್ ಪರವಾಗಿ ಪ್ರಚಾರ ನಡೆಸಿದ್ದರು. ಸಾರ್ವಜನಿಕ ಸಭೆ ಮುಗಿಸಿ ಬರುವಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ವಿಷ್ಣುಕಾಂಚಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

 

 

 

0 / 5. 0

ಪ್ರಮುಖ ಸುದ್ದಿ :-   ಭಾರತದ ವ್ಯಾಪಕ ಸಂಪರ್ಕ ಬಳಸಿ ಯುದ್ಧದ ಹಾದಿಯಲ್ಲಿರುವ ದೇಶಗಳನ್ನು ಸಂವಾದಕ್ಕೆ ಕರೆತನ್ನಿ : ಪ್ರಧಾನಿ ಮೋದಿಗೆ ಇರಾನ್ ಅಧ್ಯಕ್ಷರ ಮನವಿ

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement